More

    ಡಿಎಲ್​ಎಫ್​ ಲಂಚ ಪ್ರಕರಣದಲ್ಲಿ ಲಾಲು ಪ್ರಸಾದ್​ ಯಾದವ್​​ಗೆ ಕ್ಲೀನ್​ ಚಿಟ್​

    ನವದೆಹಲಿ : ಬಿಹಾರದ ಮಾಜಿ ಸಿಎಂ ಮತ್ತು ರಾಷ್ಟ್ರೀಯ ಜನತಾದಳ(ಆರ್​ಜೆಡಿ) ನಾಯಕ ಲಾಲು ಪ್ರಸಾದ್ ಯಾದವ್ ಅವರಿಗೆ ಡಿಎಲ್​ಎಫ್​ ಲಂಚ ಪ್ರಕರಣದಲ್ಲಿ ಸಿಬಿಐ ಕ್ಲೀನ್ ಚಿಟ್ ನೀಡಿದೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಲಾಲು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ, ದೆಹಲಿಯ ಐಷಾರಾಮಿ ಬಡಾವಣೆಯ ಪ್ರಾಪರ್ಟಿಯೊಂದನ್ನು ಲಂಚವಾಗಿ ನೀಡಲಾಗಿತ್ತು ಎಂಬ ಆರೋಪದ ತನಿಖೆ ನಡೆಯುತ್ತಿತ್ತು.

    ರಿಯಲ್ ಎಸ್ಟೇಟ್ ಡೆವಲಪರ್ ಡಿಎಲ್ಎಫ್ ಗ್ರೂಪ್​​ ಮುಂಬೈನ ಬಾಂದ್ರಾದಲ್ಲಿನ ರೈಲ್ವೆ ಭೂಮಿ ಮತ್ತು ನವದೆಹಲಿಯ ರೈಲ್ವೆ ನಿಲ್ದಾಣದ ಅಪ್​ಗ್ರೆಡೇಷನ್ ಯೋಜನೆಗಳನ್ನು ಪಡೆಯುವ ಉದ್ದೇಶ ಹೊಂದಿತ್ತು. ಇದೇ ಸಂದರ್ಭದಲ್ಲಿ ದಕ್ಷಿಣ ದೆಹಲಿಯ ನ್ಯೂ ಫ್ರೆಂಡ್ಸ್​​ ಕಾಲೊನಿಯಲ್ಲಿನ 30 ಕೋಟಿ ರೂ. ಬೆಲೆಯ ಡಿಎಲ್​​ಎಫ್​ ಪ್ರಾಪರ್ಟಿಯನ್ನು ಲಾಲು ಕುಟುಂಬದವರು ಕಂಪೆನಿಯೊಂದನ್ನು ಕೇವಲ 4 ಲಕ್ಷ ರೂ.ಗಳ ಶೇರ್​ಗಳ ವರ್ಗಾವಣೆ ಮಾಡಿ ಕೊಳ್ಳುವ ಮೂಲಕ ಪಡೆದುಕೊಂಡಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ಈ ಫೋಟೋ ಕ್ಲಿಕ್ಕಿಸಿದ್ದ ನೇತ್ರರಾಜು ಇನ್ನಿಲ್ಲ, ಬದುಕಿದ್ದಾಗ ತೆಗೆದ ಅದ್ಭುತ ಚಿತ್ರಗಳು ಇಲ್ಲಿವೆ

    ಮೂಲಗಳ ಪ್ರಕಾರ, ಸಿಬಿಐನ ಆರ್ಥಿಕ ಅಪರಾಧ ಶಾಖೆ, 2018 ರ ಜನವರಿಯಲ್ಲಿ, ಭ್ರಷ್ಟಾಚಾರದ ಆರೋಪದ ಮೇಲೆ ಲಾಲು ಮತ್ತು ಡಿಎಲ್ಎಫ್ ಗ್ರೂಪ್ ವಿರುದ್ಧ ಪ್ರಾಥಮಿಕ ತನಿಖೆ ಆರಂಭಿಸಿತ್ತು. ಆದರೆ ಎರಡು ವರ್ಷಗಳ ತನಿಖೆಯ ನಂತರ ಆರೋಪಗಳಿಗೆ ಪೂರಕವಾದ ಕೇಸ್​ ಇಲ್ಲದ್ದರಿಂದ ಪ್ರಾಥಮಿಕ ತನಿಖೆಯನ್ನು ಮುಚ್ಚಲಾಗಿದೆ ಎಂದು ಎನ್​ಡಿಟಿವಿ ವರದಿ ಮಾಡಿದೆ.

    ಈ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆಯೂ ಪ್ರತ್ಯೇಕ ತನಿಖೆಯನ್ನು ಆರಂಭಿಸಿತ್ತು ಎನ್ನಲಾಗಿದೆ. ಬಿಹಾರದ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಮೂರು ವರ್ಷಗಳಿಗಿಂತ ಹೆಚ್ಚು ಜೈಲುವಾಸ ಅನುಭವಿಸಿದ ಲಾಲು, ಕಳೆದ ಏಪ್ರಿಲ್​​ನಿಂದ ಜಾಮೀನಿನಲ್ಲಿದ್ದಾರೆ. (ಏಜೆನ್ಸೀಸ್)

    ರೇಷನ್​ ನಿರಾಕರಿಸಿದರೆ 1967 ಸಹಾಯವಾಣಿಗೆ ದೂರು ನೀಡಿ

    VIDEO | ಆ್ಯಂಜಲೀನಾ ಜೋಲಿ ‘ಜೇನುಹುಳಗಳ ದಿನ’ ಆಚರಿಸಿದ್ದು ಹೀಗೆ !

    ನಾರದ ಲಂಚ ಪ್ರಕರಣ : ಟಿಎಂಸಿ ನಾಯಕರಿಗೆ ಗೃಹಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts