More

    ಕಲಿಕಾ ಆಸಕ್ತಿ ಹೆಚ್ಚಿಸುವ ಬರಹ

    ಯಲಬುರ್ಗಾ: ಶಾಲಾ ಗೋಡೆ, ಕಾಂಪೌಂಡ್‌ಗೆ ಆಕರ್ಷಕ ಚಿತ್ರ, ವ್ಯಾಕರಣ, ನುಡಿಮುತ್ತುಗಳ ಬರಹ ಸ್ಪೂರ್ತಿದಾಯಕ ಎಂದು ಮುಖ್ಯಶಿಕ್ಷಕ ಮಹೇಶ ಕಟಗೇರಿ ಹೇಳಿದರು.

    ಇದನ್ನೂ ಓದಿ: ‘ಸನಾತನ ಸಂಸ್ಥೆಯ ಮೇಲಿನ ದಾಳಿಯ ಹಣೆಬರಹವಿದು’: ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಹೇಳಿಕೆ ವೈರಲ್

    ತಾಲೂಕಿನ ಲಕಮನಗುಳೆ (ಕೆಂಪಳ್ಳಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವಬಂಧು ಸೇವಾ ಗುರುಬಳಗದಿಂದ ಹಮ್ಮಿಕೊಂಡಿದ್ದ ಗೋಡೆ ಬರಹ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.

    ರಜೆ ದಿನಗಳಲ್ಲಿ ಗುರುಬಳಗದ ಅಪರೂಪದ ಕಾರ್ಯ ಶ್ಲಾಘನಾರ್ಹ. ವಿವಿಧ ಕಲಿಕಾಂಶಗಳ ಗೋಡೆ ಬರಹಗಳ ಮೂಲಕ ಶಾಲೆ ಸುಂದರವಾಗಿ ಕಾಣಿಸುತ್ತಿದೆ. ಮಕ್ಕಳ ಕಲಿಕಾ ಆಸಕ್ತಿಯನ್ನು ಹೆಚ್ಚಿಸುವ ಬರಹ, ನುಡಿಮುತ್ತುಗಳು ಕಲಿಕೆಗೆ ಸಹಕಾರಿಯಾಗಲಿವೆ ಎಂದರು.

    ಎಸ್ಡಿಎಂಸಿ ಅಧ್ಯಕ್ಷ ಅಮರಪ್ಪ ಅಗಸಿಮುಂದಿನ, ವಿಶ್ವಬಂಧು ಸೇವಾ ಗುರುಬಳಗದ ಮುಖ್ಯಸ್ಥ ಸಿದ್ದಲಿಂಗಪ್ಪ ಶ್ಯಾಗೋಟಿ, ಸದಸ್ಯರಾದ ಕಳಕೇಶ ಬಳಿಗಾರ, ವಿರೇಶ ಮ್ಯಾಗಳೇಶಿ, ಮಲ್ಲಿಕಾರ್ಜುನ ಕುಂಬಾರ, ಕಾಶಿನಾಥ ಮಿಸ್ಕಿನ್, ಶರಣು ವಾಳದ, ಮಹಾವೀರ ಕಲಭಾವಿ, ಪ್ರಭು ಶಿವನಗೌಡ್ರ,

    ಪರಮೇಶ ಚಿಂತಾಮಣಿ, ಮಂಜುನಾಥ ಕೊಡಕೇರಿ, ಶಂಕರ್‌ಹಳ್ಳಿ, ಕೊಟ್ರೇಶ ಪಟ್ಟಣ, ರಮೇಶ ಹೊಂಬಳ, ಮಾರುತಿ ಹಾದಿಮನಿ, ಬಸವರಾಜ ಸಾರಂಗಮಠ, ದೊಡ್ಡಬಸನಗೌಡ, ಸಿದ್ರಾಮಪ್ಪ ತಿಪ್ಪರಸನಾಳ, ರವಿಕುಮಾರ ಅಕ್ಕಿ, ರಾಜಮಹ್ಮದ್ ಬಾಳಿಕಾಯಿ, ಹುಸೇನಸಾಬ ಬಾಗವಾನ್, ಎಂ.ಜಿ.ರಾಯಣ್ಣವರ, ರಾಜಾಭಕ್ಷಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts