More

    ರಸ್ತೆ ಕಾಮಗಾರಿಗೆ ಭೂಮಿ ಪೂಜೆ

    ರಟ್ಟಿಹಳ್ಳಿ: ಗ್ರಾಮೀಣ ಪ್ರದೇಶಗಳ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರು ಸೇರಿ ಹಲವು ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಿದಾಗ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾಗುವುದರೊಂದಿಗೆ ದೇಶದ ಉನ್ನತಿಗೂ ಸಹಾಯವಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

    ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶನಿವಾರ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ತಾಲೂಕಿನ ದೊಡ್ಡಗುಬ್ಬಿ ಗ್ರಾಮದಿಂದ ಯಡಗೋಡ ಗ್ರಾಮಕ್ಕೆ ಸಂರ್ಪಸುವ ಮುಖ್ಯ ರಸ್ತೆಯನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ 2019-20ನೇ ಸಾಲಿನ 5045 ಯೋಜನೆಯಡಿ 55 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ ಪ್ರಾರಂಭಿಸಲಾಗುವುದು. ಈಗಾಗಲೇ ಗುಂಡಗಟ್ಟಿ ಗ್ರಾಮದಲ್ಲಿ ಬಸ್ ತಂಗುದಾಣ ಕಾಮಗಾರಿಗೆ 5 ಲಕ್ಷ ಅಂದಾಜು ವೆಚ್ಚ, ಮೇದೂರ ಗ್ರಾಮದಿಂದ ಕಣವಿಸಿದ್ದಗೇರಿ ರಸ್ತೆ ಅಭಿವೃದ್ಧಿಗಾಗಿ 150 ಲಕ್ಷ ಅಂದಾಜು ವೆಚ್ಚ, ಹೊಸಕಟ್ಟಿ ಗ್ರಾಮದಿಂದ ಹೊನ್ನಾಳಿ ರಸ್ತೆ ಅಭಿವೃದ್ಧಿಗಾಗಿ 350 ಲಕ್ಷ, ಬುಳ್ಳಾಪುರ ಗ್ರಾಮದಿಂದ ಕಿರಗೇರಿ ಗ್ರಾಮದವರೆಗೆ 75 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಮತ್ತು ಮಾಸೂರು-ರಟ್ಟಿಹಳ್ಳಿ ರಸ್ತೆಯಿಂದ ಖಂಡೇಬಾಗೂರ ಗ್ರಾಮಕ್ಕೆ 46 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ ಎಂದರು.

    ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ತಾಲೂಕಿನಲ್ಲಿ ಅನೇಕ ಗ್ರಾಮಗಳಿಗೆ ಸಂರ್ಪಸುವ ಮುಖ್ಯ ರಸ್ತೆಗಳು ಅತಿವೃಷ್ಟಿಯಿಂದ ಹಾನಿಯಾಗಿದ್ದವು. ಈಗ ರಸ್ತೆಗಳ ಕಾಮಗಾರಿಯಿಂದ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದರು.

    ತಾ.ಪಂ. ಅಧ್ಯಕ್ಷ ರಾಜು ಬಣಕಾರ, ಮಾಜಿ ಸದಸ್ಯ ಆರ್.ಎನ್. ಗಂಗೋಳ, ಗ್ರಾ.ಪಂ. ಸದಸ್ಯ ಬಸವರಾಜ ಬಾಗೂರ, ಶರಣಪ್ಪ ಸಿದ್ಲಿಂಗಪ್ಪನವರ, ಮಹೇಂದ್ರ ಬಡಳ್ಳಿ, ಪ್ರಕಾಶ ಎಲೇದಹಳ್ಳಿ, ಬಸನಗೌಡ ಗಂಗಪ್ಪಳವರ, ಪಿಡಿಒ ಗಣೇಶ ಬಿದರಿ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts