More

    ನೋಟಿಸ್ ನೀಡದೆ ಜಮೀನು ತೆರವು

    ಮದ್ದೂರು: ತಾಲೂಕಿನ ಬೆಸಗರಹಳ್ಳಿಯಿಂದ ಸೊಳ್ಳೆಪುರಕ್ಕೆ ಸಂಪರ್ಕ ಕಲ್ಪಿಸುವ ಬಂಡಿ ರಸ್ತೆಯ ಇಕ್ಕೆಲಗಳಲ್ಲಿದ್ದ ಜಮೀನು ಜಾಗವನ್ನು ರಸ್ತೆ ವಿಸ್ತರಣೆಗಾಗಿ ತಾಲೂಕು ಆಡಳಿತ ರೈತರಿಗೆ ನೋಟಿಸ್ ನೀಡದೆ ತೆರವು ಮಾಡಿದೆ ಎಂದು ರೈತ ಸಂಘದ ಮುಖಂಡ ಸೋ.ಶಿ.ಪ್ರಕಾಶ್ ಆರೋಪಿಸಿದ್ದಾರೆ.

    ಬರಗಾಲದ ಸಂದರ್ಭದಲ್ಲಿ ರೈತರು ಭತ್ತ ಮತ್ತು ಕಬ್ಬನ್ನು ಕಷ್ಟಪಟ್ಟು ಬೆಳೆದಿದ್ದರು. 15 ಅಡಿ ಇದ್ದ ಬಂಡಿ ರಸ್ತೆಯನ್ನು ಮತ್ತೆ ಹದಿನೈದು ಅಡಿಗೆ ವಿಸ್ತರಿಸಿದ್ದು, ಇದು ಅಗತ್ಯವಿರಲಿಲ್ಲ. ರೈತರು ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ತೆರವು ಮಾಡಿಕೊಡುತ್ತೇವೆ ಎಂದು ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದರು. ಆದರೆ ತಾಲೂಕು ಆಡಳಿತ ಏಕಾಏಕಿ ಬಂದು ರೈತರ ಜಮೀನುಗಳನ್ನು ಅತಿಕ್ರಮಿಸಿಕೊಂಡಿದೆ. ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳನ್ನು ನಾಶ ಮಾಡಿ ಬಂಡಿ ರಸ್ತೆಯನ್ನು ವಿಸ್ತರಣೆ ಮಾಡಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಅಧಿಕಾರಿಗಳ ವಿರುದ್ಧ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

    ತಾಲೂಕು ಆಡಳಿತ ಈ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts