More

    ರಾತ್ರಿ ಮಲಗ್ತಿದ್ದಂತೆ ಅಮ್ಮನ ಮೊಬೈಲ್​ ತೆಗೆದುಕೊಳ್ತಿದ್ದ ಮಗ: ತಾಯಿಗೆ ಕಾದಿತ್ತು ಬಿಗ್​ ಶಾಕ್​!

    ಹೈದರಾಬಾದ್​: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್​ ಫೋನ್​ ಪ್ರತಿಯೊಬ್ಬರ ಜೀವನದ ಭಾಗವಾಗಿದೆ. ಸಾಕಷ್ಟು ಅಗತ್ಯ ಕೆಲಸಗಳು ಇಂದು ಕುಳಿತಲ್ಲಿಯೇ ನಡೆಯುತ್ತಿವೆ. ಸ್ಮಾರ್ಟ್​ ಫೋನ್​ನಿಂದ ಜೀವನ ಸುಲಭ ಆಗಿಬಿಟ್ಟಿದೆ. ಆದರೆ, ಅದೇ ಸ್ಮಾರ್ಟ್​ ಫೋನ್​ನ ಇನ್ನೊಂದು ಮುಖವಿದೆ. ಮೊಬೈಲ್​ ಬಂದಾಗಿನಿಂದ ಅಪರಾಧ ಪ್ರಕರಣಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಅದಕ್ಕೆ ತಾಜಾ ಉದಾಹರಣೆಯೊಂದು ಹೈದರಾಬಾದ್​ನಲ್ಲಿ ಬೆಳಕಿಗೆ ಬಂದಿದೆ.

    ಒಮ್ಮೆ ಮಹಿಳೆಯೊಬ್ಬರು ತನ್ನ ಬ್ಯಾಂಕ್​ ಸ್ಟೇಟ್​ಮೆಂಟ್ ನೋಡಿ​ ಶಾಕ್​ ಆಗುತ್ತಾಳೆ. ಕಾರಣ ಆಕೆಗೆ ಗೊತ್ತಿಲದೆಯೇ ಅವರ ಖಾತೆಯಿಂದ ಬರೋಬ್ಬರಿ 4 ಲಕ್ಷ ರೂ. ಹಣ ತೆಗೆದುಕೊಳ್ಳಲಾಗಿರುತ್ತದೆ. ಆಘಾತಕ್ಕೆ ಒಳಗಾಗುವ ಆಕೆ ನಡು ರಾತ್ರಿಯಲ್ಲೇ ಪೊಲೀಸ್​ ಠಾಣೆಗೆ ದೌಡಾಯಿಸುತ್ತಾಳೆ. ಪ್ರಕರಣ ದಾಖಲಿಸಿಕೊಳ್ಳುವ ಪೊಲೀಸರಿಗೆ ವಿಚಾರಣೆ ವೇಳೆ ಅಸಲಿ ವಿಚಾರ ತಿಳಿದು ಶಾಕ್​ ಆಗುತ್ತಾರೆ.

    ಇದನ್ನೂ ಓದಿರಿ: ವಿಚಾರಣೆಗೆ ಬರಬೇಕಾದ್ರೆ ಇದನ್ನು ನೆರವೇರಿಸಿ: ಎಸ್​ಐಟಿಗೆ ತಲೆನೋವಾದ ಸಿಡಿ ಲೇಡಿಯ ಮತ್ತೊಂದು ವಿಡಿಯೋ!

    ಹಣ ಕಳೆದುಕೊಂಡ ಮಹಿಳೆ ಹೈದರಾಬಾದ್​ನ ಹಿಮಾಯತ್​ನಗರ ನಿವಾಸಿ. ಕೆಲವು ದಿನಗಳ ಹಿಂದೆ ಆನ್​ಲೈನ್​ ಪಾವತಿ ಮಾಡುವಾಗ ತನ್ನ ಬ್ಯಾಂಕ್​ ಸ್ಟೇಟ್​ಮೆಂಟ್​ ಶಾಕ್​ ಆಗಿದ್ದರು. 4 ಲಕ್ಷ ಖಾತೆಯಿಂದ ನಾಪತ್ತೆಯಾಗಿತ್ತು. ಸೈಬರ್​ ಕ್ರೈಂಗೆ ದೂರು ನೀಡದ ಬಳಿಕ ತನಿಖೆ ಆರಂಭಿಸಿದ ಪೊಲೀಸರಿಗೆ ಇದು ಹೊರಗಿನವರ ಕೆಲಸವಲ್ಲ, ಮನೆಯಲ್ಲಿರುವವರೇ ಯಾರೋ ಈ ಕೃತ್ಯ ಎಸಗಿದ್ದಾರೆಂಬುದು ತಿಳಿಯುತ್ತದೆ.

    ಎಲ್ಲರನ್ನೂ ವಿಚಾರಣೆ ಮಾಡಿಕೊಂಡು ಬರುವಾಗ ಮಹಿಳೆಯ ಮಗನನ್ನು ಸಹ ವಿಚಾರಣೆ ನಡೆಸುತ್ತಾರೆ. ಈ ವೇಳೆ ಆತ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ. 10ನೇ ತರಗತಿ ವಿದ್ಯಾರ್ಥಿಯಾಗಿರುವ ಮಹಿಳೆಯ ಮಗನಿಗೆ ಆನ್​ಲೈನ್​ ಗೇಮ್​ಗಳ ಮೇಲೆ ತುಂಬಾ ಹುಚ್ಚು. ತಾಯಿ ಮಲಗಿದಾಗ ಆಕೆಯ ಮೊಬೈಲ್​ ತೆಗೆದುಕೊಳ್ಳುತ್ತಿದ್ದ ಮಗ ರಾತ್ರಿಯಿಡಿ ಮೊಬೈಲ್​ ಗೇಮ್​ ಆಡುತ್ತಿದ್ದ.

    ಇದನ್ನೂ ಓದಿರಿ: Web Exclusive | ಕಲ್ಲು ಗಣಿಗಾರಿಕೆಗೆ ಬೆಚ್ಚಿ ನಾಡಿನತ್ತ ಚಿರತೆಗಳ ದೌಡು; ಕಾಡಂಚಿನ ಜನರಲ್ಲಿ ಆತಂಕ

    ಈ ಮಧ್ಯೆ ಗೇಮ್​ನಲ್ಲಿ ಬರುವ ಹೊಸ ಫೀಚರ್​ ಸಲುವಾಗಿಯೇ ಹಣವನ್ನು ತಾಯಿಯ ಖಾತೆಯಿಂದ ಮಗ ಪಾವತಿಸುತ್ತಿದ್ದ. ನಂತರ ಮೊಬೈಲ್​ಗೆ ಬಂದ ಒಟಿಪಿ ನಂಬರ್​ ಅನ್ನು ಡಿಲೀಟ್​ ಮಾಡುತ್ತಿದ್ದ. ಇದು ಹೀಗೆ ಅನೇಕ ದಿನಗಳವರೆಗೆ ಮುಂದುವರಿದಿದೆ. ಹೀಗಿರುವಾಗ ಒಮ್ಮೆ ಬ್ಯಾಂಕ್​ ಸ್ಟೇಟ್​ಮೆಂಟ್​ನಿಂದ ಹಣ ಕಡಿತಗೊಂಡಿರುವುದು ಆಕೆಗೆ ತಿಳಿಯುತ್ತದೆ. ವಿಚಾರಣೆ ಬಳಿಕ ಮಗನದ್ದೇ ಈ ಕೃತ್ಯ ಎಂದು ತಿಳಿದ ಬಳಿಕ ಆಕೆಗೆ ಶಾಕ್​ ಆಗುತ್ತದೆ. ಹೀಗಾಗಿ ಮಕ್ಕಳ ಮೊಬೈಲ್​ ಬಳಸುತ್ತಿದ್ದರೆ ಒಮ್ಮೆ ಅವರ ಮೇಲೆ ಕಣ್ಣಿಟ್ಟರೆ ಇಂತಹ ಅಚಾತುರ್ಯದಿಂದ ತಪ್ಪಿಸಿಕೊಳ್ಳಬಹುದು. (ಏಜೆನ್ಸೀಸ್​)

    ಬೃಹತ್​ ಬಂಡೆಗೆ ಕಾರು ಅಪ್ಪಚ್ಚಿ: ಮೂವರ ದುರಂತ ಸಾವು, ಚಾಲಕ ಬದುಕುಳಿದಿದ್ದೇ ರಣರೋಚಕ!

    ಕರೊನಾ 2ನೇ ಅಲೆ ಬೆನ್ನಲ್ಲೇ ಹೊರಬಿದ್ದ ಹೊಸ ಸಂಶೋಧನಾ ವರದಿಯಲ್ಲಿದೆ ಬೆಚ್ಚಿಬೀಳಿಸುವ ಸಂಗತಿ!

    ಲೇಡಿ ಸಿಂಗಮ್​ ಖ್ಯಾತಿಯ ಮಹಿಳಾ ಅಧಿಕಾರಿ ಆತ್ಮಹತ್ಯೆ: ಡೆತ್​ನೋಟ್​ನಲ್ಲಿ ಅಧಿಕಾರಿಯ ಕರಾಳ ಮುಖ ಬಯಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts