More

    ಚಿರತೆ ಚರ್ಮವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮಾಂಸದ ವ್ಯಾಪಾರಿ; ಬೈಕ್​ನಲ್ಲೇ ಇತ್ತು 5 ಲಕ್ಷ ಮೌಲ್ಯದ ಚರ್ಮ

    ಮಡಿಕೇರಿ: ಅಕ್ರಮವಾಗಿ ಚಿರತೆ ಚರ್ಮ ಮಾರಾಟ ಮಾಡಲು ಯತ್ನಿಸಿದ ಆರೋಪದಲ್ಲಿ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಸುಂಟಿಕೊಪ್ಪದ ಮಾಂಸ ವ್ಯಾಪಾರಿಯನ್ನು ಅರಣ್ಯ ಸಂಚಾರಿ ದಳ ಪೊಲೀಸರು ಬಂಧಿಸಿದ್ದಾರೆ.

    ಇದನ್ನೂ ಓದಿ: ತಂದೆಯ ಆಸ್ತಿ ಹೇಗೆ ಬೇಕಾದರೂ ಹಂಚಬಹುದೆ? ವಿಲ್​ ಮಾಡದಿದ್ದರೆ ಏನಾಗುತ್ತದೆ?


    ಐದು ಲಕ್ಷ ರೂಪಾಯಿ ಮೌಲ್ಯದ ಎರಡು ಚಿರತೆ ಚರ್ಮ ಮಾರಾಟ ಮಾಡಲು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಕೆ. ಮಹಮ್ಮದ್ ಕಬೀರ್ (30) ಎಂಬಾತನನ್ನು ಬಂಧಿಸಲಾಗಿದೆ. ಚರ್ಮ ಸಾಗಾಟ ಮಾಡಲು ಬಳಸಿದ್ದ ಮೋಟಾರ್ ಬೈಕ್ ವಶ ಪಡಿಸಿಕೊಳ್ಳಲಾಗಿದೆ.


    ವಿರಾಜಪೇಟೆ ತಾಲೂಕು ವ್ಯಾಪ್ತಿಯ ಐಮಂಗಲ ಗ್ರಾಮದಲ್ಲಿ ಮೋಟಾರ್ ಬೈಕ್ನಲ್ಲಿ ಅಕ್ರಮವಾಗಿ ಚರ್ಮ ಸಾಗಾಟ ಮಾಡುತ್ತಿದ್ದನ್ನು ಅರಣ್ಯ ಸಂಚಾರಿ ದಳ ಪತ್ತೆಹಚ್ಚಿದೆ. ಮೋಟಾರ್ ಬೈಕ್ನಲ್ಲಿದ್ದ ಹಿಂಬದಿ ಸವಾರ ಎಡಪಾಲ ಗ್ರಾಮದ ನಿವಾಸಿ ಕೆ. ರಷೀದ್ ತಪ್ಪಿಸಿಕೊಂಡಿದ್ದಾನೆ. ಅರಣ್ಯ ಸಂಚಾರಿ ದಳ ಮಡಿಕೇರಿ ಘಟಕ ಸಬ್ ಇನ್ಸಪೆಕ್ಟರ್ ವೀಣಾ ನಾಯಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

    3 ಕೋಟಿ ಖರ್ಚು ಮಾಡಿಸಿ ಮದ್ವೆಯಾದವ ಮೊದಲ ರಾತ್ರಿಯೇ ಫುಲ್ ಟೈಟ್! ಮುಂದೆ ಆಗಿದ್ದೆಲ್ಲವೂ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts