More

    ಕಾಪು ಕಲ್ಯ ಪ್ರದೇಶದಲ್ಲಿ ಚಿರತೆ ಸಂಚಾರ

    ಪಡುಬಿದ್ರಿ: ಕಾಪು ಕಲ್ಯ ಗೋಕುಲ್ ಕಂಪೌಂಡು ಬಳಿ ಭಾನುವಾರ ಮಧ್ಯರಾತ್ರಿ ಚಿರತೆ ಕಂಡು ಬಂದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಪ್ರದೇಶದಲ್ಲಿ ಚಿರತೆ ಸಂಚರಿಸಿದ ಹಾಗೂ ರಕ್ತದ ಕಲೆಗಳು ಇರುವುದನ್ನು ಕಂಡ ಸ್ಥಳೀಯರು ಪುರಸಭೆ ಅಧ್ಯಕ್ಷ ಅನಿಲ್‌ಕುಮಾರ್ ಅವರಿಗೆ ಮಾಹಿತಿ ನೀಡಿದ್ದರು. ಅದರಂತೆ ಅರಣ್ಯಾಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಪ್ರದೇಶದಲ್ಲಿ ಚಿರತೆ ಇರುವುದು ಸ್ಪಷ್ಟವಾಗಿದೆ. ಯಾವುದೋ ಬೀದಿನಾಯಿಯನ್ನು ಚಿರತೆ ಹಿಡಿದಿರಬಹುದು. ಅದನ್ನು ಕೊಂಡೊಯ್ಯುವಾಗ ರಕ್ತದ ಹನಿಗಳು ಬಿದ್ದಿದೆ. ರಾತ್ರಿಯೇ ಹುಡುಕಾಟ ನಡೆಸಿದ್ದು, ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ಉಪ ವಲಯ ಅರಣ್ಯಾಧಿಕಾರಿ ಜೀವನ್‌ದಾಸ್ ಶೆಟ್ಟಿ ತಿಳಿಸಿದ್ದಾರೆ.

    ಹಿಡಿದಿರುವ ಪ್ರಾಣಿಯನ್ನು ಚಿರತೆ ಎಲ್ಲಿಯಾದರೂ ಬಿಟ್ಟು ಹೋಗಿರಬಹುದೆ ಎಂದು ಕಾಪು ಅರಣ್ಯ ರಕ್ಷಕ ಮಂಜುನಾಥ್ ಹಾಗೂ ಪಡುಬಿದ್ರಿ ವಲಯ ಅರಣ್ಯ ರಕ್ಷಕ ಅಭಿಲಾಷ್ ಅವರೊಂದಿಗೆ ತೆರಳಿ ಸೋಮವಾರ ಮತ್ತೆ ಪರಿಶೀಲನೆ ನಡೆಸಲಾಗಿದೆ. ಯಾವುದೇ ಸುಳಿವು ಲಭ್ಯವಾಗಿಲ್ಲ. ಚಿರತೆ ಸೆರೆ ಹಿಡಿಯಲು ಅದು ಸಂಚರಿಸಿದ ಸ್ಥಳದಲ್ಲಿ ಬೋನು ಇರಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

    ಪುರಸಭೆ ಅಧ್ಯಕ್ಷ ಅನಿಲ್ ಹಾಗೂ ಪ್ರಸಾದ್ ಶೆಣೈ ಇದ್ದರು.
    5 ದಿನಗಳ ಹಿಂದೆಯಷ್ಟೇ ಪುರಸಭೆ ವ್ಯಾಪ್ತಿಯ ಪೊಲಿಪು ಪ್ರದೇಶದಲ್ಲಿಯೂ ಚಿರತೆ ಓಡಾಟ ಕಂಡು ಬಂದಿರುವ ಬಗ್ಗೆ ಸಾರ್ವಜನಿಕರು ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿರುವುದನ್ನು ಸ್ಮರಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts