More

    VIDEO | ಕುರ್ತಿ ಕುರಿತು ಗಲಾಟೆ; ‘ಜನರು ಈ ರೀತಿ ಯೋಚಿಸುತ್ತಾರೆ’ ಎಂದು ಭಾವಿಸಿರಲಿಲ್ಲವೆಂದ ಮಹಿಳೆ

    ಪಾಕಿಸ್ತಾನ: ಪಾಕಿಸ್ತಾನದಲ್ಲಿ ಶ್ರೀಸಾಮಾನ್ಯನ ಹಕ್ಕುಗಳ ಬಗ್ಗೆ ಮಾತನಾಡುವುದು ಅರ್ಥಹೀನ. ಏಕೆಂದರೆ ಇಲ್ಲಿನ ಸಮಾಜದಲ್ಲಿ ಉಡುಗೆ-ತೊಡುಗೆ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲ. ಇದೀಗ ಡ್ರೆಸ್​​​ಗೆ ಸಂಬಂಧಿಸಿದ ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಘಟನೆಯು ಲಾಹೋರ್‌ನಲ್ಲಿ ನಡೆದಿದೆ.

    ಮಾಹಿತಿಯ ಪ್ರಕಾರ, ಲಾಹೋರ್‌ನಲ್ಲಿ ಮಹಿಳೆಯೊಬ್ಬರು ತನ್ನ ಡ್ರೆಸ್​​​ನಿಂದಾಗಿ ಪೊಲೀಸ್ ಠಾಣೆಗೆ ಹೋಗಬೇಕಾಗುತ್ತದೆ ಎಂದು ಯೋಚಿಸಿರಲಿಲ್ಲ. ಹೌದು, ಹೋಟೆಲ್​​​​​ಗೆ ತೆರಳಿದ್ದ ಮಹಿಳೆಯೊಬ್ಬರು ಅರೇಬಿಕ್ ಮುದ್ರಿತ ಉಡುಗೆ ತೊಟ್ಟಿದ್ದಕ್ಕೆ ಅಲ್ಲಿದ್ದ ಜನರು ಆಕೆಯನ್ನು ಸುತ್ತುವರೆದರು.

    ಗುಂಪೊಂದು ಇಲ್ಲಿ ಕುಳಿತಿದ್ದ ಮಹಿಳೆಯನ್ನು ಸುತ್ತುವರೆದು ಹಲ್ಲೆ ಮಾಡಲು ಪ್ರಯತ್ನಿಸಿತು. ಈ ಮಹಿಳೆ ಲಾಹೋರ್‌ನ ಅಚ್ರಾ ಬಜಾರ್‌ನಲ್ಲಿರುವ ಹೋಟೆಲ್‌ಗೆ ಆಹಾರ ಸೇವಿಸಲು ಬಂದಿದ್ದರು. ಆ ಮಹಿಳೆಯ ಡ್ರೆಸ್ ಮೇಲೆ ಅರೇಬಿಕ್ ಭಾಷೆಯಲ್ಲಿ ಪ್ರಿಂಟ್ ಇತ್ತು. ಅಲ್ಲಿದ್ದ ಕೆಲವರು ಇದನ್ನು ಕುರಾನ್‌ನ ಶ್ಲೋಕ ಎಂದು ಕರೆದು ಧರ್ಮನಿಂದೆಯ ಆರೋಪ ಮಾಡಿದರು.

    ಸ್ವಲ್ಪ ಹೊತ್ತಿನಲ್ಲೇ ಜನ ಅಲ್ಲಿ ಜಮಾಯಿಸಿದರು. ಎಲ್ಲಾ ಕಡೆಯಿಂದ ಜನ ಮಹಿಳೆಯನ್ನು ಸುತ್ತುವರಿದಿದ್ದರಿಂದ ಆಕೆ ಭಯಗೊಂಡಳು. ಕೊನೆಗೆ ಆ ಪ್ರದೇಶದ ಪೊಲೀಸ್ ಅಧಿಕಾರಿ ಎಎಸ್ಪಿ ಸೈಯದಾ ಶಹರಬಾನೊ ನಖ್ವಿ ಅವರು ಸಮಯಕ್ಕೆ ಸರಿಯಾಗಿ ಅಲ್ಲಿಗೆ ಆಗಮಿಸಿ ಮಹಿಳೆಯನ್ನು ಜನಸಂದಣಿಯಿಂದ ಹೊರತಂದು ಪೊಲೀಸ್ ಠಾಣೆಗೆ ಕರೆತಂದರು. ಇದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲಾಯಿತು.

    ಆದರೆ, ಯಾವುದೇ ತಪ್ಪಿಲ್ಲದಿದ್ದರೂ, ಮಹಿಳೆ ಈ ಘಟನೆಗಾಗಿ ಕ್ಷಮೆಯಾಚಿಸಿದ್ದಾರೆ. ಆನ್‌ಲೈನ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಮಹಿಳೆ ‘ನನಗೆ ಕುರ್ತಾ ಇಷ್ಟವಾಯಿತು ಆದ್ದರಿಂದ ನಾನು ಅದನ್ನು ಖರೀದಿಸಿದೆ. ಜನರು ಈ ರೀತಿ ಯೋಚಿಸುತ್ತಾರೆ’ ಎಂದು ಭಾವಿಸಿರಲಿಲ್ಲ.

    ಈ ಸಂಪೂರ್ಣ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಪಂಜಾಬ್ ಪೊಲೀಸರು ಆ ಘಟನೆಯಿಂದ ಮಹಿಳೆಯನ್ನು ಬಚಾವ್​​​ ಮಾಡಿದ ಎಎಸ್ಪಿಯನ್ನು ಶ್ಲಾಘಿಸಿ ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡಿದ್ದಾರೆ.

    ಏತನ್ಮಧ್ಯೆ, ಘಟನೆಯ ಬಗ್ಗೆ ಮಾತನಾಡಿದ ಮಹಿಳಾ ಪೊಲೀಸ್ ಅಧಿಕಾರಿ, ‘ಮಹಿಳೆ ತನ್ನ ಪತಿಯೊಂದಿಗೆ ಶಾಪಿಂಗ್‌ಗೆ ಹೋಗಿದ್ದರು. ಅವರು ಕುರ್ತಾವನ್ನು ಧರಿಸಿದ್ದರು, ಅದರಲ್ಲಿ ಕೆಲವು ಪದಗಳನ್ನು ಬರೆಯಲಾಗಿದೆ. ಇದನ್ನು ನೋಡಿದ ಕೆಲವರು ಅರೇಬಿಕ್ ಭಾಷೆಯ ಪ್ರಿಂಟ್​​ ಆಗಿದ್ದರಿಂದ ಕುರ್ತಾವನ್ನು ತೆಗೆಯುವಂತೆ ಕೇಳಿದರು. ಇದರಿಂದ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ತಿಳಿಸಿದರು.

    ಓರ್ವ ವ್ಯಕ್ತಿ ಈ ವಿಡಿಯೋ ಕುರಿತು ಮಾತನಾಡಿ, ‘ಲಾಹೋರ್‌ನಲ್ಲಿ ಮತ್ತೊಂದು ಡ್ರಾಮಾ. ಮಹಿಳೆ ಧರಿಸಿದ್ದ ಬಟ್ಟೆಯಲ್ಲಿ ಅರೇಬಿಕ್ ಭಾಷೆಯಲ್ಲಿ ಹೆಸರುಗಳನ್ನು ಹೊಂದಿದ್ದರಿಂದ ಜನರು ಸುತ್ತುವರೆದಿದ್ದರು. ಕೆಲವರು ಇದನ್ನು ಕುರಾನ್‌ನ ಪದ್ಯಗಳೆಂದು ಹೇಳುತ್ತಾರೆ. ವಾಸ್ತವವಾಗಿ, ಇದು ಕುರಾನ್ ಅಲ್ಲ. ಇವು ಕೇವಲ ಸರಳವಾದ ಅರೇಬಿಕ್ ಪದಗಳಾಗಿವೆ, ಅದು ಧರ್ಮದ ಬಗ್ಗೆ ಇಲ್ಲವೇ ಇಲ್ಲ. ಇದರ ಮೇಲೆ ಏನು ಬರೆದರೂ ಅದು ಸುಂದರವಾಗಿರುತ್ತದೆ. ಇದು ಅರೇಬಿಕ್ ಪದ. ದೇಶಾದ್ಯಂತ ಧಾರ್ಮಿಕ ಕಾರ್ಡ್‌ಗಳ ಟ್ರೆಂಡ್ ಹೆಚ್ಚುತ್ತಿದೆ. ದೇಶವನ್ನು ನುಂಗಿ ಹಾಕುತ್ತಿದೆ. ಇಂತಹ ವಿಷಯಗಳನ್ನು ಯಾರು ಪ್ರಚಾರ ಮಾಡುತ್ತಿದ್ದಾರೆ ಎಂಬುದೇ ಪ್ರಶ್ನೆ’ ಎಂದು ಬರೆದುಕೊಂಡಿದ್ದಾರೆ.

    ಬೆಂಗಳೂರು: ವೃದ್ಧೆಯನ್ನು ಬರ್ಬರವಾಗಿ ಹತ್ಯೆ ಮಾಡಿ ಡ್ರಮ್​​​​​​​ನಲ್ಲಿ ತುಂಬಿ ಎಸೆದ ದುಷ್ಕರ್ಮಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts