More

    ಭಾರೀ ಮಳೆಯಿಂದಾಗಿ ಭೂಕುಸಿತ… ಕೊಚ್ಚಿಹೋದ ಮನೆಗಳು!

    ಕಾಂಗ್ರಾ : ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಎತ್ತರದ ಪ್ರದೇಶದಲ್ಲಿರುವ ಗ್ರಾಮವಾದ ಬೋಹ್​ನಲ್ಲಿ ಭೂಕುಸಿತವುಂಟಾಗಿದೆ. ಕನಿಷ್ಠ ಆರು ಮನೆಗಳು ಕೊಚ್ಚಿಹೋಗಿದ್ದು, 10 ಕ್ಕೂ ಹೆಚ್ಚು ಜನರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಭಾವಿಸಲಾಗಿದೆ.

    ಧರಂಶಾಲಾದಿಂದ 45 ಕಿಲೋಮೀಟರ್ ದೂರದಲ್ಲಿರುವ ಶಹಪುರ ಉಪವಿಭಾಗ ವ್ಯಾಪ್ತಿಯ ಬೋಹ್​ ಗ್ರಾಮಕ್ಕೆ ರೆಸ್ಕ್ಯೂ ಟೀಂಗಳು ತೆರಳಿವೆ. ಆದರೆ ಭೂಕುಸಿತದಿಂದ ರಸ್ತೆಗಳು ಬ್ಲಾಕ್​ ಆಗಿರುವುದರಿಂದ ತಲುಪುವಲ್ಲಿ ವಿಳಂಬವಾಗುತ್ತಿದೆ ಎಂದು ಕಾಂಗ್ರಾ ಜಿಲ್ಲೆ ಡಿಸಾಸ್ಟರ್ ಮ್ಯಾನೇಜ್​ಮೆಂಟ್ ಅಥಾರಿಟಿಯ ಸಂಚಾಲಕ ಭಾನು ಶರ್ಮ ಹೇಳಿದ್ದಾರೆ.

    ಇದನ್ನೂ ಓದಿ: ಕ್ಯಾನ್ಸರ್​ನಿಂದ ಬಳಲುತ್ತಿದ್ದ ನಾಯಿಯನ್ನು ಟ್ರಿಪ್​ ಕರೆದೊಯ್ದು ಅಂತಿಮ ಆಸೆ ಪೂರೈಸಿದ ಮಾಲೀಕ

    “ವಾಯುಯಾನದ ಮೂಲಕ ಸಂರಕ್ಷಕ ತಂಡವನ್ನು ಕಳುಹಿಸಲು ಇಂಡಿಯನ್​ ಏರ್​ ಫೋರ್ಸ್​ಗೆ ಮನವಿ ಮಾಡಿದ್ದೇವೆ. ಆದರೆ ಕೆಟ್ಟ ಹವಾಮಾನದಿಂದಾಗಿ ಅದು ಹಾಲಿ ಸಾಧ್ಯವಾಗುವುದಿಲ್ಲ” ಎಂದಿರುವ ಶರ್ಮ, ಪೊಲೀಸ್​ ತಂಡವೊಂದು ನಡೆದುಕೊಂಡೇ ಬೋಹ್​ ಗ್ರಾಮವನ್ನು ತಲುಪುವ ಪ್ರಯತ್ನ ಮಾಡುತ್ತಿದೆ. ಅಲ್ಲಿ ಉಂಟಾಗಿರುವ ಯಾವುದೇ ಸಾವುನೋವಿನ ಬಗ್ಗೆ ಆ ತಂಡ ತಲುಪಿದ ಮೇಲೆ ತಿಳಿದುಬರಲಿದೆ ಎಂದಿದ್ದಾರೆ. (ಏಜೆನ್ಸೀಸ್)

    ಪುರಿಯಲ್ಲಿ ಭಗವಾನ್​ ಶ್ರೀ ಜಗನ್ನಾಥ ದೇವರ ಭವ್ಯ ರಥಯಾತ್ರೆ

    ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಹೈಕೋರ್ಟ್​ ಗ್ರೀನ್ ಸಿಗ್ನಲ್

    ಅತ್ಯಾಧುನಿಕ ಮತ್ತು ನೈಪುಣ್ಯಪೂರ್ಣ ‘ಸ್ಕೋಡಾ ಕುಷಾಕ್’ ಮಾರುಕಟ್ಟೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts