More

    ಲಸಿಕಾ ಮೇಳಕ್ಕೆ ಉತ್ತಮ ಸ್ಪಂದನೆ : ಅಭಿಯಾನದಲ್ಲಿ 24, 843 ಮಂದಿಗೆ ವ್ಯಾಕ್ಸಿನ್ ಶೇ.106 ಗುರಿ ಸಾಧನೆ

    ರಾಮನಗರ :  ಜಿಲ್ಲೆಯಲ್ಲಿ ಕರೊನಾ ಲಸಿಕೆ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ಸೋಮವಾರ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಅಭಿಯಾನ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ.
    ಜಿಲ್ಲೆಯ ವಿವಿಧ ಪ್ರಮುಖ ಸ್ಥಳಗಳಲ್ಲಿ ಹಾಗೂ ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಭಿಯಾನ ಹಮ್ಮಿಕೊಳ್ಳ ಲಾಗಿತ್ತು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆದು ಸರ್ಕಾರದ ಅಭಿಯಾನದ ಯಶಸ್ಸಿಗೆ ಕೈ ಜೋಡಿಸಿದರು.

    ರಾಮನಗರದಲ್ಲಿ ಸೋಮವಾರದ ಅಭಿಯಾನದಲ್ಲಿ 23,440 ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಇದರಲ್ಲಿ ಆರೋಗ್ಯ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರು, 45 ವರ್ಷ ಮೇಲ್ಪಟ್ಟ ಹಾಗೂ 18-44 ವರ್ಷದೊಳಗಿನ ಆದ್ಯತಾ ಗುಂಪುಗಳು ಒಳಪಟ್ಟಿದ್ದವು. ಒಟ್ಟು 24, 843 ಮಂದಿಗೆ ಲಸಿಕೆ ನೀಡುವ ಮೂಲಕ ಗುರಿ ಮೀರಿ ಶೇ.106 ಸಾಧನೆ ಆಗಿದೆ. ಅದರಲ್ಲೂ 18-44 ವರ್ಷದೊಳಗಿನ ಆದ್ಯತಾ ಗುಂಪಿಗೆ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆದುಕೊಂಡಿದ್ದು, ಇದರಲ್ಲಿ ಶೇ.128 ಗುರಿ ಸಾಧನೆ ಆಗುವಂತೆ ಮಾಡಿದೆ.

    ಈವರೆಗಿನ ಸಾಧನೆ: ಜಿಲ್ಲೆಯಲ್ಲಿ ಈವರೆಗೂ ಒಟ್ಟು 72,933 ಡೋಸ್ ಲಸಿಕೆ ನೀಡಲಾಗಿದೆ. ವಿವಿಧ ಸ್ಥರಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಮೊದಲ ಮತ್ತು 2ನೇ ಡೋಸ್ ಲಸಿಕೆ ನೀಡುವುದು ಸೇರಿ ಒಟ್ಟು 11,09,366 ಡೋಸ್‌ಗಳ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಆದರೆ ಈವರೆಗೆ ಜಿಲ್ಲೆಯಲ್ಲಿ 40,1117 ಡೋಸ್ ಲಸಿಕೆ ನೀಡಲಾಗಿದ್ದು, ಇದರಲ್ಲಿ ಶೇ.36.15 ಸಾಧನೆ ಆಗಿದೆ. ಸೋಮವಾರ ನಡೆದ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ 18-44 ವರ್ಷದೊಳಗಿನ ಆದ್ಯತಾ ಗುಂಪಿನವರು ಲಸಿಕೆ ಪಡೆದುಕೊಂಡಿದ್ದರೂ ಈ ವರೆಗಿನ ಸಾಧನೆ ಶೇ.14 ಮಾತ್ರ ಆಗಿದೆ.
    ಬೇಕಿದೆ ಮತ್ತಷ್ಟು ಅಭಿಯಾನ: ಜಿಲ್ಲೆಯಲ್ಲಿ ಈಗಲೂ ಲಸಿಕೆ ಪಡೆದುಕೊಳ್ಳದೇ ಇರುವ ಹಿರಿಯ ನಾಗರಿಕರು ಸೇರಿ ವಿವಿಧ ವರ್ಗಗಳ ಜನರು ಇದ್ದಾರೆ. ಇವರಿಗೆ ಪ್ರಮುಖವಾಗಿ ಲಸಿಕೆ ಬಗ್ಗೆ ಇನ್ನೂ ಭಯ ಹೋಗಿಲ್ಲ. ಲಸಿಕೆ ಪಡೆದರೆ ಸಾವು ಸಂಭವಿಸುತ್ತದೆ ಎನ್ನುವ ಪೂರ್ವಗ್ರಹ ಹಾಗೂ ಸುಳ್ಳು ಸುದ್ದಿಗಳಿಂದ ಜನತೆ ಲಸಿಕೆ ಪಡೆದುಕೊಳ್ಳಲು ಮುಂದಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಜತೆಗೆ, ಮತ್ತಷ್ಟು ಪ್ರಮಾಣದಲ್ಲಿ ಅಭಿಯಾನಗಳನ್ನು ಗ್ರಾಮೀಣ ಮಟ್ಟದಲ್ಲಿ ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳಬೇಕು.

    ಲಸಿಕೆ ಪಡೆಯುವುದರಿಂದ ಯಾವುದೇ ಸಮಸ್ಯೆ ಆಗದು, ಇದರಿಂದ ಕರೊನಾ ವಿರುದ್ಧ ಧೈರ್ಯದಿಂದ ಹೋರಾಟ ನಡೆಸಬಹುದು. ರೋಗ ಬಂದರೂ ಸಾವಿನಿಂದ ಪಾರಾಗಬಹುದು. ನಾನೂ ಲಸಿಕೆ ಪಡೆದುಕೊಂಡಿದ್ದು, ನಿರ್ಭೀತರಾಗಿ ಎಲ್ಲರೂ ಲಸಿಕೆ ಪಡೆದುಕೊಳ್ಳಿ.
    ಅನಿತಾ ಕುಮಾರಸ್ವಾಮಿ ಶಾಸಕಿ, ರಾಮನಗರ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts