More

    ನ್ಯಾಯದೇವತೆ: ಹೆಂಡತಿ ತಂಗಿಯೂ ಗರ್ಭಿಣಿ, ಈ ಅನೈತಿಕ ಸಂಬಂಧದಿಂದ ತೊಂದರೆ ಇದೆಯೇ?

    ನ್ಯಾಯದೇವತೆ: ಹೆಂಡತಿ ತಂಗಿಯೂ ಗರ್ಭಿಣಿ, ಈ ಅನೈತಿಕ ಸಂಬಂಧದಿಂದ ತೊಂದರೆ ಇದೆಯೇ?ಪ್ರಶ್ನೆ: ನಾನು ಏಳು ವರ್ಷ ಪ್ರೀತಿಸಿದ ಹುಡುಗನನ್ನು ಮದುವೆಯಾದೆ. ಮದುವೆ ಆಗಿ ಎಂಟು ತಿಂಗಳಾಗಿದೆ. ಈಗ ನಾನು ಐದು ತಿಂಗಳ ಗರ್ಭಿಣಿ. ನನ್ನ ಗಂಡ ಮತ್ತು ಅವನ ತಾಯಿ ಮತ್ತು ಅವನ ತಂಗಿ ನನಗೆ ಕೊಡಬಾರದ ಹಿಂಸೆ ಕೊಡುತ್ತಿದ್ದಾರೆ, ನನ್ನ ಬಾಯಿಯನ್ನು ಪಂಚೆಯ ತುಂಡಿನಲ್ಲಿ ಕಟ್ಟಿ ಹಾಕಿ ಗರ್ಭಿಣಿ ಆದ ನನ್ನನ್ನು ಹೊಡೆಯುತ್ತಾರೆ. ಕೆಟ್ಟ ಕೆಟ್ಟ ಪದಗಳಿಂದ ಬಯ್ಯುತ್ತಾರೆ. ನೀನು ನಿನ್ನ ತವರಿನಿಂದ ಐವತ್ತು ಲಕ್ಷ ತೆಗೆದುಕೊಂಡು ಬಾ ಎಂದು ಹೇಳುತ್ತಿದ್ದಾರೆ. ನಾನು ತವರಿನವರನ್ನು ಎದುರುಹಾಕಿಕೊಂಡು ಮದುವೆ ಆದುದರಿಂದ ನನಗೆ ಅವರ ಸಹಾಯವೂ ಇಲ್ಲ. ಈಗ ಗರ್ಭಪಾತ ಮಾಡಲು ಆಗುವುದಿಲ್ಲ ಮಗು ಬೆಳೆದಿದೆ ಎಂದು ಡಾಕ್ಟರು ಹೇಳುತ್ತಾರೆ. ನನಗೆ ಏನು ಮಾಡಲೂ ತಿಳಿಯುತ್ತಿಲ್ಲ. ದಯವಿಟ್ಟು ಸಲಹೆ ಕೊಡಿ.

    ಉತ್ತರ: ನೀವು ಹೆದರ ಬೇಡಿ. ತಕ್ಷಣ ಪೊಲೀಸ್ ಠಾಣೆಗೆ ಹೋಗಿ ಕಂಪ್ಲೇಂಟು ಕೊಡಿ. ನಿಮಗೆ ರಕ್ಷಣೆ ಕೊಡುತ್ತಾರೆ. ಹಾಗೆಯೇ ನಿಮ್ಮ ತಾಲ್ಲೂಕಿನ ನ್ಯಾಯಾಲಯಕ್ಕೆ ಹೋಗಿ. ಅಲ್ಲಿ ಉಚಿತ ಕಾನೂನು ಸೇವಾ ಕೇಂದ್ರ ಇರುತ್ತದೆ. ಅಲ್ಲಿ ನಿಮ್ಮ ವಿಷಯ ತಿಳಿಸಿ. ತಕ್ಷಣ ಡಿ.ವಿ. ಕೇಸು ಹಾಕಲು ಎಲ್ಲ ವ್ಯವಸ್ಥೆ ಮಾಡುತ್ತಾರೆ. ನಿಮ್ಮ ಗಂಡ, ಅವರ ತಾಯಿ ಮತ್ತು ತಂಗಿ ನಿಮ್ಮನ್ನು ಹಿಂಸೆ ಮಾಡದಂತೆ, ನಿಮ್ಮನ್ನು ಮನೆಯಿಂದ ಹೊರಗೆ ಹಾಕದಂತೆ ಆದೇಶ ಕೊಡುತ್ತಾರೆ. ಅವರನ್ನೆಲ್ಲಾ ಕರೆಸಿ ಎಚ್ಚರ ಕೊಡುತ್ತಾರೆ. ನೀವು ಹೆರದಿಕೊಂಡು ಗಂಡನ ಮನೆ ಬಿಟ್ಟು ಹೊರಕ್ಕೆ ಬರಬೇಡಿ. ಕಾನೂನಿನ ಸಹಾಯ ಪಡೆಯಿರಿ. ಅನ್ಯಾಯವನ್ನು ಸಹಿಸುವುದು ಮರ್ಯಾದೆಯ ಅಂಶವಲ್ಲ. ಅದನ್ನು ಎದುರಿಸಬೇಕು. ಗರ್ಭಿಣಿಯಾದ ನಿಮಗೂ ಪೊಲೀಸರು ತಕ್ಷಣ ಸಹಾಯ ಕೊಡುತ್ತಾರೆ.

    ಪ್ರಶ್ನೆ: ನನಗೆ ಮದುವೆಯಾಗಿ ಮೂರು ಮಕ್ಕಳು ಇದ್ದಾರೆ. ನಾನು ಸರ್ಕಾರಿ ಕೆಲಸದಲ್ಲಿ ಇದ್ದೇನೆ. ನನ್ನ ಹೆಂಡತಿ ನಾಲ್ಕನೇ ಹೆರಿಗೆಗೆ ತವರಿಗೆ ಹೋಗಿದ್ದಾಗ ಅವಳ ತಂಗಿ ನಮಗೆ ಸಹಾಯ ಮಾಡಲು ಮನೆಗೆ ಬಂದಿದ್ದಳು. ಅವಳ ಮತ್ತು ನನ್ನ ಜೊತೆ ದೈಹಿಕ ಸಂಪರ್ಕ ಆಗಿ ಈಗ ಆಕೆ ಗರ್ಭಿಣಿ ಆಗಿದ್ದಾಳೆ. ನಾನು ಅವಳನ್ನು ಮದುವೆ ಆಗಬೇಕೆಂದು ಹಿಂಸೆ ಮಾಡುತ್ತಿದ್ದಾಳೆ. ಇಲ್ಲದಿದ್ದರೆ ಅವಳಿಗೆ ಒಂದು ಕೋಟಿ ಕೊಡಬೇಕು ಎನ್ನುತ್ತಿದ್ದಾಳೆ. ನಾನು ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ನನ್ನ ಹತ್ತಿರ ಅಷ್ಟು ಹಣವೂ ಇಲ್ಲ. ಅವಳನ್ನು ರಿಜಿಸ್ಟರ್‌ ಮದುವೆ ಆಗಿಬಿಡಲೇ?

    ಉತ್ತರ: ಮದುವೆಯಾಗಿ ಮೂವರು ಮಕ್ಕಳು ಇರುವ ನೀವು ಮತ್ತೊಬ್ಬ ಹೆಣ್ಣಿನ ಜೊತೆ ದೈಹಿಕ ಸಂಬಂಧ ಇಟ್ಟುಕೊಂಡದ್ದು ತಪ್ಪು. ನಿಮ್ಮ ಪತ್ನಿಯಿಂದ ವಿಚ್ಛೇದನ ತೆಗೆದುಕೊಳ್ಳದೆ ಅವಳನ್ನು ಮದುವೆಯಾದರೆ ಅದು ಅಪರಾಧವಾಗುತ್ತದೆ. ನಿಮ್ಮ ಕೆಲಸದ ಮೇಲೆಯೂ ಪರಿಣಾಮ ಬೀರಬಹುದು. ನಿಮ್ಮ ಪತ್ನಿಯ ಜೊತೆ ಎಲ್ಲ ವಿಷಯವನ್ನೂ ಮುಚ್ಚುಮರೆ ಇಲ್ಲದೆ ತಿಳಿಸಿ., ಆಕೆಯಿಂದ ಕ್ಷಮಾಪಣೆ ಕೇಳಿ. ನಿಮ್ಮ ಪತ್ನಿಯ ಮತ್ತು ಅವರ ತವರಿನವರ ಮೂಲಕ ನಿಮ್ಮ ಪತ್ನಿಯ ತಂಗಿಗೆ ಕೂಡಲೇ ತಿಳುವಳಿಕೆ ಕೊಡಿಸಿ. ಈ ಅನೈತಿಕ ಸಂಬಂಧವನ್ನು ಕೂಡಲೇ ನಿಲ್ಲಿಸುವುದು ಒಳ್ಳೆಯದು. ಒಂದು ವೇಳೆ ರಾಜಿ ಮಾತುಕತೆ ಸಫಲವಾಗದೇ ಹೋದರೆ, ನಿಮ್ಮ ಹೆಂಡತಿಯ ತಂಗಿಯ ಮಗುವಿಗೆ ಮುಂದೆ ನೀವು ಜೀವನಾಂಶ ಕೊಡಬೇಕಾಗಿಬರಬಹುದು. ಆ ಮಗುವಿಗೆ ನೀವು ತೀರಿಕೊಂಡ ಮೇಲೆ ನಿಮ್ಮ ಆಸ್ತಿಯಲ್ಲಿ ನಿಮ್ಮ ಮೊದಲ ಹೆಂಡತಿಗೆ ಮತ್ತು ನಿಮ್ಮ ಮೊದಲ ಹೆಂಡತಿಯ ಮಕ್ಕಳಿಗೆ ಬರುವಷ್ಟೇ ಭಾಗ ಸಿಗುತ್ತದೆ.

    (ಲೇಖಕರು ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲರು ಮತ್ತು ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಹಿರಿಯ ಮಧ್ಯಸ್ಥಿಕೆಗಾರರು.)

    ಇನ್ನೇನು ನಿಮ್ಮ ಕೆಲಸದ ಅವಧಿ ಮುಗಿಯುತ್ತೆ, ಮನೆಗೆ ಹೊರಡಿ: ಈ ಕಂಪನಿಯಲ್ಲಿ ಉದ್ಯೋಗಿಗಳಿಗೆ ಹೀಗೊಂದು ಎಚ್ಚರಿಕೆ!

    ಎಂಬಿಬಿಎಸ್​ ವಿದ್ಯಾರ್ಥಿನಿ ಮೇಲೆ ಅಪ್ಪ-ಮಗನ ಅತ್ಯಾಚಾರ; ಇಸ್ಲಾಂ ಧರ್ಮಕ್ಕೆ ಮತಾಂತರಿಸಲೂ ಯತ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts