More

    ಆಸ್ತಿಗಾಗಿ ಅಣ್ಣನನ್ನೇ ಕೊಂದ ತಮ್ಮಂದಿರು; ರಾಡ್​ನಿಂದ ತಲೆಗೆ ಹೊಡೆದು ಹತ್ಯೆ

    ಉತ್ತರಕನ್ನಡ: ಅಣ್ಣ-ತಮ್ಮಂದಿರ ನಡುವಿನ ಆಸ್ತಿ ವಿವಾದ ಕೊಲೆಯೊಂದಕ್ಕೆ ಕಾರಣವಾಗಿದೆ. ತಮ್ಮಂದಿರಿಬ್ಬರು ಸೇರಿ ಅಣ್ಣನನ್ನು ಕೊಲೆ ಮಾಡಿದ ಘಟನೆಯೊಂದು ನಡೆದಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಈ ಕೊಲೆ ನಡೆದಿದೆ.

    ಹನುಮಂತ ಹೊನ್ನಪ್ಪ ನಾಯ್ಕ್ (54) ದಾರುಣವಾಗಿ ಸಾವಿಗೀಡಾದ ವ್ಯಕ್ತಿ. ಈತನ ತಮ್ಮಂದಿರಾದ ವಿನಾಯಕ ನಾಯ್ಕ, ಚಿದಾನಂದ ನಾಯ್ಕ್ ಕೊಲೆ‌ ಆರೋಪಿಗಳು. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅರೆಯಂಗಡಿಯ ತೊಟ್ಟಿಲಗುಂಡಿಯಲ್ಲಿ ಈ ಹತ್ಯೆ ನಡೆದಿದೆ. ಈ ಪ್ರಕರಣದಲ್ಲಿ ಮೃತಪಟ್ಟವರ ಸಹೋದರ ಮಾವ ಮಾರುತಿ ನಾಯ್ಕ್ (70) ಎಂಬವರಿಗೆ ಗಂಭೀರ ಗಾಯಗಳಾಗಿವೆ.

    ಆಸ್ತಿ ವಿವಾದ ಸಂದರ್ಭ ರಾಡ್‌ನಲ್ಲಿ ತಲೆಗೆ ಹೊಡೆದಿದ್ದರಿಂದ ಹನುಮಂತ ನಾಯ್ಕ್ ಸ್ಥಳದಲ್ಲೇ ಸಾವಿಗೀಡಾಗಿದ್ದರು. ಈ ಹಿಂದೆ ಕೂಡ ಅಡಕೆ, ಆಸ್ತಿ ವಿಚಾರದಲ್ಲಿ ಅಣ್ಣ ತಮ್ಮಂದಿರಲ್ಲಿ ಗಲಾಟೆ ನಡೆದಿತ್ತು. ಇಂದು ಜಗಳ ತಾರಕಕ್ಕೇರಿ ಸಹೋದರರು ಅಣ್ಣನನ್ನು ಕೊಲೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಹೊನ್ನಾವರ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಆಸ್ತಿಗಾಗಿ ಅಣ್ಣನನ್ನೇ ಕೊಂದ ತಮ್ಮಂದಿರು; ರಾಡ್​ನಿಂದ ತಲೆಗೆ ಹೊಡೆದು ಹತ್ಯೆ

    ಇಂಟೆಲಿಜೆನ್ಸ್ ಬ್ಯೂರೋ ನಿವೃತ್ತ ಅಧಿಕಾರಿ ಸಾವು!; ಅಪಘಾತ ಮಾಡಿ ಕೊಂದ್ರಾ?

    ಉದ್ಯಮಿ ಸೈರಸ್​ ಮಿಸ್ತ್ರಿ ಸಾವು; ಲೇಡಿ ಡಾಕ್ಟರ್​ ವಿರುದ್ಧ ಕೇಸ್..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts