More

    ಯೋಗಿ ಅಭಿನಯದ ‘ಲಂಕೆ’ ಗೆ ಒಂದು ವರ್ಷ … ಎಲ್ಲಿ? ಹೇಗೆ?

    ಬೆಂಗಳೂರು: ಬಹಳಷ್ಡು ಕನ್ನಡ ಚಿತ್ರಗಳು ನೂರು ದಿನ ಓಡುವುದೇ ಕಷ್ಟ ಎನ್ನುತ್ತಿರುವಾಗ, ‘ಲೂಸ್​ ಮಾದ’ ಖ್ಯಾತಿಯ ಯೋಗಿ ಅಭಿನಯದ ‘ಲಂಕೆ’ ಚಿತ್ರವು ಒಂದು ವರ್ಷ ಓಡಿದೆಯಂತೆ. ಈ ಖುಷಿಯನ್ನು ಹಂಚಿಕೊಳ್ಳುವುದಕ್ಕೆ ಚಿತ್ರತಂಡವು ಒಂದು ಸಮಾರಂಭವನ್ನು ಆಯೋಜಿಸಿತ್ತು.

    ಈ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ಮಪಕ ಟಿ.ಪಿ.ಸಿದ್ದರಾಜು, ಶಿಲ್ಪ ಶ್ರೀನಿವಾಸ್, ಚಾಮುಂಡೇಶ್ವರಿ ಸ್ಟುಡಿಯೋ ಮಾಲೀಕರಾದ ರಾಜಲಕ್ಷ್ಮಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

    ಇದನ್ನೂ ಓದಿ: ರಾಜ ರಾಜ ಚೋಳನ ಕಥೆ ಪಿಎಸ್ 1

    ಇಷ್ಟಕ್ಕೂ ‘ಲಂಕೆ’ ಚಿತ್ರವು ಒಂದು ವರ್ಷ ಯಾವ ಚಿತ್ರಮಂದಿರದಲ್ಲಿ ಪೂರೈಸಿತು? ಎಂಬ ಪ್ರಶ್ನೆ ಸಹಜ. ಈ ಕುರಿತು ಮಾತನಾಡಿದ ವಿತರಕ ಮಾರ್ಸ್​ ಸುರೇಶ್​, ‘ಇದು ಒಂದೇ ಚಿತ್ರಮಂದಿರದಲ್ಲಿ ಒಂದು ವರ್ಷ ಓಡಿಲ್ಲ. ಕರ್ನಾಟಕದ ಹಲವು ಕಡೆ ಒಂದು ವರ್ಷದಿಂದ ಪ್ರದರ್ಶನವಾಗುತ್ತಿದೆ’ ಎಂದು ಹೇಳಿದರು.

    ‘ನನ್ನ ಮನೆಯಲ್ಲಿ 50, 100, 150 ದಿನಗಳ ಫಲಕಗಳಿತ್ತು. 365 ದಿನಗಳ ಫಲಕ ಇದೇ ಮೊದಲು. ಈ ಯಶಸ್ಸಿನ ಬಹುಪಾಲು ನಿರ್ದೇಶಕ ರಾಮ್ ಪ್ರಾಸಾದ್ ಅವರಿಗೆ ಸಲ್ಲಬೇಕು. ಒಳ್ಳೆಯ ಸಿನಿಮಾದಲ್ಲಿ ಭಾಗಿಯಾಗಿರುವುದಕ್ಕೆ ಸಂತೋಷವಾಗಿದೆ’ ಎಂದರು ನಾಯಕ ಲೂಸ್ ಮಾದ ಯೋಗಿ.

    ಇದನ್ನೂ ಓದಿ: ಆಟ-ಓಟ ಜೀವನಪಾಠ: ಗುರುಶಿಷ್ಯರು ಸಿನಿಮಾ ವಿಮರ್ಶೆ

    ನಿರ್ದೇಶಕ ರಾಮ್ ಪ್ರಸಾದ್ ಎಂ.ಡಿ ಮಾತನಾಡಿ, ‘ಇದು ನನ್ನೊಬ್ಬನ ಗೆಲುವಲ್ಲ. ತಂಡದ ಗೆಲುವು. ನಾಯಕ ಯೋಗಿ ಅವರನ್ನು ನಾನು ಬ್ರೋ ಎನ್ನುತ್ತೇನೆ. ಸಹೋದರನಂತೆ ನನಗೆ ಅವರು ಸಹಕಾರ ನೀಡಿದರು. ಚಿತ್ರ ಒಂದು ವರ್ಷ ಪ್ರದರ್ಶನ ಕಾಣಲು ವಿತರಕ ಮಾರ್ಸ್ ಸುರೇಶ್ ಅವರೆ ಪ್ರಮುಖ ಕಾರಣ. ಇನ್ನು, ನಿರ್ಮಾಪಕರಾದ ಸುರೇಖ ರಾಮ್‌ ಪ್ರಸಾದ್ ಹಾಗೂ‌ ಪಟೇಲ್ ಶ್ರೀನಿವಾಸ್ ಅವರನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳಲೇ ಬೇಕು. ಸದ್ಯದಲ್ಲೇ ಹೊಸ ಚಿತ್ರ ಆರಂಭಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಆ ಕುರಿತು ಮಾಹಿತಿ ನೀಡುತ್ತೇನೆ’ ಎಂದರು. ಈ ಗೆಲುವನ್ನು ಚಿತ್ರದಲ್ಲಿ ನಟಿಸಿರುವ ಸಂಚಾರಿ ವಿಜಯ್ ಅವರಿಗೆ ಅರ್ಪಿಸುವುದಾಗಿ ಹೇಳಿದರು.

    ಸುಚೇಂದ್ರ ಪ್ರಸಾದ್​, ಕೃಷಿ ತಾಪಂಡ, ಎಸ್ತರ್ ನರೋನ, ಡ್ಯಾನಿ ಕುಟ್ಟಪ್ಪ, ಸಂಗಮೇಶ್ ಉಪಾಸೆ, ಮಹಂತೇಶ್ ಮುಂತಾದವರು ಈ ಸಂದರ್ಭದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

    ನಟಿ ಸಮಂತಾ ಅಮೆರಿಕಕ್ಕೆ ತೆರಳಿರುವುದು ಚರ್ಮ ರೋಗದ ಚಿಕಿತ್ಸೆಗಾಗಿ ಅಲ್ಲ… ಇಲ್ಲಿದೆ ಅಸಲಿ ಕಾರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts