More

    ಅಬ್ಬಬ್ಬಾ ಕೆ.ಜಿ. ನಿಂಬೆಹಣ್ಣು 250 ರೂ..!

    ಚಂಡೀಗಢ: ಒಂದು ನಿಂಬೆಹಣ್ಣು ಹೆಚ್ಚೆಂದರೆ 10 ರೂಪಾಯಿ ಇಲ್ಲ ಕೆಜಿಗೆ 80 ರೂಗಳಿಗೆ ಮಾರಾಟವಾಗಬಹುದು ಎಂದುಕೊಳ್ಳಬಹುದು. ಆದರೆ ಈಗ ಈರುಳ್ಳಿಗಿಂತಲೂ ದಾಖಲೆ ಬೆಲೆಗೆ ಮಾರಾಟವಾಗಿದೆ.

    ಬೇಸಿಗೆ ಬಿರುಬಿಸಿಲಿನಲ್ಲಿ ನಿಂಬೆಹಣ್ಣಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಚಂಡೀಗಢದಲ್ಲಿ ಒಂದು ಕೆ.ಜಿ. ನಿಂಬೆಹಣ್ಣು ಬರೋಬ್ಬರಿ 250 ರೂ.ಗಳಿಗೆ ಮಾರಾಟವಾಗಿದ್ದು, ಸಾರ್ವಕಾಲಿಕ ದಾಖಲೆ ಬರೆದಿದೆ.

    ಸಾಮಾನ್ಯ ದಿನಗಳಲ್ಲಿ ಒಂದು ಕೆ.ಜಿ. ಗೆ 40 ರಿಂದ 50 ರೂಪಾಯಿಗಳಿರುತ್ತಿದ್ದ ನಿಂಬೆಹಣ್ಣು ಭಾನುವಾರ ಅಧಿಕ ಬೆಲೆಗೆ ಮಾರಾಟವಾಗಿದೆ. ಹಸಿಮೆಣಸಿಕಾಯಿ ಈವರೆಗೆ ದಾಖಲೆಯ ಬೆಲೆಗೆ ಮಾರಾಟವಾಗಿತ್ತು. ಇದೀಗ ನಿಂಬೆಹಣ್ಣಿನ ಬೆಲೆ ಗಗನಕ್ಕೇರಿದೆ.
    ಸಾಮಾನ್ಯವಾಗಿ 250 ಗ್ರಾಂ ನಿಂಬೆಹಣ್ಣು 40 ರೂ,ಗಳಿಗೆ ಮಾರಾಟ ಮಾಡುತ್ತಿದ್ದೆವು, ಬೇಸಿಗೆಯಲ್ಲಿ ಬೇಡಿಕೆ ಹೆಚ್ಚಾಗಿರುವುದರಿಂದ ದರವೂ ಹೆಚ್ಚಾಗಿದೆ. ಫೆಬ್ರವರಿಯಲ್ಲಿ 60 ರಿಂದ 70 ರೂ.ಗಳಿಗೆ ಕೆ.ಜಿ.ನಿಂಬೆಹಣ್ಣು ಮಾರಾಟವಾಗಿತ್ತು ಎಂದು ಪಂಜಾಬ್​ ಮಂಡಿ ಇಲಾಖೆಯ ಮೇಲ್ವಿಚಾರಕ ಕೋಮಲ್​ ಸಿಂಗ್​ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts