More

    ಮುಂಬೈ ದಾಳಿಯ ಮಾಸ್ಟರ್ ಮೈಂಡ್, ನಕ್ಷೆ ತಜ್ಞ, ಭಯೋತ್ಪಾದಕ ಅಜಮ್ ಚೀಮಾ ಪಾಕಿಸ್ತಾನದಲ್ಲಿ ನಿಧನ

    ಪಾಕಿಸ್ತಾನ: ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಗುಪ್ತಚರ ಮುಖ್ಯಸ್ಥ ಅಜಮ್ ಚೀಮಾ ಪಾಕಿಸ್ತಾನದಲ್ಲಿ ಸಾವನ್ನಪ್ಪಿದ್ದಾನೆ. ಫೈಸಲಾಬಾದ್‌ನಲ್ಲಿ ಹೃದಯಾಘಾತದಿಂದ 70 ನೇ ವಯಸ್ಸಿನಲ್ಲಿ ನಿಧನ ಹೊಂದಿರುವುದಾಗಿ ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ಹಲವು ಲಷ್ಕರ್ ಭಯೋತ್ಪಾದಕರು ನಿಗೂಢವಾಗಿ ಸಾವನ್ನಪ್ಪಿದ್ದು, ಇದರಿಂದ ಪಾಕಿಸ್ತಾನ ಬೆಚ್ಚಿಬಿದ್ದಿದೆ. ಈ ಹತ್ಯೆಗಳ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಆದರೆ ಭಾರತ ಇದನ್ನು ಬಲವಾಗಿ ನಿರಾಕರಿಸಿದೆ.

    ಪಾಕಿಸ್ತಾನ ಭಯೋತ್ಪಾದಕರ ಸ್ವರ್ಗ
    ಚೀಮಾ 26/11 ಮುಂಬೈ ದಾಳಿ ಮತ್ತು ಜುಲೈ 2006 ರಲ್ಲಿ ಮುಂಬೈನಲ್ಲಿ ರೈಲು ಬಾಂಬ್ ಸ್ಫೋಟಗಳು, ಹಾಗೆಯೇ ಹಲವಾರು ಭಯೋತ್ಪಾದಕ ದಾಳಿಗಳ ಮಾಸ್ಟರ್ ಮೈಂಡ್. ಚೀಮಾ ಸಾವು ಪಾಕಿಸ್ತಾನವು ಭಯೋತ್ಪಾದಕ ಸಂಘಟನೆಗಳಿಗೆ ಸ್ವರ್ಗವಾಗಿ ಉಳಿದಿದೆ ಎಂಬುದನ್ನು ದೃಢಪಡಿಸುತ್ತದೆ. ಆದರೆ ಪಾಕಿಸ್ತಾನ ಪದೇ ಪದೇ ಇದನ್ನು ನಿರಾಕರಿಸುತ್ತಲೇ ಬಂದಿದೆ.

    ಚೀಮಾ ಯಾರು?
    ಚೀಮಾ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕನಾಗಿದ್ದ. 6 ಮಂದಿ ಅಂಗರಕ್ಷಕರೊಂದಿಗೆ ಲ್ಯಾಂಡ್ ಕ್ರೂಸರ್‌ನಲ್ಲಿ ಆಗಾಗ್ಗೆ ತಿರುಗಾಡುತ್ತಿದ್ದ. ಚೀಮಾವನ್ನು ಭೂಪಟ ತಜ್ಞ ಎಂದು ಪರಿಗಣಿಸಲಾಗಿತ್ತು. ಅವನು ಜಿಹಾದಿಗಳಿಗೆ ನಕ್ಷೆಯಲ್ಲಿ ಭಾರತದ ಪ್ರಮುಖ ಸ್ಥಳಗಳನ್ನು ನೋಡಲು ಕಲಿಸಿದನು, ಇದರಿಂದ ಸುಲಭವಾಗಿ ದಾಳಿ ಮಾಡಬಹುದಾಗಿದ್ದು, ಈತ ಸ್ಯಾಟಲೈಟ್ ಫೋನ್ ಮೂಲಕ ಭಾರತದ ಉಗ್ರರಿಗೆ ಸೂಚನೆಗಳನ್ನು ನೀಡುತ್ತಿದ್ದ ಎನ್ನಲಾಗಿದೆ.

    ಮುಂಬೈ ದಾಳಿಗೆ ಯೋಜನೆ ರೂಪಿಸಿದ್ದ ಚೀಮಾ
    ಚೀಮಾ 2008ರಲ್ಲಿ ಬಹವಾಲ್‌ಪುರದಲ್ಲಿ ಲಷ್ಕರ್ ಕಮಾಂಡರ್ ಆಗಿ ಕೆಲಸ ಮಾಡುತ್ತಿದ್ದನು. ಈ ಸಮಯದಲ್ಲಿ, ಅವನನ್ನು ಝಕಿ-ಉರ್-ರೆಹಮಾನ್-ಲಖ್ವಿಯ ಕಾರ್ಯಾಚರಣೆ ಸಲಹೆಗಾರರನ್ನಾಗಿ ನೇಮಿಸಲಾಯಿತು. ಆ ವರ್ಷ ಮುಂಬೈನಲ್ಲಿ ದಾಳಿ ನಡೆಸಲು ಯೋಜನೆ ರೂಪಿಸಿ ಅದನ್ನು ಉತ್ತಮವಾಗಿ ಕಾರ್ಯಗತಗೊಳಿಸಿದ್ದ.

    ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಬಾಂಬರ್ ಫೋಟೋ ಲಭ್ಯ, ನಾಲ್ವರು ಶಂಕಿತರು ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts