More

    ಸುಳ್ಳು ಹೇಳುವುದು ಆರೋಗ್ಯಕರವಾಗಿರಲಿ

    ಹುನಗುಂದ: ಜೀವನದಲ್ಲಿ ಸುಳ್ಳು ಹೇಳುವುದು ಅನಿವಾರ್ಯ, ಆದರೆ ಮತ್ತೊಬ್ಬರ ಬದುಕಿಗೆ ಸಮಾಜಕ್ಕೆ ಪರಿಣಾಮ ಬೀರದೇ ಒಳ್ಳೆಯ ಸಂದೇಶವಾಗಬೇಕೆಂದು ವಿಮವಿವ ಸಂಘದ ಗೌರವ ಕಾರ್ಯದರ್ಶಿ ಡಾ. ಮಹಾಂತೇಶ ಕಡಪಟ್ಟಿ ಹೇಳಿದರು.

    ಪಟ್ಟಣದ ವಿಮವಿವ ಸಂಘದ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿ.ಮ. ಸಂಘ ಮತ್ತು ಹೊನ್ನಗುಂದ ಸಂಸ್ಕೃತಿ ಬಳಗದ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಚಾಚರಣೆ ಮತ್ತು ಮಹಾಶಿವರಾತ್ರಿ ಅಂಗವಾಗಿ ಮಾ.9 ರಂದು ಸಂಸ್ಥೆ ಆವರಣದಲ್ಲಿ ಸಂಜೆ 6.1ಕ್ಕೆ ನಡೆಯುವ ಸುಳ್ಳು ಹೇಳುವುದರಲ್ಲಿ ಯಾರು ನಿಸ್ಸೀಮರು ಹೆಂಡತಿಯೋ- ಗಂಡನೋ ಎಂಬ ಹರಟೆ ಕಾರ್ಯಕ್ರಮ ಕುರಿತು ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

    ಸಮಯಕ್ಕನುಗುಣವಾಗಿ ಪರಿಣಾಮ ಬೀರದಂತೆ ಮತ್ತೊಬ್ಬರಿಗೆ ಹಾನಿಯಾಗದಂತೆ ಅಭಿವೃದ್ಧಿ ಸಾಧನೆ ನೆಪದಲ್ಲಿ ಮತ್ತು ಕುಟುಂಬದಲ್ಲೇ ಆಗಲಿ ಸಮಾಜದಲ್ಲೇ ಆಗಲಿ ನೆಪ ಮಾತ್ರಕ್ಕೆ ಅನಿವಾರ್ಯ ಸುಳ್ಳು ಹೇಳುತ್ತಾರೆ. ಆದರೆ, ಇದನ್ನು ಅರ್ಥೈಸಿಕೊಳ್ಳದವರು ಸುಳ್ಳನ್ನೇ ಜೀವನವನ್ನಾಗಿಸಿಕೊಂಡು ಪೂರ್ಣ ಪರಿಣಾಮ ಅನುಭವಿಸುತ್ತಾರೆ. ಶಾಲೆಯಲ್ಲಿ, ಸ್ನೇಹದಲ್ಲಿ, ಸಂಘಟನೆಯಲ್ಲಿ ಹಾಗೂ ಕುಟುಂಬದಲ್ಲಿ ಹಾನಿಕಾರಕವೆನಿಸದೆ ಸುಳ್ಳು ಆರೋಗ್ಯಕರವಾಗಿರಬೇಕು ಎಂದರು.

    ಹೊಸಬದ ಹಿರಿಯ ಮಹಾಂತೇಶ ಅಗಸಿಮುಂದಿನ ಮಾತನಾಡಿ, ಈ ಹರಟೆ ಕಾರ್ಯಕ್ರಮ ಸಾಂದರ್ಭಿಕವಾಗಿ ಕುಟುಂಬ ಸೇರಿ ವಿವಿಧ ಬಗೆಯ ಕ್ಷೇತ್ರಗಳಲ್ಲಿ ಸುಳ್ಳನ್ನು ಮನರಂಜನೆಗೆ ಬಳಸಿಕೊಂಡು ಮತ್ತೊಬ್ಬರಿಗೆ ಅಹ್ಲಾದಕರ ಮೂಡಿಸುವಂತಿರಬೇಕು ಎಂದು ತಿಳಿಸಿದರು.

    ವಿಮ ಸಂಘದ ನಿರ್ದೇಶಕರಾದ ಅರುಣೋದಯ ದುದ್ಗಿ, ರವಿ ಹುಚನೂರ, ಡಾ. ಮುದಗಲ್, ವೀರಣ್ಣ ಬಳೂಟಗಿ, ರಾಚಪ್ಪ ರಾಜಮನಿ, ಹೊಸಬ ವರ್ಷದ ಸಂಚಾಲಕ ವಾದಿರಾಜ ಗುಡ್ಡದ, ಐ.ಎಚ್. ನಾಯಕ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts