More

    ಶಿಕ್ಷಣ ಬದುಕು ರೂಪಿಸಲಿ

    ಆಲಮೇಲ: ಶಿಕ್ಷಣವೆಂದರೆ ಕೇವಲ ಓದು ಬರೆಯುವುದನ್ನು ಕಲಿಯುವುದಲ್ಲ. ಸಂಸ್ಕಾರ, ಬದುಕುವ ಕಲೆ, ಕೌಶಲ, ಜೀವನ ನಿರ್ವಹಣೆಯ ಮೌಲ್ಯಗಳನ್ನು ಮನದಲ್ಲಿ ಬಿತ್ತಿ ಪರಿಪೂರ್ಣ ಮಾನವನ್ನಾಗಿ ಪರಿವರ್ತಿಸುವುದೇ ನಿಜವಾದ ಶಿಕ್ಷಣದ ಗುರಿಯಾಗಬೇಕು ಎಂದು ನಂದಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎನ್.ಎ. ಬಿರಾದಾರ ಹೇಳಿದರು.

    ಪಟ್ಟಣದ ಎ.ಕೆ. ನಂದಿ ಪಪೂ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಎಚ್.ಎ. ನಂದಿ ಪದವಿ ಮಹಾವಿದ್ಯಾಲಯದ ಪ್ರಾಶುಂಪಾಲ ಎಸ್.ಎಂ. ಉಪ್ಪಾರ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಟ್ಟರೇ ಮುಂದಿನ ದಿನಮಾನದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದರು.

    ಅಧ್ಯಕ್ಷತೆ ವಹಿಸಿದ್ದ ಎ.ಕೆ. ನಂದಿ ಪಪೂ ಕಾಲೇಜಿನ ಡಿ.ಎಸ್. ಉಟಗಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ನಿತ್ಯದ ಜೀವನದಲ್ಲಿ ಸಮಯ ಪ್ರಜ್ಞೆ ಹಾಗೂ ಶಿಸ್ತುಬದ್ಧತೆ ಕಾಯ್ದುಕೊಳ್ಳುವುದರ ಜತೆಗೆ ಅಭ್ಯಾಸದ ಕಡೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.

    ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಂದಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಧನಶ್ರೀ, ಕಾನಿಪ ಸಂಘದ ತಾಲೂಕಾ ಅಧ್ಯಕ್ಷ ಸೈಯದ ದೇವರಮನಿ, ಉಪನ್ಯಾಸಕ ಎನ್.ಎಸ್. ದೇವರಮನಿ, ಟಿ.ವಿ. ಚವ್ಹಾಣ, ಡಿ.ಎಂ. ಉಮರಾಣಿ, ಸಿದ್ದು ಶಿವಗೊಂಡ, ಶ್ರೀದೇವಿ ಬಿರಾದಾರ, ಬಿ,ವೈ ನಿವಾಳಖೋಡಿ, ಡಾ. ಎಸ್.ಎಸ್. ತಾವರಖೇಡ, ಎಸ್.ಜೆ. ಮಾಡ್ಯಾಳ, ಜಿ.ಎಸ್. ಬಮ್ಮನಹಳ್ಳಿ. ಎಂ.ಎ. ಮೇತ್ರಿ, ಸುರೇಖಾ ವಾರದ, ಕರೀಂ ಸೌದಾಗರ ಹಾಗೂ ವಿದ್ಯಾರ್ಥಿಗಳು ಇದ್ದರು.

    ಪ್ರೊ. ಅಮರ ನಾರಾಯಣಕರ ಪ್ರಾಸ್ತಾವಿಕ ಮಾತನಾಡಿದರು. ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts