More

    ಗೋವಾ ಚುನಾವಣೆಯಲ್ಲಿ ಲಿಯಾಂಡರ್ ಪೇಸ್ ಸ್ಪರ್ಧೆ, ಸಿಎಂ ಅಭ್ಯರ್ಥಿ ಆಗ್ತಾರಾ ಟೆನಿಸ್​ ದಿಗ್ಗಜ?

    ಮಾರ್ಗೋವಾ: ಇತ್ತೀಚೆಗಷ್ಟೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷ ಸೇರಿರುವ ದಿಗ್ಗಜ ಟೆನಿಸ್ ಆಟಗಾರ ಲಿಯಾಂಡರ್ ಪೇಸ್, ಮುಂದಿನ ವರ್ಷದ ಚುನಾವಣೆಗೆ ಪೂರ್ವಭಾವಿಯಾಗಿ ಗೋವಾದಲ್ಲಿ ಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಗೋವಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ಗೂ ಪ್ರಯತ್ನಿಸುತ್ತಿರುವ 48 ವರ್ಷದ ಪೇಸ್, ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಕೂಡ ಸಿದ್ಧವಿರುವುದಾಗಿ ಹೇಳಿದ್ದಾರೆ.

    18 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ವಿಜೇತ ಪೇಸ್, ಕಳೆದ ವರ್ಷಾಂತ್ಯದಲ್ಲಿ ಟೆನಿಸ್‌ನಿಂದ ನಿವೃತ್ತಿ ಹೊಂದಿದ್ದರು. ಪೇಸ್ ಪಶ್ಚಿಮ ಬಂಗಾಳದ ಕೋಲ್ಕತದಲ್ಲಿ ಜನಿಸಿದ್ದರೂ, ಮುತ್ತಜ್ಜ ಅಸೋಲ್ನಾದವರಾಗಿರುವ ಕಾರಣ ಅವರೂ ಗೋವಾದ ಒಡನಾಟ ಹೊಂದಿದ್ದಾರೆ.

    ‘30 ವರ್ಷಗಳ ಕಾಲ ಭಾರತ ಪರ ಆಡಿರುವೆ. ನಾನೀಗ ಟೆನಿಸ್ ಕೋರ್ಟ್‌ನಿಂದ ಜನರ ಕೋರ್ಟ್‌ನತ್ತ ಗಮನಹರಿಸಿರುವೆ. ಅವರಿಗೆ ಗುಣಮಟ್ಟದ ಜೀವನ ನೀಡುವುದು ನನ್ನ ಗುರಿ. ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಗೋವಾಗೆ ಉತ್ತಮ ಆಡಳಿತದ ಅಗತ್ಯವಿದೆ’ ಎಂದು ಪೇಸ್ ಹೇಳಿದ್ದಾರೆ.

    ‘ಯಾವ ರೀತಿಯ ಉತ್ಸಾಹದಲ್ಲಿ ಟೆನಿಸ್ ಆಡಿರುವೆನೋ ಅದೇ ರೀತಿ ರಾಜಕೀಯದಲ್ಲೂ ತೊಡಗಿಕೊಳ್ಳುವೆ. ನನಗೆ ಟಿಕೆಟ್ ದೊರೆತರೆ ಜನರ ಸೇವೆ ಮಾಡುವ ಅವಕಾಶವೂ ಲಭಿಸಲಿದೆ. ಮುಖ್ಯಮಂತ್ರಿಯಾಗುವ ಅವಕಾಶ ದೊರೆತರೆ ಗೋಲ್ಡನ್ ಗೋವಾ ನಿರ್ಮಿಸುವೆ. ಪ್ರತಿ ಸಮಸ್ಯೆಯನ್ನೂ ಗಂಭೀರವಾಗಿ ಪರಿಗಣಿಸುವೆ ಮತ್ತು ಅದನ್ನು ಬಗೆಹರಿಸಲು ತಂಡವೊಂದನ್ನು ಕಟ್ಟುವೆ. ಹಿರಿಯರಿಂದ ಸಲಹೆಗಳಿಂದ ಪಡೆಯುವೆ ಮತ್ತು ಕಠಿಣ ಪರಿಶ್ರಮಪಡುವೆ’ ಎಂದಿದ್ದಾರೆ.

    ಆಸ್ಟ್ರೇಲಿಯಾದ ಮಹಿಳಾ ಬಿಬಿಎಲ್‌ನಲ್ಲಿ ದಾಖಲೆ ನಿರ್ಮಿಸಿದ ಸ್ಮತಿ ಮಂದನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts