More

    ಎಂ.ಜಿ.ರಸ್ತೆಯಲ್ಲಿ ರಾತ್ರಿ ಕಾಣಿಸಿಕೊಂಡ ಚಿರತೆ, ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಆಯ್ತು ಓಡಾಟ!

    ರಾಮನಗರ: ಕಾಡಲ್ಲಿರಬೇಕಾದ ಚಿರತೆ ನಾಡಿನ ಹಲವೆಡೆ ಕಂಡುಬರುತ್ತಿದ್ದು, ಅಂಥದ್ದೇ ಒಂದು ಪ್ರಕರಣದಲ್ಲಿ ಚಿರತೆಯೊಂದು ಎಂ.ಜಿ.ರಸ್ತೆಯಲ್ಲಿ ಕಾಣಿಸಿಕೊಂಡಿದ್ದು, ಅದರ ಓಡಾಟ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ರಾಮನಗರ ಜಿಲ್ಲೆ ಚನ್ನಪಟ್ಟಣದ ಪ್ರತಿಷ್ಠಿತ ಎಂ.ಜಿ.ರಸ್ತೆಯಲ್ಲಿ ಸೋಮವಾರ ರಾತ್ರಿ ಈ ಚಿರತೆ ಓಡಾಟ ನಡೆಸಿದ್ದು, ಅಲ್ಲಿನ ಮನೆಯೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಇದರ ಓಡಾಟದ ದೃಶ್ಯಾವಳಿ ಸೆರೆಯಾಗಿದೆ. ಈ ಹಿಂದೆ ಇದೇ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡಿದ್ದಲ್ಲದೆ ಮಹಿಳೆಯೊಬ್ಬರ ಮೇಲೆ ದಾಳಿಯನ್ನೂ ನಡೆಸಿತ್ತು. ಇದೀಗ ಮತ್ತೊಮ್ಮೆ ಚಿರತೆ ಓಡಾಡಿರುವುದು ಗಮನಕ್ಕೆ ಬಂದಿರುವುದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದು, ಸಂಜೆ ಬಳಿಕ ಈ ರಸ್ತೆಯಲ್ಲಿ ಸಂಚರಿಸುವುದಕ್ಕೂ ಭಯಪಡುವಂತಹ ವಾತಾವರಣ ಉಂಟಾಗಿದೆ.

    ಚಿರತೆ ಓಡಾಟದ ದೃಶ್ಯ ನೋಡಲು ಈ ಲಿಂಕ್ ಕ್ಲಿಕ್ ಮಾಡಿhttps://fb.watch/v/FquIpMkh/

    ಚಿರತೆ ಸೆರೆ: ಕೊಪ್ಪಳದ ಅರಸಿನಕೆರೆ ಗ್ರಾಮದ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಚಿರತೆಯೊಂದು ಸೆರೆಯಾಗಿದೆ. ಮಂಗಳವಾರ ಬೆಳಗ್ಗೆಯೇ ಚಿರತೆ ಬೋನಿಗೆ ಬಿದ್ದಿದ್ದು, ಸಂಜೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ‌ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿ ಕೆ.ಎಂ. ನಾಗರಾಜ್ ಅವರ ತಂಡ ಚಿರತೆಯನ್ನು ಅರಣ್ಯ ಇಲಾಖೆಯ ಪ್ರಾಣಿ ಸಂಗ್ರಹಾಲಯಕ್ಕೆ ರವಾನಿಸಿದೆ. ಚಿರತೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಯಾವ ಸ್ಥಳದಲ್ಲಿ ಚಿರತೆ ಬೀಡಬೇಕು ಎಂದು ಮೇಲಧಿಕಾರಿಗಳ ಆದೇಶದಂತೆ ತೀರ್ಮಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಒಂದು ತಿಂಗಳಿನಿಂದ ಅರಸಿನಕೆರೆ ಗ್ರಾಮದ ಬಳಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದರು. ಚಿರತೆ ಸೆರೆಯಾಗಿದ್ದರಿಂದ ನಿಟ್ಟುಸಿರು ಬಿಟ್ಟಿದ್ದಾರೆ.

    ದೇಶದ ಪ್ರಪ್ರಥಮ ಕೋವಿಡ್​ ಸೋಂಕಿತೆಗೆ ಈಗ ಮತ್ತೆ ಕರೊನಾ!

    ವಧುವಿಗೆ ಹತ್ತನೇ ಕ್ಲಾಸು, ವರನಿಗೆ 30 ವರ್ಷ; ಬಾಲ್ಯವಿವಾಹ ಮಾಡಿಸಿದವರೆಲ್ಲರ ಬಂಧನ..

    ನಟ ದರ್ಶನ್​ ಪ್ರಕರಣದಲ್ಲಿ ಟ್ವಿಸ್ಟ್​: ಕೇಳಿ ಬಂತು ಮತ್ತೊಂದು ಹೆಸರು ನಂದಿತಾ!

    ದುಬಾರಿ ಕಾರ್​ಗೆ ತೆರಿಗೆ ವಿನಾಯಿತಿ ಕೇಳಿದ್ದ ಚಿತ್ರನಟ ವಿಜಯ್​ಗೆ 1 ಲಕ್ಷ ರೂ. ದಂಡ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts