More

    ‘ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ವೀಕಾರ 4-5 ದಿನ ವಿಳಂಬವಾಗಲಿದೆ’: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

    ಬೆಂಗಳೂರು: ಗೃಹಲಕ್ಷ್ಮಿ ಯೋಜನೆ(Gruha Lakshmi Scheme) ಸಂಪುಟದಲ್ಲಿ ಚರ್ಚೆಯಾಗುತ್ತಿದ್ದು, ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಇನ್ನೂ 4-5 ದಿನ ವಿಳಂಬವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar) ಹೇಳಿದ್ದಾರೆ.

    ಇದನ್ನೂ ಓದಿ: ಕೆಎಂಎಫ್​ಗೆ ಬಿಗ್​ಶಾಕ್​: ಕೇರಳ ಹಾಲು ಒಕ್ಕೂಟದಿಂದ ನಂದಿನಿ ಉತ್ಪನ್ನಗಳ‌ ಮಾರಾಟಕ್ಕೆ ವಿರೋಧ

    ಗೃಹಲಕ್ಷ್ಮಿ ಯೋಜನೆಯ ಅರ್ಜಿ ನಾಲ್ಕೈದು ದಿನ ವಿಳಂಬವಾಗಲಿದೆ. ಕಾರಣ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟರೆ ಜನಸಂದಣಿ ಹೆಚ್ಚಾಗುತ್ತದೆ. ಇದರಿಂದ ಪ್ರತಿಯೊಬ್ಬರಿಗೂ ತೊಂದರೆಯಾಗುತ್ತದೆ. ಹಾಗಾಗಿ ಕೂಡಲೇ ನಮ್ಮ ಕಾರ್ಯಕರ್ತರಿಗೆ ಹೊಸದೊಂದು ಆ್ಯಪ್(App) ಮಾಡಲು ಸೂಚಿಸಿದ್ದೇವೆ ಎಂದು ಹೇಳಿದ್ದಾರೆ.

    “ಜನಸಾಮಾನ್ಯರಿಗೆ ಅರ್ಜಿ ಹಾಕಲು ತೊಂದರೆಯಾಗಬಾರದು. ಒಂದು ಅರ್ಜಿ ಹಾಕಲು 7-8 ನಿಮಿಷಗಳ ಸಮಯ ಅಗತ್ಯವಿದೆ. ರಾಜ್ಯದಲ್ಲಿ 1.28 ಕೋಟಿ ಮಹಿಳೆಯರು ಇದ್ದಾರೆ, ಹಾಗಾಗಿ ಅರ್ಜಿ ಹಾಕಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಆ್ಯಪ್ ನಿರ್ಮಾಣ ಮಾಡಲು ಮುಂದಾಗಿದ್ದೇವೆ” ಎಂದು ಹೇಳಿದರು.

    ಇದನ್ನೂ ಓದಿ: ಹೆಂಡತಿಯನ್ನು ಮನೆಗೆ ಕಳಿಸದ ಅತ್ತೆ; ಪ್ರಾಣಬಿಟ್ಟ ಅಳಿಯ

    “ಆ್ಯಪ್ ಡಿಸೈನ್ ಮಾಡಲು ಕನಿಷ್ಠ 4-5 ದಿನ ಬೇಕು. ಈಗಾಗಲೇ ಗ್ರಾಮ ಓನ್ ಅಧಿಕಾರಿಗಳಿಗೆ ನಾವು ಟ್ರೈನಿಂಗ್ ಕೊಟ್ಟಿದ್ದೇವೆ ಮತ್ತು ಬಾಪೂಜಿ ಸೇವಾ ಕೇಂದ್ರಗಳಿಗೂ ಕೂಡ ಟ್ರೈನಿಂಗ್ ನೀಡಲಿದ್ದೇವೆ” ಎಂದು ಹೇಳಿದ್ದಾರೆ.

    VIDEO | ಪ್ರೇಯಸಿ ಜತೆ ರೆಡ್ ಹ್ಯಾಂಡ್​​​ ಆಗಿ ಸಿಕ್ಕಿಬಿದ್ದ ಪತಿಗೆ ಬಿತ್ತು ಗೂಸಾ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts