More

    ಕಾಶ್ಮೀರದಲ್ಲಿ ಪಕ್ಷ ಬಿಡುತ್ತಿರುವ ಬಿಜೆಪಿ ಕಾರ್ಯಕರ್ತರು; ಕಾರಣ ಏನು ಗೊತ್ತಾ?

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ತಮಗೆ ಇಷ್ಟವಿಲ್ಲದಿದ್ದರೂ ಬಿಜೆಪಿಯ ನೂರಾರು ಮುಖಂಡರು ಮತ್ತು ಸಹಸ್ರಾರು ಕಾರ್ಯಕರ್ತರು ಪಕ್ಷವನ್ನು ಬಿಡುತ್ತಿದ್ದಾರೆ. ಇದಕ್ಕೆ ಪ್ರಾಣಭೀತಿಯೇ ಕಾರಣವಾಗಿದೆ.

    ಕೆಲದಿನಗಳಿಂದ ಕಣಿವೆ ರಾಜ್ಯದಲ್ಲಿ ಬಿಜೆಪಿಯ ಮುಖಂಡರು ಮತ್ತು ಕಾರ್ಯಕರ್ತರನ್ನು ಹುಡುಕಿ ಹುಡುಕಿ ಕೊಲ್ಲಲಾಗುತ್ತಿದೆ. ಸ್ಥಳೀಯ ಸರ್ಕಾರವಾಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ತಮಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸದ ಕಾರಣ ಅವರೆಲ್ಲರೂ ಪಕ್ಷವನ್ನು ತೊರೆಯುತ್ತಿದ್ದಾರೆ ಎನ್ನಲಾಗಿದೆ.

    ಬದ್ಗಾಂನ ಒಬಿಸಿ ಮೋಚಾ ಅಧ್ಯಕ್ಷರಾಗಿದ್ದ ಅಬ್ದುಲ್​ ಹಮೀದ್​ ನಜರ್​ ಅವರನ್ನು ಅಪರಿಚಿತರು ಗುಂಡಿಟ್ಟು ಹತ್ಯೆ ಮಾಡಿದ ನಂತರದಲ್ಲಿ ಪಕ್ಷವನ್ನು ತೊರೆಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಭಾನುವಾರ ತಮ್ಮ ಗ್ರಾಮಕ್ಕೆ ತೆರಳಿದ್ದಾಗ ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ಮಾಡಿದ ಹಿನ್ನೆಲೆಯಲ್ಲಿ ಮೊಹಿಂದಪೋರಾ ಪ್ರದೇಶದ ಅಬ್ದುಲ್​ ಹಮಿದ್​ ನಜರ್​ ಮೃತಪಟ್ಟಿದ್ದರು.

    ಇದನ್ನೂ ಓದಿ: ಬೆತ್ತಲಾಗಲಿದ್ದಾರೆ ನಟಿ ಶ್ರದ್ಧಾ ಕಪೂರ್!; ಬಾಲಿವುಡ್​ ಸುಂದರಿಯ ಶಾಕಿಂಗ್​ ಪ್ರಯೋಗ

    ಕಳೆದೊಂದು ತಿಂಗಳಲ್ಲಿ ಹತ್ಯೆಯಾದ ಬಿಜೆಪಿಯ ನಾಲ್ಕನೇ ಮುಖಂಡ ಇವರಾಗಿದ್ದರು. ಇದಕ್ಕೂ ಮುನ್ನ ಬಾಂಡಿಪೋರಾದ ಜಿಲ್ಲಾಧ್ಯಕ್ಷ ವಸೀಂ ಬಾರಿ, ಅವರ ತಂದೆ ಮತ್ತು ಸಹೋದರನನ್ನು ಉಗ್ರರು ಕಳೆದ ತಿಂಗಳು ಹತ್ಯೆ ಮಾಡಿದ್ದರು.

    ಆ.4ರಂದು ಬಿಜೆಪಿಯ ಸರಪಂಚ ಒಬ್ಬರನ್ನು ಉಗ್ರರು ಹತ್ಯೆ ಮಾಡಿದ್ದರು. ಇದಾಗಿ ಎರಡು ದಿನಗಳಲ್ಲಿ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಮತ್ತೊಬ್ಬ ಬಿಜೆಪಿ ಸರಪಂಚನನ್ನು ಸಾಯಿಸಲಾಗಿತ್ತು.

    ಮಾಸ್ಕ್​ ಧರಿಸದಿರುವುದನ್ನು ಪ್ರಶ್ನಿಸಿದ್ದಕ್ಕೆ ಮಹಿಳಾ ಪೊಲೀಸ್​ ಜತೆ ಕ್ರಿಕೆಟಿಗ ರವೀಂದ್ರ ಜಡೇಜಾ ವಾಗ್ವಾದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts