More

    ಪ್ರತಿಯೊಬ್ಬರೂ ಕಡ್ಡಾಯ ಶಿಕ್ಷಣ ಪಡೆಯಲಿ

    ನರಗುಂದ: ಮನುಷ್ಯನಿಗೆ ಅನ್ನ, ನೀರು, ಬಟ್ಟೆ ಎಷ್ಟು ಮುಖ್ಯವೋ, ಶಿಕ್ಷಣವು ಅಷ್ಟೇ ಪ್ರಾಮುಖ್ಯತೆ ಪಡೆದುಕೊಂಡಿದೆ. ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ ಜಾರಿಗೆ ತಂದಿರುವುದು ಸಂತೋಷಕರ ಸಂಗತಿ ಎಂದು ಉಪನ್ಯಾಸಕ ಎಂ.ಪಿ. ಕುಲಕರ್ಣಿ ಹೇಳಿದರು.

    ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕನ್ನಡೋತ್ಸವ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಹಾಗೂ ಕನ್ನಡದ ಸ್ಥಿತಿಗತಿಯ ವಿಷಯದ ಕುರಿತು ಅವರು ಮಾತನಾಡಿದರು. ಶಿಕ್ಷಣವು ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುತ್ತದೆ. ಸಮಾಜದ ಪ್ರತಿಯೊಬ್ಬರೂ ಕಡ್ಡಾಯ ಶಿಕ್ಷಣ ಪಡೆದುಕೊಳ್ಳಲು ಮುಂದಾಗಬೇಕು. ತಂತ್ರಜ್ಞಾನಕ್ಕೆ ಮೊರೆ ಹೋಗಿರುವ ಪೋಷಕರು, ವಿದ್ಯಾರ್ಥಿಗಳು ನಮ್ಮ ಕನ್ನಡ ಭಾಷೆಯನ್ನು ಕಡೆಗಣಿಸುತ್ತಿರುವುದು ದುರ್ದೈವದ ಸಂಗತಿ. ಇಂದಿನ ಮಕ್ಕಳಿಗೆ ಹಾಲು ಎಲ್ಲಿಂದ ಬರುತ್ತದೆ ಎಂದು ಕೇಳಿದರೆ ಪ್ಯಾಕೆಟ್​ನಿಂದ ಬರುತ್ತದೆ ಎನ್ನುವ ಪರಿಸ್ಥಿತಿ ಬಂದೊದಗಿದೆ. ಇದಕ್ಕೆ ಪ್ರಮುಖ ಕಾರಣ ಬ್ರಿಟಿಷರು ನಮ್ಮ ದೇಶದಲ್ಲಿ ಬಿಟ್ಟು ಹೋಗಿರುವ ಆಂಗ್ಲ ಮಾಧ್ಯಮದ ಶಿಕ್ಷಣ ಎಂದು ಕಳವಳ ವ್ಯಕ್ತಪಡಿಸಿದರು.

    ಭೈರನಹಟ್ಟಿ ದೊರೆಸ್ವಾಮಿಮಠದ ಶಾಂತಲಿಂಗ ಶ್ರೀಗಳು ಮಾತನಾಡಿ, ರಾಜ್ಯ ಸರ್ಕಾರ 1ನೇ ತರಗತಿಯಿಂದಲೇ ಇಂಗ್ಲಿಷ್ ಶಿಕ್ಷಣವನ್ನು ಆರಂಭಿಸಿರುವುದು ಕನ್ನಡ ಭಾಷೆಗೆ ನೀಡಿರುವ ಬಹುದೊಡ್ಡ ಹೊಡೆತವಾಗಿದೆ. ದೇಶ ಸ್ವಾತಂತ್ರ್ಯ ಹೊಂದಿ ಇಷ್ಟು ವರ್ಷಗಳಾದರೂ ಮೌಲ್ಯಾಧಾರಿತ ಶಿಕ್ಷಣವಿಲ್ಲ. ಹೀಗಾಗಿ ನಾವೆಲ್ಲರೂ ಬ್ರಿಟಿಷರ ಶಿಕ್ಷಣವನ್ನೇ ಕಲಿಯುತ್ತಿದ್ದೇವೆ ಎಂದು ತಿಳಿಸಿದರು.

    ಬಿಎಸ್​ಎನ್​ಎಲ್ ಇಲಾಖೆಯ ನಿವೃತ್ತ ಅಧಿಕಾರಿ ಜಿ.ಎಸ್. ಯಾವಗಲ್ಲ ಮಾತನಾಡಿದರು. ಕಾರ್ಯಕ್ರಮದಲ್ಲಿ ದೇವರ ಶಿಗೇಹಳ್ಳಿಯ ವೀರೇಶ್ವರ ದೇವರು, ಪ್ರಗತಿಪರ ಚಿಂತಕ ಶಿವಾನಂದ ಶೇಬಣ್ಣವರ, ಚನ್ನಯ್ಯ ಪರ್ವತದೇವರಮಠ, ಎಂ.ಎಸ್. ಯಾವಗಲ್ಲ, ಮಹಾಂತೇಶ ಪಟ್ಟಣಶೆಟ್ಟಿ, ವೀರೇಂದ್ರ ಕತ್ತಿ, ದ್ಯಾಮಣ್ಣ ಮ್ಯಾಗಲಮನಿ, ಮಂಜುನಾಥ ನರಸಾಪುರ ಇತರರು ಉಪಸ್ಥಿತರಿದ್ದರು. ಆರ್.ಕೆ. ಐನಾಪೂರ, ಆರ್.ಬಿ. ಚಿನಿವಾಲರ, ಮಹಾಂತೇಶ ಹಿರೇಮಠ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts