More

    ರಾಹುಲ್ ಪ್ರಧಾನಿಯಾಗಲಿ; ಖರ್ಗೆ ಹೆಸರು ಚರ್ಚೆಯಲ್ಲಿರುವಾಗಲೇ ನಿಲುವು ಹೊರಹಾಕಿದ ಸಿದ್ದು!

    ಬೆಂಗಳೂರು: ಐಎನ್‌ಡಿಐಎ ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೆಸರು ಚಲಾವಣೆಗೆ ಬಂದು ದೇಶಾದ್ಯಂತ ವ್ಯಾಪಕ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂದು ಪಕ್ಷದ ವೇದಿಕೆಯಲ್ಲಿ ಅಭಿಪ್ರಾಯ ಹೊರಹಾಕಿದ್ದಾರೆ.
    ಕೆಲವು ವಾರಗಳ ಹಿಂದೆ ಖರ್ಗೆಯವರ ಹೆಸರು ಪ್ರಧಾನಿ ಅಭ್ಯರ್ಥಿಗೆ ಬಿಂಬಿತವಾಗುತ್ತಿದ್ದಂತೆ ಪಕ್ಷದ ರಾಜ್ಯದ ಬಹುತೇಕ ಮುಖಂಡರು ಸ್ವಾಗತಿಸಿ, ಬೆಂಬಲ ವ್ಯಕ್ತಪಡಿಸಿದ್ದರು.
    ಈ ನಡುವೆ ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷದ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ದೇಶದಲ್ಲಿ ಬದಲಾವಣೆ ತರಬೇಕು. ಆ ಬದಲಾವಣೆ ತರುವ ಯಜ್ಞದಲ್ಲಿ ನಾವಿದ್ದೇವೆ. ಮೋದಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ದೇಶದಲ್ಲಿ ಇನ್ನೂ ಉಳಿದಿರುವ ಸಮಸ್ಯೆಗಳಿಗೆ ಪರಿಹಾರ ಕೊಡುವ ಶಕ್ತಿ ಇರುವುದು ಕಾಂಗ್ರೆಸ್‌ಗೆ ಮಾತ್ರ,
    ರಾಹುಲ್ ಗಾಂಧಿ ಈ ದೇಶದ ಪ್ರಧಾನಿ ಆಗಬೇಕು’ ಎಂದರು.
    ‘ಪಾಪ ಅವರು ಭಾರತ್ ಜೋಡೋ ಮಾಡುತ್ತಿದ್ದಾರೆ. ಈ ದೇಶದಲ್ಲಿ ಭಾರತ್ ಜೋಡೋ ಯಾರೂ ಮಾಡಿರಲಿಲ್ಲ, ಈಗ ಎರಡನೇ ಹಂತದ ಭಾರತ್ ಜೋಡೋ ಪ್ರಾರಂಭ ಮಾಡುತ್ತಿದ್ದಾರೆ. ಇನ್ನೂ ಸಹ ದೇಶದ ಹಿಂದುಳಿದ, ದಲಿತರಿಗೆ, ಮಹಿಳೆಯರಿಗೆ ನ್ಯಾಯ ಸಿಕ್ಕಿಲ್ಲ. ನ್ಯಾಯ ಸಿಗಬೇಕೆಂದು ಜಾಗೃತಿ ಮೂಡಿಸಲು, ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ರಾಹುಲ್ ಪಾದಯಾತ್ರೆ ಮಾಡುತ್ತಿದ್ದಾರೆ. ಅಂತವರ ಕೈಗೆ ಅಧಿಕಾರ ಹೋಗಬೇಕೋ ಅಥವಾ ನರೇಂದ್ರ ಮೋದಿಗೆ ಅಧಿಕಾರ ಹೋಗಬೇಕೋ? ಈ ನಿಟ್ಟಿನಲ್ಲಿ ನಾವೆಲ್ಲ ಪ್ರಯತ್ನ ಮಾಡಬೇಕು’ ಎಂದು ಕರೆಕೊಟ್ಟರು.
    ನಮ್ಮಲ್ಲಿರುವ ಭಿನ್ನಾಭಿಪ್ರಾಯ ಮರೆತು ದೇಶಕ್ಕಾಗಿ, ಸಂವಿಧಾನ ರಕ್ಷಣೆಗಾಗಿ ಬಹು ಸಂಸ್ಕೃತಿ ಉಳಿಸಲು ದೇಶದ ಸಾರ್ವಭೌಮತ್ವ ಎತ್ತಿ ಹಿಡಿಯಲು ನ್ಯಾಯ ಕೊಡಲು ನಾವೆಲ್ಲರೂ ಹೋರಾಟ ಮಾಡಿ ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.
    ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಪಕ್ಷದ ನಿಲುವು ಏನಾಗಿರಬೇಕು? ಸಾಫ್ಟ್​ ಹಿಂದುತ್ವ ತೋರಬೇಕೇ? ಎಂದು ಕಾಂಗ್ರೆಸ್‌ನೊಳಗೆ ಚರ್ಚೆಯಾಗುತ್ತಿರುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಲೋಚನೆಯನ್ನು ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ.
    ಹಿಂದು, ಹಿಂದುತ್ವ ಬೇರೆ ಬೇರೆ. ಅಲ್ಲದೇ ಸ್‌ಟಾ ಹಿಂದುತ್ವ ಅಂದರೇನು? ಸ್‌ಟಾ ಅಂತೆ ಹಾರ್ಡ್ ಅಂತೆ ಎಂದ ವಿಶ್ಲೇಷಿಸಿದ ಅವರು, ನಾವು ನಮ್ಮ ಊರುಗಳಲ್ಲಿ ರಾಮಮಂದಿರ ಕಟ್ಟಿಲ್ಲವೇ, ರಾಮನ ಪೂಜೆ ಮಾಡಿಲ್ಲವೇ. ರಾಮನ ಭಜನೆ ಮಾಡುವುದಿಲ್ಲವೇ ಎಂದರು. ಜತೆಗೆ ತಾವು ತಮ್ಮ ಗ್ರಾಮದಲ್ಲಿ ಧನುರ್ಮಾಸದಲ್ಲಿ ರಾಮನ ಭಜನೆ ಮಾಡಿದ್ದನ್ನು ನೆನಪಿಸಿಕೊಂಡರು.
    ಅವರು (ಬಿಜೆಪಿಯವರು) ಮಾತ್ರ ಹಿಂದು, ನಾವೆಲ್ಲ ಹಿಂದುಗಳಲ್ಲವೇ? ಎಂದು ಕುಟುಕಿದ ಅವರು ಈ ದೇಶದಲ್ಲಿ ದೇಶದ ಬದಲಾವಣೆ ಗೋಸ್ಕರ ನಾವೆಲ್ಲ ಒಟ್ಟಾಗಿ ಸಾಗಬೇಕು. ಎಲ್ಲರೂ ಮನುಷ್ಯರಾಗಿ ಬಾಳಬೇಕು, ಸಮಾನ ಅವಕಾಶ ಇರಬೇಕು, ಇದು ಕಾಂಗ್ರೆಸ್‌ನ ಸಿದ್ಧಾಂತ. ಈ ಸಿದ್ಧಾಂತಕ್ಕೆ ಎಲ್ಲರೂ ಬದ್ಧರಾಗಿರಬೇಕು. ಈ ಬದ್ಧತೆಯಿಂದ ಮುನ್ನುಗ್ಗೋಣ ದೇಶ ಬದಲಾಯಿಸಲು ಪ್ರಯತ್ನ ಮಾಡೋಣ, ಕಾಂಗ್ರೆಸ್ ಅಧಿಕಾರಕ್ಕೆ ತರಲು ಪ್ರಯತ್ನ ಮಾಡೋಣ, ರಾಹುಲ್ ಪ್ರಧಾನಿ ಮಾಡಲು ಪ್ರಯತ್ನ ಮಾಡೋಣ ಎಂದು ಕರೆಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts