More

    ಮುನಿಸು ಬಿಟ್ಟು ಒಂದಾದ ಜೋಡೆತ್ತು

    ತುಮಕೂರು: ಶಿರಾ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಸ್ವಪಕ್ಷೀಯರ ಜತೆ ಸಂಧಾನ ಆರಂಭಿಸಿದ್ದು ಬಹುಕಾಲದ ಒಡನಾಡಿ, ಮಾಜಿ ಶಾಸಕ ಕೆ.ಎನ್.ರಾಜಣ್ಣ ನಿವಾಸಕ್ಕೆ ತೆರಳಿ ಮತದಾರರಿಗೆ ಮೊದಲ ಸಂದೇಶ ರವಾನಿಸಿದರು.

    ತುಮಕೂರಿನ ಕ್ಯಾತಸಂದ್ರದಲ್ಲಿರುವ ಕೆ.ಎನ್.ರಾಜಣ್ಣ ನಿವಾಸಕ್ಕೆ ಭಾನುವಾರ ಬೆಳಗ್ಗೆ ಆಗಮಿಸಿದ ಟಿ.ಬಿ.ಜಯಚಂದ್ರ ದಂಪತಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ರಾಜಣ್ಣ ಅವರನ್ನು ಅಭಿನಂದಿಸಿ ಗಂಟೆಗೂ ಹೆಚ್ಚುಕಾಲ ರಾಜಕೀಯ ವಿದ್ಯಮಾನ ಚರ್ಚಿಸಿದರು ಎನ್ನಲಾಗಿದೆ.
    ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಇಬ್ಬರೂ ಮುಖಂಡರು ನಮ್ಮ ನಡುವಿನ ಭಿನ್ನಾಭಿಪ್ರಾಯ ಮರೆತು ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸುವುದಾಗಿ ೋಷಿಸಿದರು.

    ಕೆ.ಎನ್.ರಾಜಣ್ಣ ಮಾತನಾಡಿ, ನಾವು ಜೋಡೆತ್ತುಗಳು, ಒಂದೇ ಬಣ್ಣ ಒಂದೇ ರೀತಿಯ ಕೊಂಬುಗಳು ಇವೆ. ಹಾಗಾಗಿ, ನಮ್ಮ ನಡುವೆ ವ್ಯತ್ಯಾಸ ಬರುವುದ್ಲಿ. ಮಂಡ್ಯ ಎತ್ತುಗಳು ಒಂದು ಕರಿಯ ಬಣ್ಣದ್ದು, ಮತ್ತೊಂದು ಬಿಳಿಯ ಬಣ್ಣದ್ದು ಹಾಗಾಗಿ ಅಲ್ಲಿ ವ್ಯತ್ಯಾಸ ಬರುತ್ತದೆ. ಜಿಲ್ಲೆಯಲ್ಲಿ ಅಂತಹ ವ್ಯತ್ಯಾಸ ಬರುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

    ನನ್ನ ಮತ್ತು ಜಯಚಂದ್ರ ನಡುವೆ ಕೆಲವು ಅಸಮಾಧಾನ ಇದ್ದುದು ನಿಜ, ಕಳೆದ ಜಿಪಂ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಹಾಗೂ ಇನ್ನಿತರ ವಿಷಯಗಳಲ್ಲಿ ಗೊಂದಲಗಳು ಉಂಟಾಗಿದ್ದವು. ಪಕ್ಷದ ರಾಜ್ಯ ಮುಖಂಡರು ನಮ್ಮನ್ನು ಕರೆಸಿ ಮಾತುಕತೆ ನಡೆಸಿದ ಹಿನ್ನೆಲೆಯಲ್ಲಿ ಗೊಂದಲಗಳು ಬಗೆಹರಿದಿವೆ ಎಂದು ಸ್ಪಷ್ಟನೆ ನೀಡಿದರು.

    ಪಕ್ಷದ ಹಿತದೃಷ್ಟಿಂದ ಎ್ಲವನ್ನೂ ಮರೆತು ಶಿರಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಗೆಲುವಿಗೆ ಶ್ರಮಿಸುತ್ತೇನೆ, ಕ್ಷೇತ್ರದಲ್ಲಿಯೂ ಪ್ರಚಾರ ನಡೆಸುವಂತೆ ನನ್ನ ಬೆಂಬಲಿಗರಿಗೂ ಕೋರುತ್ತೇನೆ ಎಂದರು.

    ಹೈಕಮಾಂಡ್ ನಮ್ಮ ನಡುವಿನ ಗೊಂದಲ ನಿವಾರಿಸಿರುವುದರಿಂದ ಸ್ವಾಭಿಮಾನದ ಪ್ರಶ್ನೆ ಉದ್ಭವಿಸುವುದ್ಲಿ. ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಮುಖ್ಯ ಹಾಗೂ ಡಾ.ಜಿ.ಪರಮೇಶ್ವರ್ ಜತೆಗಿನ ಭಿನ್ನಾಭಿಪ್ರಾಯ ಇದ್ದು ಇದೆಲ್ಲ ಸಹಜ ಎಂದರು.

    ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ ಎದ್ದಿದೆ. ರಾಜ್ಯ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡುತ್ತ್ಲಿ. ಪ್ರಧಾನಿ ಮೋದಿ ಆಡಳಿತ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ. ಮೋದಿ ಅಲೆ ಕೆಲಸ ಮಾಡುವುದ್ಲಿ. ಇತ್ತೀಚೆಗೆ ಮೋದಿ ವಿಡಿಯೋಗಳಿಗೆ ಜನ ಡಿಸ್‌ಲೈಕ್ ಒತ್ತಿರುವುದು ಗಮನಿಸಬಹುದು ಎಂದರು.

    ರಾಜಣ್ಣ ನೇರ ಹಾಗೂ ಮುಕ್ತವಾಗಿ ಮಾತನಾಡುತ್ತಾರೆ, ಮಾಧ್ಯಮಗಳು ಅದನ್ನೇ ದೊಡ್ಡದು ಮಾಡುತ್ತೀರಾ ಮತ್ತು ತಪ್ಪು ವ್ಯಾಖ್ಯಾನ ಮಾಡುತ್ತೀರಾ. ನಮ್ಮ ನಡುವೆ ಯಾವುದೇ ವ್ಯತ್ಯಾಸ ಇ್ಲ, ನಮ್ಮ ರಾಜಕೀಯ ಅನುಭವ ಬಳಸಿಕೊಂಡು ಜಿಲ್ಲೆಯ ಅಭಿವೃದ್ಧಿ ಮಾಡಿ ಪಕ್ಷ ಬಲಪಡಿಸಬೇಕು ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಿ.ಜೆ.ರಾಜಣ್ಣ, ಶಾಂತಲಾ ಕೆ.ಎನ್.ರಾಜಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ರಾಜೇಂದ್ರ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಶಶಿಹುಲಿಕುಂಟೆ ಮತ್ತಿತರರು ಇದ್ದರು.

    ಜಿಲ್ಲೆಯಲ್ಲಿ ನಾನು, ಪರಮೇಶ್ವರ್, ಷಡಕ್ಷರಿ, ರಾಜಣ್ಣ ಸೇರಿ ಪಕ್ಷದ ಬಹುತೇಕರಿಗೆ ವಯಸ್ಸಾಗುತ್ತಿದೆ, ಹಾಗಾಗಿ, ಹೊಸ ತಲೆಮಾರಿನ ನಾಯಕತ್ವಕ್ಕೆ ವೇದಿಕೆ ಬಿಟ್ಟುಕೊಡಬೇಕಿದ್ದು ಹಿರಿಯ ನಾಯಕರು ಹೊಂದಿಕೊಂಡು ಹೋಗಬೇಕು, ಇದನ್ನೇ ಬೆಂಗಳೂರಿನ ಸಭೆಯಲ್ಲಿಯೂ ಹೈಕಮಾಂಡ್ ನಮಗೆ ಸೂಚಿಸಿದೆ.
    ಟಿ.ಬಿ.ಜಯಚಂದ್ರ ಮಾಜಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts