More

    ಸಮಾಜಮುಖಿ ಧರ್ಮ ಕಾರ್ಯ ಸಾಗಲಿ

    ಹುಮನಾಬಾದ್: ವಿಜಯ ದಶಮಿ ಹಬ್ಬ ಮತ್ತು ಲೋಕಕಲ್ಯಾಣಕ್ಕಾಗಿ ಶ್ರೀ ಅನ್ನಪೂರ್ಣೇಶ್ವರಿ ದೇವಿ ಮಹಿಳಾ ಸಂಸ್ಥೆಯಿAದ ಲಲಿತ ಸಹಸ್ರನಾಮ ಏರ್ಪಡಿಸಿ, ಮಾಡುತ್ತಿರುವ ಸಮಾಜಮುಖಿ ಕಾರ್ಯ ಎಂದು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಶ್ಲಾಘಿಸಿದರು.

    ಪಟ್ಟಣದ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ದೇವಿ ಮಹಿಳಾ ಟ್ರಸ್ಟ್ನಿಂದ ದಸರಾ ಉತ್ಸವ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಲಲಿತ ಸಹಸ್ರನಾಮ, ಹೋಮ ಹವನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಅನ್ನಪೂರ್ಣೇಶ್ವರಿ ದೇವಿ ಮಹಿಳಾ ಟ್ರಸ್ಟ್ ಸ್ಥಾಪಿಸಿ, ಧಾರ್ಮಿಕ ಜಾಗೃತಿ ಮೂಡಿಸುವ ಜತೆಗೆ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಟ್ರಸ್ಟ್ ಹೆಚ್ಚಿನ ರೀತಿಯಲ್ಲಿ ತೊಡಗಬೇಕು. ಸಂಸ್ಥೆ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

    ಟ್ರಸ್ಟ್ ತಾಲೂಕು ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ್ ಮಾತನಾಡಿ, ಲೋಕಕಲ್ಯಾಣ ಮತ್ತು ಸರ್ವರಿಗೂ ಸುಖಶಾಂತಿ ನೆಮ್ಮದಿ ಪ್ರಾಪಿಗೆ ಪ್ರಾರ್ಥಿಸಿ, ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಒಂಬತ್ತು ದಿನದವರೆಗೆ ವಿಶೇಷ ಪೂಜೆ, ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

    ಯೋಗಿತಾ ಸಿ. ಪಾಟೀಲ್, ಮಹಾಲಕ್ಷ್ಮೀ ಎ. ಪಾಟೀಲ್, ಉಪಾಧ್ಯಕ್ಷೆ ಶೋಭಾ ಗುರಮಿಟಕಲ್, ಕಾರ್ಯದರ್ಶಿ ಸುರೇಖಾ ವಿಭೂತಿ, ಕೋಶಾಧ್ಯಕ್ಷೆ ಸುಧಾರಾಣಿ ಪೂಜಾರಿ, ಸದಸ್ಯರಾದ ಅನಿತಾ ಚಿದ್ರಿ, ದ್ರೌಪತಿ ಶಮಶಾಬಾದೆ, ಅನಿತಾ ಅಶೋಕ, ಕಲಾವತಿ ರಾಜಪೂತ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts