More

    ಪ್ರತಿ ಹಳ್ಳಿಯಲ್ಲೂ ರಾಜ್ಯೋತ್ಸವ ಆಚರಿಸಲಿ

    ಸಕಲೇಶಪುರ: ಕನ್ನಡವನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮಗಳಲ್ಲೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

    ತಾಲೂಕಿನ ಹೆತ್ತೂರು ಗ್ರಾಮದಲ್ಲಿ ಗುರುವಾರ ಹೆತ್ತೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಂಗ್ಲಭಾಷೆಯ ವ್ಯಾಮೋಹಕ್ಕೆ ಸಿಲುಕಿ ಇಂದು ಕನ್ನಡ ಅವನತಿ ಹಂತ ತಲುಪುತ್ತಿದೆ. ಕನ್ನಡದ ಹಲವು ಪದಗಳ ಪರಿಚಯ ಇಂದಿನ ಹಲವು ಕನ್ನಡ ಸಾಹಿತಿಗಳಿಗೆ ಅರಿವಿಲ್ಲದಾಗಿದೆ. ಪ್ರಪಂಚದಲ್ಲೇ ಅತ್ಯಂತ ಸರಳ ಪದಗುಚ್ಛಗಳನ್ನು ಹೊಂದಿರುವ ಕನ್ನಡ ಭಾಷೆ ಬಗ್ಗೆ ಇತ್ತೀಚಿನ ಯುವ ಜನಾಂಗ ಅತ್ಯಂತ ಅನಾದರ ಹೊಂದಿರುವುದು ಬೇಸರದ ಸಂಗತಿ. ಎಲ್ಲ ಭಾಷೆಗಳನ್ನು ಗೌರವಿಸಿ ಕನ್ನಡ ಭಾಷೆಯನ್ನು ಪ್ರೀತಿಸಿ ಎಂಬ ನುಡಿಗಟ್ಟನ್ನು ಮನಸ್ಸಿನಲ್ಲಿಟ್ಟಿಕೊಳ್ಳುವುದು ಉತ್ತಮ ಎಂದರು.

    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೊ.ಮಲ್ಲೇಶ್‌ಗೌಡ ಮಾತನಾಡಿ, ಕನ್ನಡ ಅತ್ಯಂತ ಸರಳ ನುಡಿಗಟ್ಟುಗಳನ್ನು ಹೊಂದಿರುವ ಭಾಷೆಯಾಗಿದೆ. ಆಂಗ್ಲಬಾಷೆ ಉಚ್ಚಾರಣೆಯಿಂದ ನಮ್ಮ ಸ್ಥಾನ ಉತ್ತಮಗೊಳ್ಳಲಿದೆ ಎಂಬ ಭಾವನೆಯಿಂದ ಹೊರ ಬರುವ ಅಗತ್ಯತೆ ಜನಸಾಮಾನ್ಯರಲ್ಲಿ ನೆಲೆಸಿದಾಗ ಮಾತ್ರ ಕನ್ನಡ ಉತ್ತುಂಗಕ್ಕೆ ಏರಲಿದೆ ಎಂದು ಹೇಳಿದರು. ಹೆತ್ತೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಪಿ.ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕು ಅಧ್ಯಕ್ಷೆ ಶಾರದಾ ಗುರುಮೂರ್ತಿ, ಸುಜಲ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಲೋಕೇಶ್, ಪತ್ರಕರ್ತ ಹೆತ್ತೂರು ನಾಗರಾಜ್ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts