More

    ಜನರ ಹಕ್ಕು ಬದಲಿಸುವ ಅಧಿಕಾರ ಶಾಸಕಾಂಗಕ್ಕಿಲ್ಲ: ನಿವೃತ್ತ ನ್ಯಾ. ಎನ್.ಸಂತೋಷ್ ಹೆಗ್ಡೆ ಅಭಿಮತ

    ಬೆಂಗಳೂರು: ದೇಶದ ಸಂಸತ್‌ಗೆ ಕಾಯ್ದೆ ರೂಪಿಸುವ ಅಧಿಕಾರ ಇದ್ದರೂ, ಜನರು ಹೊಂದಿರುವ ಹಕ್ಕನ್ನು ಬದಲಾಯಿಸುವ ಅಧಿಕಾರ ಶಾಸಕಾಂಗಕ್ಕೆ ಇಲ್ಲ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.

    ದೇಶದ ನ್ಯಾಯಾಂಗ ಕ್ಷೇತ್ರದಲ್ಲಿ ಮೈಲಿಗಲ್ಲು ತೀರ್ಪು ಎಂದೇ ಪರಿಗಣಿಸಲ್ಪಟ್ಟಿರುವ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಹಾಗೂ ಕೇರಳ ಸರ್ಕಾರದ ನಡುವಿನ ಪ್ರಕರಣದ ಐತಿಹಾಸಿಕ ತೀರ್ಪಿನ 50ನೇ ವರ್ಷಾಚರಣೆ ಅಂಗವಾಗಿ ಯುನಿವರ್ಸಲ್ ಸ್ಕೂಲ್ ಆ್ ಲಾ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

    ಕೇರಳ ಸರ್ಕಾರ ಹಾಗೂ ಧಾರ್ಮಿಕ ಸಂಸ್ಥೆ ನಡುವಣ ಈ ಕಾನೂನು ಸಮರದ ತೀರ್ಪು ಹೆಚ್ಚಿನ ಮಹತ್ವ ಪಡೆದಿದೆ. ಕಾನೂನು ವಿದ್ಯಾರ್ಥಿಗಳಿಗೆ ಹಾಗೂ ವಿದ್ವಾಂಸರಿಗೆ ದೊಡ್ಡ ಮಟ್ಟದ ಅಧ್ಯಯನ ವಸ್ತುವಾಗಿದೆ. ಸಂವಿಧಾನದ ಮೂಲಕ ಜನರಿಗೆ ಲಭ್ಯವಾಗಿರುವ ಹಕ್ಕನ್ನು ಯಾರೂ ಕಸಿಯಲು ಸಾಧ್ಯವಾಗದು ಎಂದು ತಿಳಿಸಿದರು.

    ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಈ ದೇಶದ ಪ್ರಜಾಪ್ರಭುತ್ವ, ಸಂವಿಧಾನ ರಕ್ಷಣೆಯಲ್ಲಿ ಈ ತೀರ್ಪಿನ ಪಾತ್ರ ದೊಡ್ಡದು. ಇದು ನಮ್ಮ ಮಠದ ಜಮೀನಿನ ಪ್ರಶ್ನೆಯಲ್ಲ. ಈ ಕಾನೂನು ಹೋರಾಟದ ಮೂಲಕ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಲು ಸಾಧ್ಯವಾಗಿದ್ದು ನಮಗೆ ಅತ್ಯಂತ ಖುಷಿಕೊಟ್ಟ ಸಂಗತಿಯಾಗಿದೆ ಎಂದು ಬಣ್ಣಿಸಿದರು.

    ನಾವು ಸಂಸತ್ತಿನ ಮೇಲೆ ಇಟ್ಟಿರುವ ಭರವಸೆ ಕಳೆದುಕೊಂಡಾಗ, ನಮಗಿರುವ ಆಶಾಭಾವನೆ ನ್ಯಾಯಾಂಗ ಮತ್ತು ಸಂವಿಧಾನ ಮಾತ್ರ. ಚುನಾವಣೆಗೆ ಮೊದಲು ಮತದಾರರು ಭ್ರಷ್ಟ್ರರಾಗುತ್ತಾರೆ, ಚುನಾವಣೆ ಬಳಿಕ ನಾಯಕರು ಭ್ರಷ್ಟರಾಗುತ್ತಾರೆ ಎಂದು ಸ್ವಾಮೀಜಿ ತಿಳಿಸಿದರು.

    ಸಂವಿಧಾನದ ಮೂಲತತ್ವ ಮರೆ?:

    ಮಾಜಿ ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಮಾತನಾಡಿ, ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ, ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರಿಗೆ ಭಾರತ ರತ್ನ ನೀಡಿದ ಬಳಿಕ ಈ ದೇಶದ ಸಂವಿಧಾನದಲ್ಲಿರುವ ಜಾತ್ಯತೀತದ ಶಬ್ದಕ್ಕೆ ಅರ್ಥವಿದೆಯೇ? ಎಂದು ಭಾಸವಾಗುತ್ತಿದೆ. ಈ ಬೆಳವಣಿಗೆಗಳಿಂದ ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗಿಲ್ಲವೇ, ಎಂಬ ಪ್ರಶ್ನೆಯೂ ಉದ್ಭವಿಸಿದೆ. ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಹಿಂಸಾಚಾರ, ದ್ವೇಷ ಭಾಷಣ, ಸಂವಿಧಾನದ ಮೂಲತತ್ವಗಳು ಮರೆಯಾಗುತ್ತಿರುವುದಕ್ಕೆ ಸಾಕ್ಷಿ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

    ಕಾರ್ಯಕ್ರಮದಲ್ಲಿ ಯುನಿವರ್ಸಲ್ ಸಂಸ್ಥೆಯ ಬೆಂಗಳೂರು ವಿಭಾಗದ ಅಧ್ಯಕ್ಷ ಆರ್.ಉಪೇಂದ್ರ ಶೆಟ್ಟಿ, ಕಾಲೇಜು ಪ್ರಾಂಶುಪಾಲ ವಿಶ್ವಾಸ್ ಪುಟ್ಟಸ್ವಾಮಿ, ಕಾಲೇಜು ಆಡಳಿತಾಧಿಕಾರಿ ಸಂತೋಷ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

    ಇತ್ತೀಚಿನ ದಿನಗಳಲ್ಲಿ ಸಂಸತ್‌ನಲ್ಲಿ ಕಾಯ್ದೆಗಳು ಯಾವುದೇ ಚರ್ಚೆ ಇಲ್ಲದೆ ಅಂಗೀಕಾರ ಪಡೆಯುತ್ತಿವೆ. ಇದು ನಮಗೆಲ್ಲ ಬೇಸರದ ಸಂಗತಿಯಾಗಿದೆ. ಸಂವಿಧಾನ ತಿದ್ದುಪಡಿ ಮಾಡಲಾಗುತ್ತ ಎಂಬ ಮಾತೂ ಕೇಳಿ ಬರುತ್ತಿರುವುದು ಸರಿಯೇ ಎಂಬುದನ್ನು ಮೂಲ ಪ್ರಶ್ನೆಯಾಗಿದೆ.
    – ನ್ಯಾ. ನಾಗಮೋಹನ್ ದಾಸ್, ನಿವೃತ್ತ ನ್ಯಾಯಮೂರ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts