More

    ಕನ್ನಡ ಭಾಷೆ ಉಳಿವಿಗೆ ಕನ್ನಡಿಗರಲ್ಲಿ ಹೆಚ್ಚಲಿ ಎಚ್ಚರ

    ಭೀಮಸಮುದ್ರ: ಕನ್ನಡ ಭಾಷೆ ಉಳಿವು, ಬೆಳವಣಿಗೆಗೆ ಕನ್ನಡಿಗರಾದ ನಾವು ಸದಾ ಎಚ್ಚರಿಕೆ ವಹಿಸಬೇಕು ಎಂದು ಕಸಾಪ ಹಿರೇಗುಂಟನೂರು ಹೋಬಳಿ ಘಟಕದ ಅಧ್ಯಕ್ಷ ಜಿ.ಎಸ್.ಅನಿತ್‌ಕುಮಾರ್ ಹೇಳಿದರು.

    ಭೀಮಸಮುದ್ರದ ಜಿ.ಎಂ.ಸಭಾಂಗಣದಲ್ಲಿ ಭಾನುವಾರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಜಿಲ್ಲಾಧ್ಯಕ್ಷರಿಂದ ಪರಿಷತ್ ಬಾವುಟ ಸ್ವೀಕರಿಸಿ ಮಾತನಾಡಿದರು.

    ನಾವೆಲ್ಲರೂ ನಾಡು-ನುಡಿಗೆ ಶ್ರಮಿಸುವ ಕಂಕಣ ತೊಡಬೇಕು. ಕನ್ನಡ ಭಾಷೆಗೆ ಪುರಾತನ ಇತಿಹಾಸವಿದ್ದು, ಪ್ರಪಂಚದ ಯಾವ ಭಾಷೆಯಲ್ಲಿಯೂ ಇರದಷ್ಟು ಪದ ಸಂಪತ್ತು ಇದೆ ಎಂದರು.

    ನಮ್ಮ ಪೂರ್ವಿಕರು ಪ್ರಾದೇಶಿಕ, ಮಾತೃಭಾಷೆಗೆ ಹೆಚ್ಚು ಮನ್ನಣೆ ನೀಡುತ್ತಿದ್ದರು. ಅದೇ ರೀತಿ ನಾವು ಕೂಡ ಅವರ ಹಾದಿಯಲ್ಲಿ ಸಾಗಿದರೆ ಭಾಷೆ ಜತೆಗೆ ಸಂಸ್ಕೃತಿ, ಸಂಸ್ಕಾರ ಉಳಿಯಲಿದೆ ಎಂದು ಹೇಳಿದರು.

    ಕನ್ನಡ ನಾಡು ಅತ್ಯಂತ ಪ್ರಾಚೀನ

    ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ಕನ್ನಡ ನಾಡು ಅತ್ಯಂತ ಪ್ರಾಚೀನವಾಗಿದ್ದು, ರಾಮಾಯಣ, ಮಹಾಭಾರತ ಕಾಲದಲ್ಲಿಯೇ ಕನ್ನಡ ಪದಗಳು ದೊರಕಿವೆ.

    ಸರಿಯಾದ ರೀತಿಯಲ್ಲಿ ಕನ್ನಡದ ನಿಘಂಟನ್ನು ರಚಿಸಿದರೆ ಒಂದು ಲಕ್ಷಕ್ಕೂ ಅಧಿಕ ಪದಗಳು ದೊರೆಯುತ್ತವೆ. ಶಾಸ್ತ್ರೀಯ ಭಾಷೆ ಸ್ಥಾನಮಾನ ಪಡೆದ ಕೆಲವೇ ಭಾಷೆಗಳಲ್ಲಿ ಕನ್ನಡವೂ ಒಂದು ಎಂದು ತಿಳಿಸಿದರು.

    ಸಲಹಾ ಸಮಿತಿ ಅಧ್ಯಕ್ಷ ರೇವಣಸಿದ್ದಪ್ಪ ಮಾತನಾಡಿ, ಭೀಮಸಮುದ್ರವು ಅಡಕೆ, ತೆಂಗು, ರಾಜಕೀಯಕ್ಕೆ ಖ್ಯಾತಿ ಗಳಿಸಿದೆ. ಅದೇ ರೀತಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಪಡೆಯುವ ರೀತಿ ಪರಿಷತ್ ನೇತೃತ್ವದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.

    ತಾಲೂಕಾಧ್ಯಕ್ಷ ರಾಮಲಿಂಗ ಶ್ರೇಷ್ಠಿ, ಕಾರ್ಯದರ್ಶಿ ವೆಂಕಟೇಶಮೂರ್ತಿ ಮಾತನಾಡಿದರು. ಗಾಯಕ ಬಿ.ವಿ.ಎಂ.ಪ್ರಭು ಕನ್ನಡ ಹಾಡುಗಳನ್ನು ಹಾಡಿದರು.

    ಜಿಲ್ಲಾ ಕೋಶಾಧ್ಯಕ್ಷ ಚೌಳೂರು ಲೋಕೇಶ್, ಹೋಬಳಿ ಕಾರ್ಯದರ್ಶಿ ಎಂ.ಎನ್.ರಾಮು, ಬಿ.ಕೆ.ಕಲ್ಲಪ್ಪ, ಮಹೇಶ್, ಡಾ.ಮಹೇಶ್, ರಾಜು, ಜಿ.ಎಸ್.ಸಿದ್ದೇಶ್, ಆನಂದಪ್ಪ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts