More

    ನಿಯಮ ಪಾಲಿಸಿದರೆ ಅಪಘಾತ ಕಡಿಮೆ

    ಬೈಲಹೊಂಗಲ: ಜೀವ ಅತ್ಯಮೂಲ್ಯವಾದದ್ದು. ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳನ್ನು ಪಾಲನೆ ಮಾಡಿದರೆ ಅಪಘಾತ ಹಾಗೂ ಪ್ರಾಣಹಾನಿ ತಪ್ಪಿಸಬಹುದು ಎಂದು ಸಿಪಿಐ ಮಂಜುನಾಥ ಕುಸುಗಲ್ಲ ಹೇಳಿದ್ದಾರೆ.

    ಪಟ್ಟಣದ ಕೆ.ಆರ್.ಸಿ.ಶಿಕ್ಷಣ ಸಂಸ್ಥೆಯ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಸ್ತೆ ಸುರಕ್ಷತೆ ಹಾಗೂ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಕಷ್ಟಪಟ್ಟು ಅಧ್ಯಯನ ಮಾಡುವುದರ ಜತೆಗೆ ಕಾನೂನು ತಿಳಿದುಕೊಳ್ಳಬೇಕು ಎಂದರು.

    ಕೆಆರ್‌ಸಿ ಶಿಕ್ಷಣ ಸಂಸ್ಥೆಯ ಚೇರ್ಮನ್, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಪಾಲಕರು ಕಷ್ಟಪಟ್ಟು ಮಕ್ಕಳಿಗೆ ಶಿಕ್ಷಣ ನೀಡುತ್ತಾರೆ. ಹಾಗಾಗಿ ಒಳ್ಳೆಯ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು. ಹಿರಿಯ ಜಾನಪದ ಕಲಾವಿದ ಸಿ.ಕೆ.ಮೆಕ್ಕೇದ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

    ಕಸಾಪ ತಾಲೂಕು ಮಾಜಿ ಅಧ್ಯಕ್ಷ ಈಶ್ವರ ಹೋಟಿ, ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ, ಪ್ರಾಂಶುಪಾಲ ಪ್ರೊ.ಜಿ.ಕೆ.ಗಾಂವಕರ, ಅಣ್ಣಾಸಾಹೇಬ ಪಾಟೀಲ, ಮಡಿವಾಳಪ್ಪ ಹೋಟಿ ಇತರರು ಇದ್ದರು. ಕಲಾವಿದ ಸಿ.ಕೆ.ಮೆಕ್ಕೇದ ತಮ್ಮ ಪುತ್ರ ದಿ.ರಂಗವೀರ ಮೆಕ್ಕೇದ ಅವರ ಸ್ಮರಣಾರ್ಥ ಕೆಆರ್‌ಸಿಇ ಕಾಲೇಜಿನ ವಿದ್ಯಾರ್ಥಿ ಕಲ್ಯಾಣ ನಿಧಿಗೆ 1 ಲಕ್ಷ ರೂ.ಚೆಕ್ ನೀಡಿದರು. ಬಳಿಕ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಬಿ.ಆರ್.ಅನಂತನ್ ಹಾಗೂ ರಂಗವೀರ ಮೆಕ್ಕೇದ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಲಕ್ಷ್ಮೀ ಬಾಳಿಕಾಯಿ ನಿರೂಪಿಸಿದರು. ಪ್ರೊ.ಆರ್.ಬಿ.ಹಾಲಯ್ಯನವರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts