More

    ಪಾಲಿಕೆಯಿಂದ ‘ಮಾಸಾರ್ಧ ಸ್ವಚ್ಚತಾ ಕಾರ್ಯಕ್ರಮ’ಕ್ಕೆ ಚಾಲನೆ

    ಬೆಂಗಳೂರು: ನಗರದಲ್ಲಿ ಮುಂಗಾರು ಪೂರ್ವ ಮಳೆಯಿಂದ ಯಾವುದೆ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಲು 15 ದಿನಗಳ ಕಾಲ ‘ಮಾಸಾರ್ಧ ಸ್ವಚ್ಚತಾ ಕಾರ್ಯಕ್ರಮ’ಕ್ಕೆ ಬಿಬಿಎಂಪಿ ಶುಕ್ರವಾರ ಚಾಲನೆ ನೀಡಿದೆ.

    ಮಳೆಗಾಲಕ್ಕೂ ಮುನ್ನ ರಾಜಕಾಲುವೆಗಳಲ್ಲಿ ಹೂಳೆತ್ತುವುದು, ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳ ಬದಿಯ ಚರಂಡಿಗಳ ಸ್ವಚ್ಚತೆ, ವಾರ್ಡ್ ಮಟ್ಟದಲ್ಲಿ ಈಗಾಗಲೇ ಗುರುತಿಸಲಾಗಿರುವ ಸಂಪರ್ಕ ಚರಂಡಿಗಳಲ್ಲಿ ಹೂಳೆತ್ತುವುದು ಹಾಗೂ ಇತರ ಮುಂಜಾಗ್ರತ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಮದೊಲ ದಿನವೇ ಎಲ್ಲ ಎಂಟೂ ವಲಯಗಳಲ್ಲಿ ಸ್ವಚ್ಚತಾ ಕಾಮಗಾರಿಗಳು ಸ್ಥಳೀಯ ಅಧಿಕಾರಿಗಳ ನೇತೃತ್ವದಲ್ಲಿ ನಡೆಸಲಾಯಿತು.

    ಈ ಬಾರಿ ವಾಡಿಕೆಯಷ್ಟು ಮಳೆಯಾಗಲಿದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಗರದಲ್ಲೂ ಉತ್ತಮ ಮಳೆಯಾದಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲದಂತೆ, ಪ್ರವಾಹ ಉಂಟಾಗದ ರೀತಿ ಪರಿಹಾರ ಕಾರ್ಯವನ್ನು ಕೈಗೊಳ್ಳಬೇಕಿದೆ. ಮುಖ್ಯವಾಗಿ ರಾಜಕಾಲುವೆಗಳಲ್ಲಿ ಮಳೆನೀರು ಸರಾಗವಾಗಿ ಹರಿದುಹೋಗಲು ಅವಕಾಶ ಮಾಡಿಕೊಡುವ ಜತೆಗೆ ಚರಂಡಿಗಳಲ್ಲಿ ತುಂಬಿರುವ ಕಸ-ಕಡ್ಡಿಗಳನ್ನು ಹೊರತೆಗೆಯುವಂತೆ ಸೂಚಿಸಲಾಗಿದೆ. ಇದರ ಹೊಣೆಯನ್ನು ಆಯಾ ವಲಯಗಳ ಮುಖ್ಯ ಅಭಿಯಂತರರಿಗೆ ವಹಿಸಲಾಗಿದೆ. ಇವರ ನೇತೃತ್ವದ ತಂಡವು ತಮ್ಮ ಅಧೀನದ ತಾಂತ್ರಿಕ ಸಿಬ್ಬಂದಿಯೊಂದಿಗೆ ಮೇ 3ರವರೆಗೆ ನಿತ್ಯವೂ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಲಾಗಿದೆ.

    ವಲಯ ವ್ಯಾಪ್ತಿಯಲ್ಲಿ ತೆಗೆದುಕೊಳ್ಳಲಿರುವ ಉಪಕ್ರಮ:
    * ವಾರ್ಡ್ ಮಟ್ಟದಲ್ಲಿ ಗುರುತಿಸಿರುವ ರಾಜಕಾಲುವೆಯ ಸಂಪರ್ಕ ಚರಂಡಿಗಳಿಂದ ಮತ್ತು ಸೂಕ್ಷ್ಮ, ಅತೀ ಸೂಕ್ಷ್ಮ ಪ್ರದೇಶಗಳಿಂದ ಹೂಳೆತ್ತುವುದು.
    * ನಿತ್ಯ ರಸ್ತೆ ಬದಿಯಲ್ಲಿ ಶೇಖರಣೆಯಾಗುತ್ತಿರುವ ಘನತ್ಯಾಜ್ಯ ಸ್ಥಳ ಸ್ವಚ್ಛಗೊಳಿಸುವುದು.
    * ವಾಡ್ ಮಟ್ಟದ ರಸ್ತೆ ಬದಿಯ ಶೋಲ್ಡರ್ ಚರಂಡಿಗಳನ್ನು ಸ್ವಚ್ಛಗೊಳಿಸುವುದು.
    * ಆರ್ಟಿರಿಯಲ್/ಸಬ್ ಆರ್ಟಿರಿಯಲ್ ರಸ್ತೆಗಳ ಶೋಲ್ಡರ್ ಚರಂಡಿಗಳ ಸ್ವಚ್ಚತೆ, ರಸ್ತೆ ಮೇಲೆ ಸಂಗ್ರಹವಾಗಿರುವ ಅನುಪಯುಕ್ತ ಕಟ್ಟಡ ತ್ಯಾಜ್ಯ ತೆರೆವುಗೊಳಿಸುವುದು.
    * ಯಾಂತ್ರಿಕ ಕಸಗುಡುಸುವಿಕೆ ಯಂತ್ರವನ್ನು ಪರಿಣಾಮಕಾರಿಯಾಗಿ ಬಳಸುವುದು.
    * ಮೇಲ್ಸೇತುವೆ/ಕೆಳಸೇತುವೆಗಳನ್ನು ಸ್ವಚ್ಚಗೊಳಿಸಿ ನೀರು ನಿಲ್ಲುವಿಕೆ ಆಗದೆಂಬ ಪ್ರಮಾಣಪತ್ರ ಸಲ್ಲಿಸುವುದು.
    * ವಾರ್ಡ್‌ಗಳಲ್ಲಿ ವಿವಿಧ ಮಾರ್ಗಗಳಲ್ಲಿ ರಸ್ತೆಗುಂಡಿಗಳನ್ನು ದುರಸ್ತಿಪಡಿಸುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts