More

    ವರ್ತೂರು ಸಂತೋಷ್‌ಗೆ ಲೀಗಲ್ ನೋಟಿಸ್ ರವಾನೆ: ಕಾರಣ ಕೊಟ್ಟ ಹಳ್ಳಿಕಾರ್ ತಳಿ ಸಾಕಾಣಿಕೆದಾರ ರವಿಕುಮಾರ್

    ಮಂಡ್ಯ: ವರ್ತೂರು ಸಂತೋಷ್ ತಾನು ‘ಹಳ್ಳಿಕಾರ್ ಒಡೆಯ’ ಎಂದು ಬಿಂಬಿಸಿಕೊಳ್ಳುವುದರ ಜತೆಗೆ ಸ್ವಾರ್ಥಕ್ಕಾಗಿ ಹಳ್ಳಿಕಾರ್ ಗೋತಳಿಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಆಕ್ಷೇಪಣೆ ವ್ಯಕ್ತವಾಗಿದ್ದರೂ ತಪ್ಪನ್ನು ಸರಿಪಡಿಸಿಕೊಳ್ಳದ ಹಿನ್ನೆಲೆಯಲ್ಲಿ ಆತನಿಗೆ ಲೀಗಲ್ ನೋಟಿಸ್ ನೀಡಲಾಗಿದೆ ಎಂದು ಹಳ್ಳಿಕಾರ್ ತಳಿ ಸಾಕಾಣಿಕೆದಾರ ಕಲ್ಲಹಳ್ಳಿ ರವಿಕುಮಾರ್ ತಿಳಿಸಿದರು.
    ಅನಾದಿ ಕಾಲದಿಂದಲೂ ಪಾರಂಪಾರಿಕವಾಗಿ ಹಳ್ಳಿಕಾರ್ ಗೋತಳಿಯನ್ನು ಪೋಷಿಸಿ ಸಂರಕ್ಷಿಸಿಕೊಂಡು ಬರುತ್ತಿರುವ ಲಕ್ಷಾಂತರ ಕುಟುಂಬಗಳು ಇವೆ. ವಿಜಯನಗರ ಅರಸ ಶ್ರೀ ಕೃಷ್ಣದೇವರಾಯರು ಹಳ್ಳಿಕಾರ್ ತಳಿ ಸಂರಕ್ಷಿಸಿದರು. ಮೈಸೂರು ಅರಸ ಚಿಕ್ಕದೇವರಾಜ ಒಡೆಯರವರ ಕಾಲದಲ್ಲಿ ಗೋವುಗಳ ಪೋಷಣೆ ಮಾಡಿದ್ದಾರೆ. ಮಾತ್ರವಲ್ಲದೆ ಇದಕ್ಕಾಗಿಯೇ ಹಳ್ಳಿಕಾರ್ ಕಾವಲ್(ಗೋಮಾಳ)ಗಳನ್ನು ಮಾಡುವ ಮುಖಾಂತರ ತಳಿ ಅಭಿವೃದ್ಧಿ ಮಾಡಿದರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಆದರೆ ವರ್ತೂರು ಸಂತೋಷ್ ಹಳ್ಳಿಕಾರ್ ಗೋತಳಿಯ ಇತಿಹಾಸವನ್ನೇ ತಿರುಚುವಂತಹ ಪ್ರಯತ್ನ ಮಾಡುತ್ತಿದ್ದು, ಮುಂದಿನ ಪೀಳಿಗೆಯವರಿಗೆ ತಪ್ಪು ಸಂದೇಶವನ್ನು ರವಾನಿಸುತ್ತಿದ್ದರು. ಈ ಬಗ್ಗೆ ತಿಳಿವಳಿಕೆ ಹೇಳಿರುವುದನ್ನು ಪರಿಗಣಿಸದೆ, ತನ್ನ ಉದ್ಧಟತನವನ್ನು ಮುಂದುವರಿಸುತ್ತಿರುವುದರಿಂದ ಲೀಗಲ್ ನೋಟಿಸ್ ಅನ್ನು ನೀಡಲಾಗಿದೆ. ಇದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಚೇರ್ಮನ್ ಆಫ್ ಆಲ್ ಇಂಡಿಯಾ ಹಳ್ಳಿಕಾರ್ ಬ್ರೀಡ್ ಕನ್ಸರ್ವೇಷನ್ ಕಮಿಟಿ ಎಂದು ಸುಳ್ಳು ಮಾಹಿತಿ ಬಿತ್ತರಿಸುತ್ತಿರುವುದರ ವಿರುದ್ಧವಾಗಿಯೂ ಗೂಗಲ್ ಸಂಸ್ಥೆ ಬೆಂಗಳೂರು ಕಚೇರಿಗೂ ಸಮಜಾಯಿಷಿ ನೀಡುವಂತೆ ಪತ್ರ ಬರೆಯಲಾಗಿದೆ ಎಂದು ವಿವರಿಸಿದರು.
    ಮುಖಂಡರಾದ ಕಿರಣ್ ಪಟೇಲ್, ಪ್ರಜ್ವಲ್, ದೀಕ್ಷಿತ್, ಪ್ರಶಾಂತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts