More

    ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಸಣ್ಣ ರೈತರು, ವ್ಯಾಪಾರಿಗಳಿಗೆ ಮಾರಕ; ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿಕೆ

    ಸಿಂಧನೂರು: ಕೇಂದ್ರ ಸರ್ಕಾರದ ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಸಣ್ಣ ರೈತರು, ವ್ಯಾಪಾರಿಗಳಿಗೆ ಮಾರಕವಾಗಲಿದೆ. ಕೃಷಿಯಿಂದ ರೈತರನ್ನು ವಿಮುಕ್ತಗೊಳಿಸುವ ಪ್ರಯತ್ನ ನಡೆದಿದೆಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಆರೋಪಿಸಿದರು.

    ನಗರದ ಕನಕ ಮಂಗಲ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದೇಶ ಕೋವಿಡ್-19 ಗಲಾಟೆಯಲ್ಲಿರುವ ಸಂದರ್ಭದಲ್ಲಿ ಯಾವುದೇ ವಿರೋಧ, ಹೋರಾಟ ಇಲ್ಲದ್ದನ್ನು ಅರಿತು ಕೇಂದ್ರ ಸರ್ಕಾರ ಭೂಸುಧಾರಣ ಕಾಯ್ದೆ ತಿದ್ದುಪಡಿಗೆ ಮುಂದಾಗಿದೆ. 1974ರಲ್ಲಿ ಮಾಜಿ ಸಿಎಂ ದಿ.ದೇವರಾಜ ಅರಸು ಕಾಲದಲ್ಲಿ ಜಾರಿಗೆ ತಂದಿದ್ದ ಭೂಸುಧಾರಣೆ ಕಾಯ್ದೆಯಿಂದ ಉಳುವವನೆ ಭೂಮಿ ಪಟ್ಟ ಹೊಂದಿದ್ದನು. ಈ ಕಾಯ್ದೆ ದೇಶಕ್ಕೆ ಮಾದರಿಯಾಗಿತ್ತು. ಇಂದಿರಾಗಾಂಧಿ ಅವರ 20 ಅಂಶ ಕಾರ್ಯಕ್ರಮದಲ್ಲಿ ಭೂಸುಧಾರಣೆಯೂ ಒಂದಾಗಿತ್ತು ಎಂದರು.

    ಈಗಾಗಲೇ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಸಣ್ಣ ರೈತರ ಸಂಖ್ಯೆ ಇಲ್ಲದಂತೆ ಮಾಡುವುದು ಈ ತಿದ್ದುಪಡಿಯ ಉದ್ದೇಶವೆಂಬತಿದೆ. ಕೃಷಿಕರಿಗೆ ಸಂಪೂರ್ಣ ವಿರೋಧಿ ಕಾನೂನು ಇದಾಗಿದೆ. ಭೂಮಿ ಕಳೆದುಕೊಂಡು ರೈತರು ಗುಲಾಮರಾಗಬೇಕಾಗುತ್ತಿದೆ. ವ್ಯಾಪಾರಿಗಳ ಕೈಯಲ್ಲಿ ದೇಶ ನೀಡುವ ಹುನ್ನಾರ ನಡೆದಿದೆ ಎಂದು ದೂರಿದರು.

    ಈಗಾಗಲೇ ತಜ್ಞರ ಪ್ರಕಾರ 2030ರ ವೇಳೆಗೆ ದೇಶದಲ್ಲಿ ಅನ್ನದ ಕೊರತೆ ಎದುರಾಗಲಿರುವ ಮೂನ್ಸೂಚನೆ ನೀಡಿರುವುದು ಈ ಭೂಸುಧಾರಣೆ ಕಾಯ್ದೆ ತಿದ್ದುಪಡಿಗೆ ಹಿಂಬು ನೀಡಿದಂತಾಗಿದೆ. ಭೂಸುಧಾರಣೆ ಕಾಯ್ದೆ ತಿದ್ದುಪಡಿಯನ್ನು ಸರ್ಕಾರ ಕೈಬಿಡಬೇಕೆಂದು ಒತ್ತಾಯಿಸಿದರು. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಫಕೀರಪ್ಪ ಹೆಡಗಿನಾಳ, ಎಚ್.ಎನ್.ಬಡಿಗೇರ, ವೆಂಕಣ್ಣ ತಿಪ್ಪನಹಟ್ಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts