More

    ಎಡರಂಗ 3, ಐಕ್ಯರಂಗಕ್ಕೆ 2 ಕ್ಷೇತ್ರಗಳಲ್ಲಿ ಜಯ

    ಕಾಸರಗೋಡು: ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಪೈಕಿ ಎಡರಂಗ (ಎಲ್‌ಡಿಎಫ್) 3 ಮತ್ತು ಐಕ್ಯರಂಗ (ಯು ಡಿಎಫ್) 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.

    ಮಂಜೇಶ್ವರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್‌ಗೆ ಸೋಲಾಗಿದೆ. ಐಕ್ಯರಂಗದ (ಐಯುಎಂಎಲ್) ಎ.ಕೆ.ಎಂ. ಅಶ್ರಫ್ 745 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅಶ್ರಫ್ 65,758 ಮತ ಪಡೆದರೆ, ಸುರೇಂದ್ರನ್ 65,013 ಮತ ಪಡೆದರು. 2016ರ ಚುನಾವಣೆಯಲ್ಲಿ ಕೆ.ಸುರೇಂದ್ರನ್ ಅವರನ್ನು ಐಕ್ಯರಂಗದ ಪಿ.ಬಿ.ಅಬ್ದುಲ್ ರಜಾಕ್ 89 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.

    ಕಾಸರಗೋಡಿನಲ್ಲಿ ಎನ್.ಎ.ನೆಲ್ಲಿಕುನ್ನು (ಐಯುಎಂಎಲ್) ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ. ಇವರು ಬಿಜೆಪಿಯ ಕಾಸರಗೋಡು ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಅವರನ್ನು 1304 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಉದುಮ ಕ್ಷೇತ್ರದಲ್ಲಿ ಸಿಪಿಎಂನ ಸಿ.ಎಚ್.ಕುಞಂಬು, ಐಕ್ಯರಂಗದ ಬಾಲಕೃಷ್ಣನ್ ಪೆರಿಯ ಅವರನ್ನು 6762 ಮತಗಳಿಂದ ಪರಾಭವಗೊಳಿಸಿದ್ದಾರೆ. 2005ರಲ್ಲಿ ಸಿ.ಎಚ್ ಕುಞಂಬು ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಕಾಞಂಗಾಡು ವಿಧಾನಸಭಾ ಕ್ಷೇತ್ರದಿಂದ ರಾಜ್ಯ ಕಂದಾಯ ಸಚಿವ, ಸಿಪಿಐನ ಇ.ಚಂದ್ರಶೇಖರನ್ ವಿಜಯಯಾತ್ರೆ ಮುಂದುವರಿಸಿದ್ದಾರೆ. ಸಮೀಪ ಸ್ಪರ್ಧಿ ಕಾಂಗ್ರೆಸ್‌ನ ಪಿ.ವಿ.ಸುರೇಶ್ ಅವರನ್ನು 18618 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ತ್ರಿಕ್ಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ, ಸಿಪಿಎಂನ ಎಂ.ರಾಜಗೋಪಾಲನ್ ಪ್ರತಿಸ್ಪರ್ಧಿ ಎಂ.ಪಿ ಜೋಸೆಫ್ ಅವರನ್ನು 25,972ಮತಗಳ ಅಂತರದಿಂದ ಸೋಲಿಸಿದ್ದಾರೆ.

    ಮಂಜೇಶ್ವರದಲ್ಲಿ ಗೆಲುವಿನ ಅಂತರ 745 ಮತಗಳು: ಮಂಜೇಶ್ವರದ ಐಕ್ಯರಂಗ ಅಭ್ಯರ್ಥಿ ಎ.ಕೆ.ಎಂ.ಅಶ್ರಫ್ 745 ಮತಗಳ ಅಂತರದಲ್ಲಿ ಬಿಜೆಪಿಯ ಕೆ.ಸುರೇಂದ್ರನ್ ಅವರನ್ನು ಸೋಲಿಸಿದ್ದಾರೆ. ಅಶ್ರಫ್ 65,758 ಮತ ಪಡೆದರೆ, ಸುರೇಂದ್ರನ್ 65,013 ಮತ ಪಡೆದರು. ಸಿಪಿಎಂನ ವಿ.ವಿ.ರಮೇಶನ್ 40,639ಮತಗಳೊಂದಿಗೆ ಮೂರನೇ ಸ್ಥಾನ ಪಡೆದರು. ಕ್ಷೇತ್ರದ ಒಟ್ಟು 2,21,682 ಮತದಾರರಲ್ಲಿ 1,72,774 ಮಂದಿ ಮತ ಚಲಾಯಿಸಿದ್ದರು. 348 ಮತಗಳು ಅಸಿಂಧು, 387 ಮತಗಳು ನೋಟಾಕ್ಕೆ ಲಭಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts