More

    ಹಿಂದು ಧರ್ಮ ಜಾಗೃತಗೊಳಿಸುವ ಕೆಲಸವಾಗಲಿ

    ಅಣ್ಣಿಗೇರಿ: ದೇಶದಲ್ಲಿ ಹಿಂದು ಧರ್ಮವನ್ನು ಜಾಗೃತಗೊಳಿಸುವುದು, ದೇಶದ ನೆಲ, ಜಲ, ಭಾಷೆಗಾಗಿ ಪ್ರಾಣ ತ್ಯಾಗ ಮಾಡಿದ ಮಹಾಯೋಧರನ್ನು ಯುವಕರಿಗೆ ತಿಳಿಸಲು ಶೌರ್ಯ ಜಾಗರಣಾ ಯಾತ್ರೆಯನ್ನು ಹಿಂದು ವಿಶ್ವ ಪರಿಷತ್ ಮತ್ತು ಬಜರಂಗದಳ ಹಮ್ಮಿಕೊಂಡಿದೆ ಎಂದು ಸ್ಥಳೀಯ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.

    ಪಟ್ಟಣದ ಬಸ್ ನಿಲ್ದಾಣ ಬಳಿ ಸೋಮವಾರ ಬಂದ ಶೌರ್ಯ ಜಾಗರಣಾ ರಥಯಾತ್ರೆಗೆ ಪುಷ್ಪ ಸುರಿದು ಸ್ವಾಗತಿಸಿ ಅವರು ಮಾತನಾಡಿದರು.

    ರಥಯಾತ್ರೆಯ ಮೆರವಣಿಗೆ ಪಟ್ಟಣದ ಬಸ್ ನಿಲ್ದಾಣ, ಜಾಡಗೇರಿ ಓಣಿ, ಅಗಸಿ ಓಣಿ ಮೂಲಕ ಸಂಚರಿಸಿ ಮುಖ್ಯ ಮಾರುಕಟ್ಟೆಯಲ್ಲಿರುವ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತಕ್ಕೆ ತಲುಪಿ ಮುಂದಿನ ಗ್ರಾಮಕ್ಕೆ ತೆರಳಿತು. ರಥಯಾತ್ರೆ ಸಂಚರಿಸುವ ಮಾರ್ಗದುದ್ದಕ್ಕೂ ಹೂವಿನ ಅಲಂಕಾರ ಮಾಡಿರುವುದು ಎಲ್ಲರ ಗಮನ ಸೆಳೆದಿತ್ತು.

    ಶಿವಾನಂದ ಸತ್ತಿಗೇರಿ, ಸುಭಾಷ್​ಸಿಂಗ ಜಮಾದಾರ, ಬಸವರಾಜ ಕುಂದಗೋಳಮಠ, ಷಣ್ಮುಖ ಗುರಿಕಾರ, ಶಿವಾನಂದ ಹೊಸಳ್ಳಿ, ಶಿವಶಂಕರ ಕಲ್ಲೂರ, ಮಹೇಶ್ವರ ಅಂಗಡಿ, ಮಹಾಬಳೆಶ್ವರ ಹೆಬಸೂರ, ಅರ್ಜುನ ಕಲಾಲ, ತವನೇಶ ನಾವಳ್ಳಿ, ರಾಘವೇಂದ್ರ ರಾಮಗಿರಿ, ಚಂಬಣ್ಣ ಸುರಕೋಡ, ಧರ್ಮರಾಜ ಹರಣಶಿಕಾರಿ, ಪ್ರಭಣ್ಣ ಶಾನುಭೋಗರ, ಮಹೇಶ ಬಣಗಾರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts