More

    ಕೋರ್ಟ್​ ಮೆಟ್ಟಿಲೇರಿತು ಮಣಿರತ್ನಂ ನಿರ್ದೇಶನದ ಪೊನ್ನಿಯಿನ್​ ಸೆಲ್ವನ್​ ಸಿನಿಮಾ! ಕಾರಣ ಇಲ್ಲಿದೆ

    ಚೆನ್ನೈ: ಖ್ಯಾತ ನಿರ್ದೇಶಕ ಮಣಿರತ್ನಂ ಅವರು ನಿರ್ದೇಶಿಸಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಪೊನ್ನಿಯಿನ್​ ಸೆಲ್ವನ್​ಗೆ ಈಗ ಕಾನೂನು ಅಡ್ಡಿಯಾಗಿದೆ.

    ಚೆನ್ನೈ ಮೂಲದ ಸಂಘಟನೆಯೊಂದು ಚಿತ್ರತಂಡಕ್ಕೆ ನೋಟಿಸ್​ ಜಾರಿ ಮಾಡಿದೆ.ಐಶ್ವರ್ಯಾ ರೈ, ವಿಕ್ರಮ್​, ತ್ರಿಶಾ ಸೇರಿದಂತೆ ಬಹುತಾರಾಗಣವಿರುವ ಈ ಚಿತ್ರ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ.

    ಸದ್ಯ ಚಿತ್ರೀಕರಣ ನಡೆಯುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಪೋಸ್ಟರ್​ ಭಾರೀ ಮೆಚ್ಚುಗೆ ಗಳಿಸಿತ್ತು. ಭಾರೀ ವೆಚ್ಚದ ಈ ಚಿತ್ರ ಐತಿಹಾಸಿಕ ಕಥಾಹಂದರ ಹೊಂದಿರಬಹುದೆಂದು ಚಿತ್ರದ ಪೋಸ್ಟರ್​ನಿಂದಲೇ ತಿಳಿಯುತ್ತದೆ.

    ಅಂದಹಾಗೆ ಸದ್ಯ ಈ ಚಿತ್ರದ ವಿರುದ್ಧ ಸಮುದಾಯವೊಂದು ಗರಂ ಆಗಿದೆ. ಅದುವೇ ಚೋಳ ಸಮುದಾಯ. ಚಿತ್ರದಲ್ಲಿ ಚೋಳ ಸಮುದಾಯವನ್ನು ತಪ್ಪಾಗಿ ಚಿತ್ರೀಕರಿಸಲಾಗಿದೆ ಎಂದು ಆರೋಪಿಸಿ ಈ ಸಮುದಾಯದ ಸಂಘಟನೆಯೊಂದು ಕೋರ್ಟ್ ಮೆಟ್ಟಿಲೇರಿದೆ.

    ಕಲ್ಕಿ ಕೃಷ್ಣಮೂರ್ತಿ ಅವರು ಬರೆದಿರುವ ಪುಸ್ತಕದಿಂದ ಈ ಕಥೆಯನ್ನು ಆಯ್ದುಕೊಳ್ಳಲಾಗಿದೆ.ಪುಸ್ತಕಕ್ಕೆ ನೀಡಿರುವ ಹೆಸರನ್ನೇ ಚಿತ್ರಕ್ಕೂ ಇಟ್ಟಿರುವುದು ಈ ಚಿತ್ರದ ಮತ್ತೊಂದು ವಿಶೇಷ. ಸದ್ಯ ಕಾನೂನು ನೋಟಿಸ್​ ನೀಡಲಾಗಿದ್ದು, ಚಿತ್ರತಂಡ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.(ಏಜೆನ್ಸೀಸ್​)

    ಗುಂಡೇಟಿನಿಂದ ಯೋಧನ ಜೀವ ಬದುಕಿಸಿತು ಐಫೋನ್​!

    ಇಲ್ಲಿ ಶಾಲೆಗೆ ಹೋಗಬೇಕಂದ್ರೆ ವಿದ್ಯಾರ್ಥಿಗಳು ಪ್ಯಾಂಟ್‌ ಕಳಚಲೇಬೇಕು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts