More

    ಪರಿಷತ್ ಮತದಾನಕ್ಕೆ ಸಕಲ ಸಿದ್ಧತೆ: ಅ.28 ರಂದು ಮತದಾನ, ನವೆಂಬರ್ 2 ರಂದು ಎಣಿಕೆ

    ಬೆಂಗಳೂರು : ರಾಜ್ಯ ವಿಧಾನ ಪರಿಷತ್ತಿನ ಎರಡು ಶಿಕ್ಷಕರ ಕ್ಷೇತ್ರ ಹಾಗೂ ಎರಡು ಪದವೀಧರ ಕ್ಷೇತ್ರಗಳಿಗೆ ಅ.28ರಂದು ನಡೆಯುವ ಮತದಾನಕ್ಕಾಗಿ ಸಕಲ ಸಿದ್ಧತೆ ನಡೆಸಲಾಗಿದ್ದು, 2,34,718 ಮಂದಿ ಮತ ಚಲಾವಣೆ ಹಕ್ಕು ಹೊಂದಿದ್ದಾರೆ.

    ಒಟ್ಟು ಮತದಾರರ ಪೈಕಿ 1,42,889 ಪುರುಷ, 91,809 ಮಹಿಳಾ ಹಾಗೂ 20 ಇತರೆ ಮತದಾರರು ಒಳಗೊಂಡಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ 47,584 ಪುರುಷ, 26,673 ಮಹಿಳೆ, 11 ಇತರೆ ಮತದಾರರಿದ್ದಾರೆ. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 68,411 ಪುರುಷ, 40,712 ಮಹಿಳೆ ಮತ್ತು 4 ಇತರೆ ಮತದಾರರು ಸೇರಿ 1,09,127 ಜನ ನೋಂದಣಿ ಮಾಡಿಕೊಂಡಿದ್ದಾರೆ.

    ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 18,948 ಪುರುಷ, 10,284 ಮಹಿಳಾ ಮತ್ತು 2 ಇತರೆ ಮತದಾರರು ಸೇರಿ 29,234 ಮತದಾರರಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 7,946 ಪುರುಷ, 14,140 ಮಹಿಳಾ ಹಾಗೂ 3 ಇತರೆ ಸೇರಿ 22,089 ಮತದಾರರಿದ್ದಾರೆ.

    549 ಮತಗಟ್ಟೆ ಸ್ಥಾಪನೆ: ಈ ಚುನಾವಣೆಗೆ ಒಟ್ಟು 549 ಮತಗಟ್ಟೆ ಸ್ಥಾಪಿಸಲಾಗಿದೆ. ಮತದಾನಕ್ಕೂ 48 ಗಂಟೆ ಮುನ್ನ ಬಹಿರಂಗ ಪ್ರಚಾರ ನಡೆಸುವಂತಿಲ್ಲ. ಈ ಚುನಾವಣೆ ಅಕ್ರಮಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 65,899 ರೂ. ಮೌಲ್ಯದ ಮದ್ಯ, 1.50 ಲಕ್ಷ ಬೆಲೆಯ 1 ಕಾರು, 2.41 ಲಕ್ಷ ರೂ. ಮೌಲ್ಯದ 9 ಬೈಕ್ ವಶಕ್ಕೆ ಪಡೆಯಲಾಗಿದೆ.

    ಎಲ್ಲೆಲ್ಲಿ ಮತ ಎಣಿಕೆ?: ನವೆಂಬರ್ 2 ರಂದು ಮತ ಎಣಿಕೆ ನಡೆಯಲಿದೆ. ಪಶ್ಚಿಮ ಪದವೀಧರ ಕ್ಷೇತ್ರದ ಮತ ಎಣಿಕೆ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಕಲಬುರಗಿ ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ನಡೆಯಲಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದ ಹಾಗೂ ಆಗ್ನೇಯ ಪದವೀಧರ ಕ್ಷೇತ್ರದ ಮತ ಎಣಿಕೆ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆಯಲಿವೆ.

    ಕಿಸಾನ್ ಸೂರ್ಯೋದಯ ಲೋಕಾರ್ಪಣೆಗೊಳಿಸಿದ್ರು ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts