More

    ಒಳ ಮೀಸಲಾತಿಯಿಂದ ಅನ್ಯಾಯ

    ತರೀಕೆರೆ: ಪರಿಶಿಷ್ಟ ಜಾತಿ ಒಳ ಮೀಸಲಾತಿಗಾಗಿ ಕೇಂದ್ರಕ್ಕೆ ಶಿಾರಸು ಮಾಡಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಅಜ್ಜಂಪುರ ಗೋರ್ ಸೇನಾ ಪದಾಧಿಕಾರಿಗಳು ಶನಿವಾರ ತಹಸೀಲ್ದಾರ್ ಶಿವಶರಣಪ್ಪ ಕಟ್ಟೋಳಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

    ಅಜ್ಜಂಪುರ ತಾಲೂಕು ಗೋರ್ ಸೇನಾ ಸಂಯೋಜಕ ಕೆ.ಆರ್.ಉಮೇಶನಾಯ್ಕ ಮಾತನಾಡಿ, ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಾರಸು ಮಾಡಿ ಅನುಚ್ಛೇದ 341ಕ್ಕೆ ತಿದ್ದುಪಡಿ ತರುವ ಮೂಲಕ ಬಂಜಾರ, ಭೋವಿ, ಕೊರಚ, ಕೊರಮ ಸೇರಿ ಪರಿಶಿಷ್ಟ ಜಾತಿಯ 101 ಒಳ ಪಂಗಡಗಳಿಗೆ ಮರಣ ಶಾಸನ ಬರೆಯಲು ಹೊರಟಿದೆ ಎಂದು ದೂರಿದರು.
    ಅಸಂವಿಧಾನಿಕವಾಗಿರುವ ಅನುಚ್ಛೇದ 341ಕ್ಕೆ ತಿದ್ದುಪಡಿ ತಂದರೆ ಬಂಜಾರ, ಭೋವಿ, ಕೊರಚ, ಕೊರಮ ಸೇರಿ ಪರಿಶಿಷ್ಟ ಜಾತಿಯ 101 ಉಪ ಪಂಗಡಗಳಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹೊಡೆತ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
    ತಳ ಸಮುದಾಯದ ಪ್ರಗತಿಗೆ ಮಾರಕವಾಗಿರುವ ಅನುಚ್ಛೇದ 341ರ ತಿದ್ದುಪಡಿಯ ನಡಾವಳಿಯನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕು. ಮೊದಲಿನಂತೆ ಯಥಾಸ್ಥಿತಿ ಕಾಪಾಡಬೇಕು ಎಂದು ಒತ್ತಾಯಿಸಿದರು.
    ಗೋರ್ ಸೇನಾ ಪದಾಧಿಕಾರಿಗಳಾದ ಶಂಕ್ರನಾಯ್ಕ, ರವಿನಾಯ್ಕ, ತಿಮ್ಮಾನಾಯ್ಕ, ರಮೇಶ್‌ನಾಯ್ಕ, ಲೋಕಾನಾಯ್ಕ, ಶಿವನಾಯ್ಕ, ಗಿರೀಶ್‌ನಾಯ್ಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts