More

    ಮದುವೆ ಆರತಕ್ಷತೆಗೆ ಬರಲು ಬಂಧುಮಿತ್ರರಿಗೆ ‘ನೋಟೀಸ್​’! ವಕೀಲ ಜೋಡಿ ನೀಡಿದ ಆಮಂತ್ರಣಪತ್ರಿಕೆ ನೋಡಿ!

    ಗೌಹಾಟಿ: ವಕೀಲರು ಮತ್ತು ಕಾನೂನು ಭಾಷೆಯ ವಿಶಿಷ್ಟತೆಯನ್ನು ಹಿರಿಯ ಸಾಹಿತಿ ಟಿ.ಪಿ.ಕೈಲಾಸಂ ಅವರು ಒಂದು ಕಿತ್ತಳೆಹಣ್ಣನ್ನು ಯಾವ ರೀತಿ ‘ಕಾನೂನುಸಮ್ಮತ ಹಸ್ತಾಂತರ’ ಮಾಡುತ್ತಾರೆ ಎಂದು ವರ್ಣಿಸಿದ್ದನ್ನು ನೀವು ಓದಿರಬಹುದು. ಇದೇ ಮಾದರಿಯಲ್ಲಿ ಅಸ್ಸಾಂನ ವಕೀಲ ಜೋಡಿಯೊಂದು ತಮ್ಮ ಮದುವೆಯ ಆಮಂತ್ರಣವನ್ನು ಕಾನೂನು ಭಾಷೆಯಲ್ಲಿ ಹೆಣೆದು ನೆಟ್ಟಿಗರ ಹುಬ್ಬೇರಿಸಿದೆ.

    ಅಸ್ಸಾಂನ ಗೌಹಾಟಿಯ ವಕೀಲರಾದ ಅಜಯ್​ ಸರ್ಮ ಮತ್ತು ಪೂಜಾ ಸರ್ಮ ಅವರ ವಿವಾಹ ಆರತಕ್ಷತೆಯ ಆಮಂತ್ರಣ ‘ನೋಟೀಸ್​’ ಎಂಬ ತಲೆಬರಹದೊಂದಿಗೆ ಆರಂಭವಾಗುತ್ತದೆ. ವಧುವರರ ಹೆಸರುಗಳನ್ನು ನ್ಯಾಯದ ತಕ್ಕಡಿಯ ಮೇಲೆ ಮುದ್ರಿಸಲಾಗಿದೆ. ಜೊತೆಗೆ, ಮದುವೆಯಾಗುವುದು ಸಂವಿಧಾನದ ಪರಿಚ್ಚೇಧ 21 ರ ಜೀವಿಸುವ ಹಕ್ಕಿನ ಒಂದು ಭಾಗ ಎಂದು ಹೇಳಿ, ಸಂವಿಧಾನದ ಹಕ್ಕಿನ ಅನುಸಾರವೇ ಜನರು ಶಾಂತಿಯುತವಾಗಿ ಒಂದೆಡೆ ಸೇರಬಹುದಾಗಿದ್ದು, ತಾವು ನಮ್ಮ ಮದುವೆಗೆ ಬರಬೇಕು ಎಂದು ಆಮಂತ್ರಣ ನೀಡಲಾಗಿದೆ.

    ಮತ್ತೊಂದು ಪುಟದಲ್ಲಿ ಕೋರ್ಟಿಗೆ ಹಾಕುವ ಅರ್ಜಿಯಲ್ಲಿ ಬರೆಯುವಂತೆ ‘ಇನ್​ ದ ಬ್ಯೂಟಿಫುಲ್​ ಕೋರ್ಟ್​ ಆಫ್​ ಲೈಫ್’​ ಎಂಬ ತಲೆಬರಹದೊಂದಿಗೆ ಆರಂಭಿಸಿ ವರನ ಮತ್ತು ವಧುವಿನ ವಿವರಗಳನ್ನು ನಮೂದಿಸಿದ್ದಾರೆ. 1955ರ ಹಿಂದೂ ವಿವಾಹ ಕಾಯ್ದೆಗೆ ಅನುಸಾರವಾಗಿ ಮದುವೆಯಾಗುತ್ತಿದ್ದೇವೆ. ಆರತಕ್ಷತೆಯನ್ನು ಡಿಸೆಂಬರ್ 1 ಕ್ಕೆ ಇಟ್ಟುಕೊಂಡಿದ್ದೇವೆ. ನೀವು ನಿಮ್ಮ ಕುಟುಂಬದೊಂದಿಗೆ ಖುದ್ದಾಗಿ ಹಾಜರಾಗಿ ಹರಸಬೇಕು ಎಂದು ಹೇಳಿದ್ದಾರೆ. ಈ ಆಮಂತ್ರಣ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿ ನೋಡುಗರ ಮುಖದಲ್ಲಿ ನಗೆ ಮೂಡಿಸುತ್ತಿದೆ. (ಏಜೆನ್ಸೀಸ್)

    ಹೊಸ ಮನೆಯೊಂದಿಗೆ ಹೊಸ ಜೀವನಕ್ಕೆ ಕಾಲಿಡಲಿದ್ದಾರಾ, ನಟಿ ನಯನತಾರಾ?!

    ಡಾ.ರತ್ನಾಕರ್​ ಕಾಮಪುರಾಣ: 8 ಮಹಿಳೆಯರೊಂದಿಗೆ ಅನುಚಿತ ವರ್ತನೆ; ಶೀಘ್ರವೇ ಸಂತ್ರಸ್ತರ ಹೇಳಿಕೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts