More

    ಪೊನ್ನಿಯಿನ್​ ಸೆಲ್ವನ್​ ಚಿತ್ರಕ್ಕೆ ಮತ್ತೊಂದು ಅಡ್ಡಿ: ನಿರ್ದೇಶಕರಿಗೆ ಕರೋನಾ ಲಕ್ಷಣ, ಆಸ್ಪತ್ರೆಗೆ ದಾಖಲು

    ಚೆನ್ನೈ: ಆರು ಬಾರಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿರುವ ಖ್ಯಾತ ಚಿತ್ರ ನಿರ್ದೇಶಕ ಮಣಿರತ್ನಂ ಅವರು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕರೋನಾ ಲಕ್ಷಣ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸದ್ಯ ಕರೋನಾ ಪಾಸಿಟಿವ್​ ಬಂದಿಲ್ಲವಾದರೂ, ಅದರ ಲಕ್ಷಣ ಕಾಣಿಸಿಕೊಂಡಿರುವುದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

    10 ದಿನಗಳ ಹಿಂದಷ್ಟೇ ಬಹುನಿರೀಕ್ಷಿತ ಪೊನ್ನಿಯಿನ್ ಸೆಲ್ವನ್​ ಚಿತ್ರದ ಟೀಸರ್​ ಬಿಡುಗಡೆಯಾಗಿತ್ತು. ಈ ಮುನ್ನ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ವಿಕ್ರಮ್​​ ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನು ಕಳೆದ ಎರಡು ಮೂರು ದಿನಗಳ ಹಿಂದಷ್ಟೇ ಚಿತ್ರಕ್ಕೆ ಕಾನೂನು ತೊಡಕು ಉಂಟಾಗಿತ್ತು. ಇದೀಗ ನಿರ್ದೇಶಕರೇ ಆಸ್ಪತ್ರೆಗೆ ದಾಖಲಾಗಿದ್ದಾರೆ. 

    ಚಿತ್ರದಲ್ಲಿ ವಿಕ್ರಮ್​, ಐಶ್ವರ್ಯಾ ರೈ, ಜಯರಾಮ್​ ರವಿ, ಕಾರ್ತಿ, ತ್ರಿಶಾ, ಐಶ್ವರ್ಯಾ ಲಕ್ಷ್ಮಿ, ಆರ್​.ಶರತ್​ ಕುಮಾರ್​ ಮತ್ತು ಶೋಬಿತಾ ಧುಲ್ಪೀಯಾ ಸೇರಿದಂತೆ ಬಹುತಾರಾಗಣ ಹೊಂದಿದೆ. ಸದ್ಯ ಬಿಡುಗಡೆಯಾಗಿರುವ ಟೀಸರ್​ ಭಾರೀ ನಿರೀಕ್ಷೆ ಹುಟ್ಟಿಸಿದ್ದು, ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts