More

    ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂಗನವಾಡಿ ಹುದ್ದೆ ಅರ್ಜಿ ಸಲ್ಲಿಕೆಗೆ ಮೇ 13 ರವರೆಗೆ ಅವಕಾಶ, ಒಂದು ತಿಂಗಳು ಅವಧಿ ವಿಸ್ತರಣೆ

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧೆಡೆ ಅಂಗನವಾಡಿ ಕೇಂದ್ರಗಳಲ್ಲಿನ ಕಾರ್ಯಕರ್ತೆ, ಮಿನಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಒಂದು ತಿಂಗಳ ಕಾಲ ಅವಧಿ ವಿಸ್ತರಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅವಕಾಶ ನೀಡಿದೆ.

    ಆರು ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯ ಹುದ್ದೆಗಳಿಗೆ ಮೇ 13ರವರೆಗೆ ಅರ್ಜಿ ಸಲ್ಲಿಸಬಹುದು. ಈ ಮೊದಲು ಏಪ್ರಿಲ್​ 13 ಕೊನೆಯ ದಿನವಾಗಿತ್ತು. ಒಟ್ಟು 87 ಹುದ್ದೆಗಳಿಗೆ ಅದೇ ಗ್ರಾಮದ, ಅರ್ಹ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
    ಏಲ್ಲೆಲ್ಲಿ ಅವಕಾಶ?: ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿ ಬಿದನೂರು, ಶಿಡ್ಲಘಟ್ಟ, ಗುಡಿಬಂಡೆ ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ 9 ಕಾರ್ಯಕರ್ತೆ, 13, ಮಿನಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ 66 ಹುದ್ದೆಗಳಿವೆ.

    ವಿದ್ಯಾರ್ಹತೆ: ಕಾರ್ಯಕರ್ತೆ ಹುದ್ದೆಗೆ ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು. ಸಹಾಯಕಿ ಹುದ್ದೆಗೆ ಕನಿಷ್ಠ 4 ನೇ ತರಗತಿ ಪಾಸಾಗಿರಬೇಕು. ಗರಿಷ್ಠ 9 ನೇ ತರಗತಿ ಪಾಸಾಗಿರಬೇಕು.
    ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಮಹಿಳಾ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
    ಅರ್ಜಿ ಸಲ್ಲಿಕೆಗೆ ಕೊನೇ ದಿನ: ಮೇ 13
    ವೆಬ್‌ಸೈಟ್ ವಿಳಾಸ: https://anganwadirecruit.kar.nic.in

    ಕ್ವಾರಂಟೈನ್ ನಿಯಮ ಪಾಲಿಸದವರಿಗೆ ಮಧ್ಯಪ್ರದೇಶ ಪೊಲೀಸರೊಂದು ಪಾಠ ಕಲಿಸಿದ್ರು: ಅದು ದೇಶಕ್ಕೇ ಮಾದರಿಯಾಗದಿದ್ದರೆ ಸಾಕು- ಅನ್ನಬಹುದೇನೋ ನಿಯಮ ಉಲ್ಲಂಘಕರು!

    ಸಹಕಾರ ಸಚಿವರೇ, ಜನಪ್ರತಿನಿಧಿಗಳೇ… ಸೋಷಿಯಲ್ ಡಿಸ್ಟೆನ್ಸಿಂಗ್ ಪಾಲನೆ ಬಗ್ಗೆ ಇಷ್ಟೇಕೆ ನಿರ್ಲಕ್ಷ್ಯ ಹೇಳಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts