More

    ಶ್ರೀಲಂಕಾ ಮಾಜಿ ಪ್ರಧಾನಿ ರಾಜಪಕ್ಸ ಕುಟುಂಬದೊಂದಿಗೆ ಹೆಲಿಕಾಪ್ಟರ್​ ಮೂಲಕ ಪಲಾಯನ : ನೌಕಾನೆಲೆಯಲ್ಲಿ ರಕ್ಷಣೆ?

    ಕೊಲಂಬೊ:ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ಹದಗೆಟ್ಟು ಜನರು ತೀವ್ರ ಸಂಕಷ್ಟ ಎದುರಿಸುತ್ತಿರುವಾಗಲೇ ಆರ್ಥಿಕ ಬಿಕ್ಕಟ್ಟಿನ ಜತೆಗೆ ರಾಜಕೀಯ ಬಿಕ್ಕಟ್ಟೂ ತಲೆದೋರಿರುವ ಕಾರಣ, ಜನರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಇದು ಹಿಂಸಾಚಾರ ಸ್ವರೂಪ ಪಡೆದಿದೆ ಈ ನಡುವೆ ಪ್ರದಾನಿ ರಾಜಪಕ್ಸ ಈಗ ದೇಶವನ್ನೇ ತೊರೆದು ಪಲಾಯನ ಮಾಡಿದ್ದಾರೆ.

    ಪ್ರತಿಭಟನಾಕಾರರು ಕಂಡ ಕಂಡಲ್ಲಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಖುದ್ದು ಪ್ರಧಾನಿ ನಿವಾಸವನ್ನೇ ಸುಟ್ಟು ಕರಕಲು ಮಾಡಿದ್ದಾರೆ. ಪ್ರಧಾನಿಯಾಗಿದ್ದ ಮಹಿಂದ ರಾಜಪಕ್ಸ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಜನರಿಗೆ ಆಕ್ರೋಶ ತಣ್ಣಗಾಗಲಿಲ್ಲ. ಇದರಿಂದ ಪ್ರಾಣಕ್ಕೆ ಹಾನಿಯಾಗಬಹುದೆಂದು ರಾಜಪಕ್ಸ ನೌಕಾನೆಲೆಗೆ ಪಲಾಯನಗೊಂಡು ರಕ್ಷಣೆ ಪಡೆದಿದ್ದಾರೆ.

    ಮೂಲಗಳ ಪ್ರಕಾರ ದ್ವೀಪವೊಂದರ ನೌಕಾನೆಲೆಯಲ್ಲಿ ಕುಟುಂಬ ಸಮೇತ ರಕ್ಷಣೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಇದು ರಾಜಧಾನಿ ಕೊಲಂಬೊದಿಂದ 270 ಕಿಮೀ ದೂರದಲ್ಲಿದೆ ಎನ್ನಲಾಗಿದೆ. ನಿನ್ನೆಯಷ್ಟೇ ಪ್ರತಿಭಟನಾಕಾರರು ಪ್ರಧಾನಿ ಮನೆ ಮೇಲೆ ಪೆಟ್ರೋಲ್​ ಬಾಂಬ್​ ದಾಳಿಯಿಂದಾಗಿ ಇಡೀ ಮನೆಯನ್ನೇ ಸುಟ್ಟು ಭಸ್ಮ ಮಾಡಿದ್ದರು. (ಏಜೆನ್ಸೀಸ್​)

    ತನ್ನ ಮದುವೆಗೆ ಅಪ್ಪುವನ್ನು ಕರೆಸಬೇಕೆಂದು ಕನಸು ಕಂಡಿದ್ದ, ಅಭಿಮಾನಿ: ಇದಕ್ಕೆ ಅಭಿಮಾನಿ ಮಾಡಿದ ಫ್ಲಾನ್​ಗೆ ಭಾರೀ ಮೆಚ್ಚುಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts