ಬಂಡುಕೋರರ ಬೀಡು; ಸಂಘರ್ಷದ ನಾಡು

ಈಶಾನ್ಯ ಭಾರತ ರಾಜ್ಯವಾದ ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ 40 ದಂಗೆಕೋರರು ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಎನ್. ಬೀರೇನ್ ಸಿಂಗ್ ಈಚೆಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರು. ಆದರೆ, ಕುಕಿ ನ್ಯಾಷನಲ್ ಆರ್ಗನೈಸೇಶನ್ (ಕೆಎನ್​ಒ) ಈ ಸಂಗತಿಯನ್ನು ನಿರಾಕರಿಸಿದೆ. ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕೆಂದು ಮೈತೆಯಿ ಸಮುದಾಯದ ಜನರು ಈಚೆಗೆ ಹೋರಾಟ ಆರಂಭಿಸಿದ ನಂತರ ಮಣಿಪುರದಲ್ಲಿ ಹಿಂಸಾಚಾರಗಳು ಭುಗಿಲೆದ್ದಿವೆ. ರಾಜ್ಯದ ಜನಸಂಖ್ಯೆಯಲ್ಲಿ ಮೈತೆಯಿ ಸಮುದಾಯವರ ಪಾಲು ಹೆಚ್ಚಾಗಿರುವುದರಿಂದ ಹಾಗೂ ರಾಜಕೀಯವಾಗಿಯೂ ಈ ಸಮುದಾಯವರು ಬಲಾಢ್ಯವಾಗಿರುವುದರಿಂದ ಉಳಿದ … Continue reading ಬಂಡುಕೋರರ ಬೀಡು; ಸಂಘರ್ಷದ ನಾಡು