More

    ಸರ್ಕಾರದ ಗ್ಯಾರಂಟಿಗಳಿಂದ ಈ ಬಾರಿ ಅನುದಾನ ಕೊರತೆ

    ಕೊಪ್ಪ: ಗ್ಯಾರಂಟಿ ಚಿಯೋಜನೆಗಳಿಂದ ಈ ವರ್ಷ ಅಭಿವೃದ್ಧಿ ಕೆಲಸಗಳಿಗೆ ಅನುದಾನದ ಕೊರತೆಯಾಗಲಿದ್ದು, ಮುಂದಿನ ವಷರ್ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಶಾಸಕ ಟಿ.ಡಿ ರಾಜೇಗೌಡ ಹೇಳಿದರು.
    ಚಾವಲ್ಮನೆ ಗ್ರಾಪಂ ವ್ಯಾಪ್ತಿ ಕಮ್ಮರಡಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಜನ ಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮಳೆಗಾಲ ಮುಗಿದ ತಕ್ಷಣ ರಸ್ತೆ ಗುಂಡಿಮುಚ್ಚಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಗ್ರಾಪಂಗಳಿಗೆ ಹಣ ಮೀಸಲಿಡಲಾಗಿದೆ. ರಾಜ್ಯಸಭಾ ಸದಸ್ಯರೂ ಅನುದಾನ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
    ಮನೆ ಮಂಜೂರಾತಿ, ನಿರ್ಮಾಣವಾದ ಮನೆಗಳಿಗೆ ಹಕ್ಕುಪತ್ರ, ಒತ್ತುವರಿ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ಮುಂತಾದ ದೊಡ್ಡ ಸವಾಲುಗಳಿವೆ. ಅರಣ್ಯ ಇಲಾಖೆ ಅವೈಜ್ಞಾನಿಕವಾಗಿ ಕಂದಾಯ ಭೂಮಿ ಮತ್ತು ಸೊಪ್ಪಿನಬೆಟ್ಟ ಪ್ರದೇಶವನ್ನು 4(1) ಅಧಿಸೂಚನೆ ಮಾಡಿರುವುದರಿಂದ ಸಮಸ್ಯೆಯಾಗಿದೆ. ಬಡವರು ಮನೆ ಕಟ್ಟಿಕೊಳ್ಳಲು, ಕೃಷಿಗಾಗಿ ಈ ಹಿಂದೆಯೇ ಭೂ ಒತ್ತುವರಿ ಮಾಡಿದ್ದರೆ ಅದನ್ನು ತೆರವು ಮಾಡಬೇಡಿ ಮಲೆನಾಡಿನ ಜನರಿಗೆ ಬದುಕಿನಷ್ಟೇ ಕಾಡು ಮುಖ್ಯ. ಹೊಸದಾಗಿ ಶ್ರೀ ಮಂತರು ಒತ್ತುವರಿ ಮಾಡಿದ್ದರೆ, ಜಂಟಿ ಸರ್ವೇ ಕ್ರಮ ಕೈಗೊಳ್ಳುವಂತೆ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
    ಜಾನುವಾರುಗಳ ಚಿಕಿತ್ಸೆಗೆ ಮೊಬೈಲ್ ಹಾಸ್ಟಿಟಲ್ ಸೌಲಭ್ಯವಿದ್ದು, ರೈತರು ಕರೆ ಮಾಡಿದ ಕೂಡಲೇ ಸ್ಪಂದಿಸಿ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕು ಎಂದು ಪಶು ವೈದ್ಯಕೀಯ ಆಸ್ಪತ್ರೆ ವೈದ್ಯರಿಗೆ ಸೂಚಿಸಿದರು.
    ತಾಲೂಕಿನಲ್ಲಿ ಅಡಕೆಗೆ ಎಲೆಚುಕ್ಕಿ ರೋಗ ವ್ಯಾಪಿಸುತ್ತಿದ್ದು, ಸೂಕ್ತ ಔಷಧ ಕೊರತೆ ಇದೆ. ಅಡಕೆ ಬೆಳೆಗಾರರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸರ್ಕಾರ ಇವರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಔಷಧವನ್ನು ಬುಧವಾರದಿಂದ ವಿತರಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಅಶೋಕ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts