More

    ಎರಡು ಮುಖ, ಮೂರು ಕಣ್ಣುಳ್ಳ ಮೇಕೆ ಮರಿ ಜನನ! ಭಾರವಾದ ತಲೆಯಿಂದ ನಿಲ್ಲುವುದಕ್ಕೂ ಆಗ್ತಿಲ್ಲ

    ನವದೆಹಲಿ: ಈ ಪ್ರಕೃತಿಯೇ ವಿಸ್ಮಯಗಳ ಆಗರ. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಹೀಗೆ ಯಾರಿಗೂ, ಯಾವ ಕ್ಷೇತ್ರಕ್ಕೂ ನಿಲುಕದ ನಿಗೂಢಗಳು ಅದೆಷ್ಟೋ ಈ ಭೂಮಿಯ ಮೇಲೆ ನಡೆದಿವೆ, ನಡೆಯುತ್ತಲೇ ಇವೆ. ಅವುಗಳ ಪೈಕಿ ಕೆಲವು ಘಟನೆಗಳಿಗೆ ವೈಜ್ಞಾನಿಕ ಮೂಲ ನೀಡಿದರೂ, ಇನ್ನೆಷ್ಟೋ ಘಟನೆಗಳು ಊಹೆಗೂ ಮೀರಿದ್ದೇ ಆಗಿವೆ.

    ಎರಡು ಮುಖ, ಮೂರು ಕಣ್ಣು

    ಇದೀಗ ಮತ್ತೊಂದು ವಿಸ್ಮಯ ದೇವರ ನಾಡು ಕೇರಳದಲ್ಲಿ ನಡೆದಿದೆ. ಎರಡು ಮುಖ ಹಾಗೂ ಮೂರು ಕಣ್ಣುಗಳುಳ್ಳ ವಿಚಿತ್ರ ಮೇಕೆ ಮರಿಯೊಂದು ಜನಿಸಿದೆ. ಈ ವಿಸ್ಮಯಕಾರಿ ಘಟನೆ ಕೇರಳದ ಕೆಲಕಂನ ಮನಯಪರಂಬು ಎಂಬಲ್ಲಿ ನಡೆದಿದೆ. ರಂಜಿತ್​ ಎಂಬುವರು ಮೇಕೆಯೊಂದನ್ನು ಸಾಕುತ್ತಿದ್ದು, ಅದಕ್ಕೆ ಹುಟ್ಟಿದ ಎರಡು ಮರಿಗಳಲ್ಲಿ ಒಂದು ಮರಿ ವಿಚಿತ್ರವಾಗಿ ಜನಿಸಿದೆ.

    ಇದನ್ನೂ ಓದಿ: 2 ಗ್ಯಾರಂಟಿ ಬೇಷರತ್ ಜಾರಿ; ಎಲ್ರಿಗೂ 200 ಯುನಿಟ್ ಕರೆಂಟ್, ಸ್ತ್ರೀಯರಿಗೆ ಉಚಿತ ಬಸ್ ಟಿಕೆಟ್

    ಹಾಲು ಕುಡಿಯಲು ಕಷ್ಟ

    ತಲೆಯ ತೂಕದ ಕಾರಣ ಮೇಕೆ ಮರಿಯು ನಿಲ್ಲಲು ಸಾಧ್ಯವಾಗುತ್ತಿಲ್ಲ. ಕುರಿಮರಿಯು ಎರಡೂ ಬಾಯಿಗಳನ್ನು ಬಳಸಿ ತಿನ್ನುವುದು ಮತ್ತು ಅಳುವುದು ಕಂಡುಬಂದಿದೆ. ಆದರೆ ಕುರಿಮರಿಗೆ ಹಾಲು ಕುಡಿಯಲು ಕಷ್ಟವಾಗಿದೆ ಎಂದು ಮಾಲೀಕ ರಂಜಿತ್ ಹೇಳಿದರು.

    ಈ ವಿಸ್ಮಯಕಾರಿ ಕುರಿಮರಿಯನ್ನು ಕಣ್ತುಂಬಿಕೊಳ್ಳಲು ಪಕ್ಕದ ಊರಿನಿಂದ ಸಾಕಷ್ಟು ಮಂದಿ ರಂಜಿತ್​ ಅವರ ಮನೆಗೆ ಧಾವಿಸುತ್ತಿದ್ದು, ಮರಿಯನ್ನು ಹುಬ್ಬೇರಿಸುತ್ತಿದ್ದಾರೆ. (ಏಜೆನ್ಸೀಸ್​)

    ಬಂಡುಕೋರರ ಬೀಡು; ಸಂಘರ್ಷದ ನಾಡು

    ಸ್ವಾವಲಂಬನೆಯತ್ತ ಹೆಜ್ಜೆ: ರಕ್ಷಣಾ ರಫ್ತು 9 ವರ್ಷಗಳಲ್ಲಿ 23 ಪಟ್ಟು ಹೆಚ್ಚಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts