More

    ಭೂಕುಸಿತದಿಂದ ರೈಲು ಸಂಚಾರದಲ್ಲಿ ವ್ಯತ್ಯಯ

    ಹುಬ್ಬಳ್ಳಿ : ಬ್ರಗಾಂಜಾ ಘಾಟ್​ನ ಕ್ಯಾಸಲ್​ರಾಕ್-ಕರಂಜೊಲ್ ನಿಲ್ದಾಣಗಳ ಮಧ್ಯೆ ಭೂಕುಸಿತ ಉಂಟಾಗಿದ್ದರಿಂದ ಈ ಮಾರ್ಗದ ವಿವಿಧ ರೈಲುಗಳ ಸಂಚಾರವನ್ನು ರದ್ದು/ಭಾಗಶಃ ರದ್ದುಗೊಳಿಸಲಾಗಿದೆ.

    ಜು. 27ರಂದು ತಿರುಪತಿ/ಹೈದರಾಬಾದ್- ವಾಸ್ಕೊ ವೀಕ್ಲಿ ಎಕ್ಸ್​ಪ್ರೆಸ್, 28ರಂದು ವಾಸ್ಕೊ- ತಿರುಪತಿ/ಹೈದರಾಬಾದ್ ವೀಕ್ಲಿ ಎಕ್ಸ್​ಪ್ರೆಸ್, 27 ಮತ್ತು 28ರಂದು ಯಶವಂತಪುರ – ವಾಸ್ಕೊ ಡೈಲಿ ಎಕ್ಸ್​ಪ್ರೆಸ್, ವಾಸ್ಕೊ- ಯಶವಂತಪುರ ಡೈಲಿ ಎಕ್ಸ್​ಪ್ರೆಸ್ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.

    ಭಾಗಶಃ ರದ್ದು : ಜು. 27ರಂದು ಹಜರತ್ ನಿಜಾಮುದ್ದಿನ್- ವಾಸ್ಕೊ ಡೈಲಿ ಸೂಪರ್​ಫಾಸ್ಟ್ ಎಕ್ಸ್​ಪ್ರೆಸ್ ರೈಲು ಬೆಳಗಾವಿವರೆಗೆ ಮಾತ್ರ ಸಂಚರಿಸಲಿದೆ. 29ರಂದು ವಾಸ್ಕೊ- ಹಜರತ್ ನಿಜಾಮುದ್ದಿನ್ ಡೈಲಿ ಎಕ್ಸ್​ಪ್ರೆಸ್ ರೈಲು ಬೆಳಗಾವಿಯಿಂದ ಸಂಚಾರ ಪ್ರಾರಂಭಿಸಲಿದೆ.

    28ರಂದು ವಾಸ್ಕೊ- ಜಾಸಿದಿಹ ವೀಕ್ಲಿ ಎಕ್ಸ್​ಪ್ರೆಸ್ ರೈಲು ಲೋಂಡಾದಿಂದ ಸಂಚಾರ ಪ್ರಾರಂಭಿಸಲಿದೆ.

    28ರಂದು ವಾಸ್ಕೊ – ಶಾಲಿಮಾರ್ ಅಮರಾವತಿ ಎಕ್ಸ್​ಪ್ರೆಸ್ ರೈಲು ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣದಿಂದ 60 ನಿಮಿಷ ತಡವಾಗಿ ಸಂಚಾರ ಪ್ರಾರಂಭಿಸಲಿದೆ.

    28ರಂದು ವಾಸ್ಕೊ- ಕಾಚಿಗುಡ ಸ್ಲಿಪ್ ಕೋಚ್ ರೈಲು ಎಸ್​ಎಸ್​ಎಸ್ ಹುಬ್ಬಳ್ಳಿ ರೈಲು ನಿಲ್ದಾಣದ ಸಂಚಾರ ಪ್ರಾರಂಭಿಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts