More

    ಲಡಾಖ್​ ಬಿಕ್ಕಟ್ಟಿನ ಕುರಿತು ಜೂ.6ಕ್ಕೆ ಮಿಲಿಟರಿ ಅಧಿಕಾರಿಗಳ ಮಾತುಕತೆ

    ನವದೆಹಲಿ: ಲಡಾಖ್​ ಬಳಿಯ ವಾಸ್ತವ ಗಡಿರೇಖೆಗೆ (ಎಲ್​ಎಸಿ) ಚೀನಾ ಬಹುದೊಡ್ಡ ಸೇನಾಪಡೆಯನ್ನು ರವಾನಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಒಪ್ಪಿಕೊಂಡಿದ್ದಾರೆ.

    ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾತುಕತೆ ಮೂಲಕ ಪ್ರಸಕ್ತ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಲಾಗುವುದು. ಈಗಾಗಲೆ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳು ಜಾರಿಯಲ್ಲಿವೆ. ಉಭಯ ರಾಷ್ಟ್ರಗಳ ಮಿಲಿಟರಿ ಪಡೆಗಳ ಅಧಿಕಾರಿಗಳು ಜೂ.6ರಂದು ಸಭೆ ನಡೆಸಲಿದ್ದಾರೆ ಎಂದು ಹೇಳಿದರು.

    ಎಲ್​ಎಸಿ ಬಳಿ ಚೀನಾದ ಯೋಧರ ಜಮಾವಣೆಗೆ ನಿರ್ದಿಷ್ಟ ಕಾರಣವನ್ನು ಆರೋಪಿಸಲು ನಿರಾಕರಿಸಿದ ಅವರು, ಮಾತುಕತೆಗಳು ಜಾರಿಯಲ್ಲಿ ಇರುವ ಸಂದರ್ಭದಲ್ಲಿ ಈ ಬಗ್ಗೆ ಶಂಕೆ ವ್ಯಕ್ತಪಡಿಸಿ, ವದಂತಿಗಳನ್ನು ಹಬ್ಬಿಸುವುದು, ಇಲ್ಲದ ಕಾರಣಗಳನ್ನು ಆರೋಪಿಸುವುದು ತಪ್ಪಾಗುತ್ತದೆ ಎಂದು ತಿಳಿಸಿದರು.

    ಇದನ್ನೂ ಓದಿ: ಲಡಾಖ್​ನಲ್ಲಿ ಮುಂದುವರಿದ ಉದ್ವಿಗ್ನ ಪರಿಸ್ಥಿತಿ, ಬಿಕ್ಕಟ್ಟು ಪರಿಹಾರದ ಲಕ್ಷಣಗಳು ಇಲ್ಲ

    ಚೀನಾ ಜಮಾವಣೆ ಮಾಡಿರುವ ಪ್ರಮಾಣದ ಯೋಧರನ್ನು ಭಾರತ ಕೂಡ ಎಲ್​ಎಸಿ ಬಳಿಗೆ ರವಾನಿಸಿದೆ. ಭಾರತದ ಆತ್ಮಾಭಿಮಾನಕ್ಕೆ ಯಾರೊಬ್ಬರೂ ಧಕ್ಕೆಯನ್ನುಂಟು ಮಾಡದಂತೆ ಎಚ್ಚರವಹಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

    ಚೀನಿ ಯೋಧರು ಭಾರತೀಯ ಪ್ರದೇಶಗಳಿಗೆ ಅತಿಕ್ರಮಣ ಮಾಡಿರುವ ವಿಷಯವಾಗಿ ರಾಜನಾಥ್​ ಸಿಂಗ್​ ಏನೊಂದು ಹೇಳದಿದ್ದರೂ, ಗಲ್ವಾನ್​ ಮತ್ತು ಪ್ಯಾಂಗಾಂಗ್​ ತ್ಸೊ ಸರೋವರದ ಬಳಿ ಭಾರತಕ್ಕೆ ಸೇರಿದ ಪ್ರದೇಶಗಳನ್ನು ಅತಿಕ್ರಮಿಸಿರುವುದು ಉಪಗ್ರಹ ಚಿತ್ರಗಳಿಂದ ಸ್ಪಷ್ಟವಾಗಿದೆ.

    ಚೀನಾ ನೆರೆ ರಾಷ್ಟ್ರವಷ್ಟೇ: ಚೀನಾವನ್ನು ಶತ್ರು ರಾಷ್ಟ್ರ ಎಂದು ಸಂಬೋಧಿಸುವುದನ್ನು ವಿರೋಧಿಸಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಚೀನಾ ಒಂದು ನೆರೆರಾಷ್ಟ್ರವಷ್ಟೇ. ಪಾಕಿಸ್ತಾನ ಕೂಡ ನೆರೆರಾಷ್ಟ್ರವಷ್ಟೇ. ಆದರೆ, ಯಾರೇ ಆದರೂ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆಯನ್ನುಂಟು ಮಾಡಲು ಪ್ರಯತ್ನಿಸಿದರೆ, ಸೂಕ್ತ ರೀತಿಯಲ್ಲಿ ಉತ್ತರ ನೀಡಲಾಗುವುದು ಎಂದು ಹೇಳಿದರು.

    ಕರೊನಾ ಹಿನ್ನೆಲೆ: ಚಟ್ಟ ಕಟ್ಟಲೂ ಬಂತು ಆನ್​ಲೈನ್​ ಸೇವೆ, ಕುಳಿತಲ್ಲೇ ಎಲ್ಲ ಲಭ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts