More

    ಪತ್ರಿಕೆಗಳು ಇನ್ನಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಹೊರತರಲಿ

    ಕಡೂರು: ಸ್ವಾರಸ್ಯಕರ ಸುದ್ದಿಗಳನ್ನು ಪ್ರಕಟಿಸುವ ಮೂಲಕ ನಾಡಿನ ಓದುಗರನ್ನು ಇಂದಿಗೂ ಹಿಡಿದಿಟ್ಟುಕೊಳ್ಳುವ ಶಕ್ತಿ ಮುದ್ರಣ ಮಾಧ್ಯಮಕ್ಕಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
    ತಾಪಂ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ತಾಲೂಕು ಸಂಘದಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹಿಂದೆ ಮುದ್ರಣ ವ್ಯವಸ್ಥೆಯಲ್ಲಿ ಪತ್ರಿಕೆಗಳನ್ನು ಹೊರತರುವುದು ಕಷ್ಟಕರವಾಗಿತ್ತು. ಈಗ ತಂತ್ರಜ್ಞಾನ ಮುಂದುವರೆದಿದ್ದು, ಒಳ್ಳೆಯ ವ್ಯವಸ್ಥೆಯಲ್ಲಿ ಮುದ್ರಣ ಮಾಧ್ಯಮ ನಡೆಯುತ್ತಿದೆ. ದೇಶದ ನಾಲ್ಕನೇ ಅಂಗ ಪತ್ರಿಕಾರಂಗ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ತಮ್ಮ ಶಕ್ತಿ ವೃದ್ಧಿಸಿಕೊಳ್ಳಬೇಕಿದೆ ಎಂದರು.
    ಪತ್ರಿಕಾ ರಂಗದಲ್ಲಿ ಸಾಕಷ್ಟ ಬದಲಾವಣೆಗಳಾಗಿವೆ. ದೃಶ್ಯ ಮಾಧ್ಯಮದೊಂದಿಗೆ ಮುದ್ರಣ ಮಾಧ್ಯಮ ಪೈಪೋಟಿ ನಡೆಸಬೇಕಿದೆ. ಪತ್ರಿಕೆಗಳು ಸ್ವಾರಸ್ಯಕರವಾಗಿ ಸುದ್ದಿಗಳನ್ನು ತಿಳಿಸುವ ಕಾರ್ಯ ಮಾಡಲಿದೆ. ಅವಕಾಶವಿದ್ದರೆ ತಾಲೂಕಿನ ಪತ್ರಕರ್ತರಿಗೆ ಅದ್ಯತೆಗೆ ಅನುಗುಣವಾಗಿ ನಿವೇಶನ ದೊರಕಿಸಿಕೊಡಲು ತಹಸೀಲ್ದಾರ್ ಬಳಿ ಚರ್ಚಿಸಿ ಅಗತ್ಯ ಕ್ರಮವಹಿಸಲಾಗುತ್ತದೆ. ಪಟ್ಟಣದ ಕನ್ನಡ ಕಲಾ ಸಂಘದ ಕಟ್ಟಡವನ್ನು ತಾಲೂಕಿನ ಪತ್ರಕರ್ತರಿಗೆ ನೀಡಲು ಹಾಗೂ ಪಟ್ಟಣದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
    ಕೆಯುಡ್ಲೂಜೆ ಜಿಲ್ಲಾಧ್ಯಕ್ಷ ಟಿ.ಎನ್.ಎ. ಮೊದಲಿಯಾರ್ ಮಾತನಾಡಿ, ಪತ್ರಕರ್ತರ ಸಂಘ ಜನರಿಗೆ ಸುದ್ದಿಗಳನ್ನು ತಿಳಿಸುವ ಕಾರ್ಯ ಮಾಡಬೇಕಿದೆ. ತಂತ್ರಜ್ಞಾನ ಮುಂದುವರಿದಿದ್ದು, ಸ್ಥಳೀಯ ಸುದ್ದಿಗಳು ಪ್ರಪಂಚಕ್ಕೆ ತಲುಪಲಿದೆ. ಪತ್ರಕರ್ತರು ಬೇಡುವ ಮನೋಭಾವದಿಂದ ಹೊರಬಂದು ಸ್ವಾಭಿಮಾನಿಗಳಾಗಿ ಬದುಕಬೇಕಿದೆ ಎಂದು ಹೇಳಿದರು.
    ಕೆಯುಡ್ಲೂಜೆ ತಾಲೂಕು ಅಧ್ಯಕ್ಷ ಬೀರೂರು ಎನ್.ಗಿರೀಶ್ ಮಾತನಾಡಿ, ಸಂಘದ ಕಾರ್ಯ ಚಟುವಟಿಕೆಗಳನ್ನು ನಡೆಸಲು ಪೂರಕವಾಗಿ ಸುಸಜ್ಜಿತ ಪತ್ರಿಕಾ ಭವನ ನಿರ್ಮಾಣಕ್ಕೆ ಶಾಸಕರು ಭರವಸೆ ನೀಡಿರುವುದು ಶ್ಲಾಘನೀಯ ಎಂದರು.
    ಹಿರಿಯ ಪತ್ರಕರ್ತರು, ಪತ್ರಿಕಾ ವಿತರಕರು, ಸಾಧಕರು ಹಾಗೂ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧಿಕ್ಷಕ ಜಿ.ಕೃಷ್ಣಮೂರ್ತಿ, ಇಒ ಸಿ.ಆರ್.ಪ್ರವೀಣ್, ಶೂದ್ರಶ್ರೀ ನಿವಾಸ್, ಬಿ.ಆರ್.ಮೋಹನ್‌ಕುಮಾರ್, ಬಾವಿಮನೆ ಮಧು, ಅರೇಹಳ್ಳಿ ಮಲ್ಲಿಕಾರ್ಜುನ್, ಡಾ.ಕೆಂಚೇಗೌಡ, ಕೆ.ಆರ್.ಸುರೇಶ್, ಎಚ್.ಎಸ್.ಪರಮೇಶ್, ಸಿ.ಕೆ.ಮೂರ್ತಿ, ಹಿರೇನಲ್ಲೂರು ಶಿವು, ಕೆ.ಜಿ.ಲೋಕೇಶ್ವರ್, ಎಸ್.ಸುಬ್ರಹ್ಮಣ್ಯ, ಟಿ.ಆರ್.ಭೈರೇಶ್, ಹುಲ್ಲೇಹಳ್ಳಿ ಲಕ್ಷ್ಮಣ್, ಎಚ್.ಆರ್.ದೇವರಾಜ್, ಬಿ.ಆರ್.ನಾಗರಾಜ್, ನಾಗೇಂದ್ರ ಪ್ರಸಾದ್ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts