More

    ಪ್ರಾಧಿಕಾರದ ಮೂಲಕ ಮನೆ ಬಾಗಿಲಿಗೆ ಕಾನೂನು

    ಚಿಕ್ಕಮಗಳೂರು: ಹಿಂದಿನ ಕಾಲದಲ್ಲಿ ನ್ಯಾಯಾಲಯ ಎಂದರೆ ದೂರದ ಬೆಟ್ಟದಂತಾಗಿತ್ತು. ಯಾವುದಾದರೂ ಸಮಸ್ಯೆ ಎದುರಾದಾಗ ನ್ಯಾಯಾಲಯ ಅಥವಾ ವಕೀಲರ ಕಚೇರಿಗೆ ತೆರಳಬೇಕಿತ್ತು. ಆದರೆ ಈಗ ಪ್ರಾಧಿಕಾರದ ಮೂಲಕ ಕಾನೂನು ನಿಮ್ಮ ಮನೆ ಬಾಗಿಲಿಗೆ ಬಂದು ಸಮಸ್ಯೆ ಬಗೆಹರಿಸಲು ಸಹಕಾರಿಯಾಗಿದೆ ಎಂದು ಒಂದನೇ ಹೆಚ್ಚುವರಿ ಸಿವಿಲ್ ನ್ಯಾ.ಕೆ.ಎಸ್.ಶಿಲ್ಪಾ ಹೇಳಿದರು.

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಕಾನೂನು ಸೇವೆಗಳ ಪ್ರಾಧಿಕಾರದಿಂದ ಮಂಗಳವಾರ ತಾಲೂಕಿನ ಬೀಕನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಹಾಗೂ ವಿಚಾರ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

    ವಾರ್ಷಿಕ 25 ಸಾವಿರ ರೂ.ಗಳಿಗಿಂತ ಕಡಿಮೆ ಆದಾಯ ಹೊಂದಿದವರಿಗೆ ಉಚಿತ ಕಾನೂನು ಸೇವೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮತ್ತು ಸವೋಚ್ಚ ನ್ಯಾಯಾಲಯಗಳು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ರಚಿಸಿವೆ. ಇದಕ್ಕಾಗಿಯೆ ವಕೀಲರನ್ನು ನೇಮಿಸಲಾಗಿದ್ದು ನಿಮ್ಮ ವ್ಯಾಜ್ಯದ ಬಗ್ಗೆ ಹೇಳಿಕೊಂಡರೆ ಯಾವ ರೀತಿ ಸಹಕಾರ ನೀಡಬಹುದೆಂದು ಚಿಂತಿಸಿ ಉಚಿತವಾಗಿ ನೆರವು ನೀಡುತ್ತಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts