More

    ಗಾಯಕಿಯ ಕೊನೆಯ ಆಸೆ ಈಡೇರಿಸಿದ ಲತಾ ಮಂಗೇಶ್ಕರ್ ಕುಟುಂಬ; ತಿರುಪತಿ ದೇವಸ್ಥಾನಕ್ಕೆ 10 ಲಕ್ಷ ರೂ. ದೇಣಿಗೆ

    ನವದೆಹಲಿ:  ಗಾಯಕಿ ಲತಾಮಂಗೇಶ್ಕರ್ ಅವರು ನಮ್ಮನ್ನು ಅಗಲಿದ್ದರೂ ಅವರ ಹಾಡುಗಳೊಂದಿಗೆ ಎಂದೆಂದಿಗೂ ಜೀವಂತವಾಗಿದ್ದಾರೆ.  ಇದೀಗ ಲತಾಮಂಗೇಶ್ಕರ್ ಕೊನೆಯ ಆಸೆಯನ್ನು ಕುಟುಂಬಸ್ಥರು  ಈಗ ಪೂರೈಸಿದ್ದಾರೆ.

    ಲತಾಮಂಗೇಶ್ಕರ್  ಅವರು 2022 ಫೆಬ್ರವರಿ 6ರಂದು ನಿಧನರಾದರು. ಅವರ ಸಾವಿನಿಂದ ಸಂಗೀತ ಲೋಕ ಮೂಕವಿಸ್ಮಿತವಾಯಿತು. ಲತಾಜಿ ಅವರ ಸಾವನ್ನು ಅವರ ಅಭಿಮಾನಿಗಳು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗಲೇ ಅವರ ಕುಟುಂಬಸ್ಥರು ಲತಾಜಿ ಅವರ ಕೊನೆಯ ಆಸೆಯನ್ನು ಈಡೇರಿಸಿದ್ದಾರೆ.

    ಲತಾ ಜೀ ಅವರು  ವೆಂಕಟೇಶ್ವರ ಸ್ವಾಮಿಯ ಮಹಾನ್ ಭಕ್ತರಾಗಿದ್ದರು. ಸ್ವಾಮಿಯನ್ನು ಸ್ಮರಿಸುವ ಅನೇಕ ಅದ್ಭುತವಾದ ಹಾಡುಗಳನ್ನು, ಕೀರ್ತನೆಗಳನ್ನು ಮಾಡಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನಕ್ಕೆ ದೇಣಿಗೆ ನೀಡ ಬೇಕು ಎನ್ನುವುದು ಲತಾಮಂಗೇಶ್ಕರ್ ಅವರ ಆಸೆಯಾಗಿತ್ತು. ಆದರೆ ಕಾರಣಾಂತರಗಳಿಂದ ಅವರಿಗೆ ಕೊನೆಗಾಲದಲ್ಲಿ ಇದು ಸಾಧ್ಯವಾಗಿರಲಿಲ್ಲ.  ಅವರ ಆಸೆಯಂತೆ ಲತಾ ಮಂಗೇಶ್ಕರ್ ಅವರ ಕುಟುಂಬವು ಲತಾ ಮಂಗೇಶ್ಕರ್ ಅವರ ಪರವಾಗಿ ತಿರುಮಲ ತಿರುಪತಿ ದೇವಸ್ಥಾನಕ್ಕೆ 10 ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನೀಡಿದೆ.

    ಲತಾ ಮಂಗೇಶ್ಕರ್ ಅವರು ದೇವಾಲಯದ ಟ್ರಸ್ಟ್‌ಗೆ 10 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡುವಂತೆ ತನ್ನ ಉಯಿಲಿನಲ್ಲಿ ಬರೆದಿದ್ದರು. ಲತಾ ಮಂಗೇಶ್ಕರ್​ ಅವರ ಸಹೋದರಿ ಉಷಾ ಮಂಗೇಶ್ಕರ್ ಅವರು ಮುಂಬೈನ ಟಿಟಿಡಿಯ ಮಂಡಳಿಯ ಸದಸ್ಯ ಮಿಲಿಂದ್ ಕೇಶವ್ ನಾರ್ವೇಕರ್ ಅವರನ್ನು ವೈಯಕ್ತಿಕವಾಗಿ ಸಂಪರ್ಕಿಸಿ ಲತಾ ಮಂಗೇಶ್ಕರ್ ಅವರು ದೇವಾಲಯದ ಟ್ರಸ್ಟ್‌ಗೆ 10 ಲಕ್ಷ ರೂ. ದೇಣಿಗೆ ಕೊಡುವುದು ಅವರ ಆಸೆಯಾಗಿತ್ತು. ಹೀಗಾಗಿ ದೇಣಿಗೆ ನೀಡುತ್ತೇವೆಂದು ತಿಳಿಸಿ ಚೆಕ್​​ ನೀಡಿದ್ದಾರೆ. ಸೋಮವಾರ ತಿರುಮಲದಲ್ಲಿ ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ್ ರೆಡ್ಡಿ ಅವರ ಸಮ್ಮುಖದಲ್ಲಿ ನಾರ್ವೇಕರ್ ಅವರು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎವಿ ಧರ್ಮಾ ರೆಡ್ಡಿ ಅವರಿಗೆ ದೇಣಿಗೆ ಚೆಕ್ ಹಸ್ತಾಂತರಿಸಿದರು.

    ಲತಾಮಂಗೇಶ್ಕರ್ ಅವರು 20 ಭಾಷೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಮಧುರವಾದ ಕಂಠದಿಂದ ಹಲವಾರು ಅಭಿಮಾನಿಗಳನ್ನು ಗೆದ್ದಿದ್ದಾರೆ. ಲತಾಮಂಗೇಶ್ಕರ್ ಅವರು 980ಕ್ಕೂ ಹೆಚ್ಚು ಚಿತ್ರಗಳಿಗೆ ತಮ್ಮ ಕಂಠ ಸೀರಿ ಮೂಲಕವಾಗಿ ಹಾಡುಗಳನ್ನು ಹಾಡಿದ್ದಾರೆ.

    ಲತಾಮಂಗೇಶ್ಕರ್  ಅವರಿಗೆ ಬಂದಿರುವ ಬಿರುದು, ಪ್ರಶಸ್ತಿ : ತಮ್ಮ ಗಾಯನಕ್ಕಾಗಿ “ಕ್ವೀನ್ ಆಫ್ ಮೆಲೋಡಿ”, “ನೈಟಿಂಗೇಲ್ ಆಫ್ ಇಂಡಿಯಾ” ಮತ್ತು “ವಾಯ್ಸ್ ಆಫ್ ದಿ ಮಿಲೇನಿಯಮ್” ಎಂಬ ಬಿರುದುಗಳನ್ನು ಗಳಿಸಿದ್ದಾರೆ. 1989 ರಲ್ಲಿ, ಅವರಿಗೆ ಭಾರತ ಸರ್ಕಾರವು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿತು.

    ಧಾರವಾಡ ಬಾಲಕಿಯ ವಿದ್ಯಾಭ್ಯಾಸಕ್ಕೆ ನೆರವಾದ ಕೆಎಲ್ ರಾಹುಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts