More

    ದಿನಸಿ ಕಿಟ್​ಗೆ ಮುಗಿಬಿದ್ದ ಕಾರ್ವಿುಕರು

    ಶಿಗ್ಗಾಂವಿ: ಪಟ್ಟಣದ ಹೊರವಲಯದ ಭಾರತಿ ನಗರದಲ್ಲಿನ ವಾಲ್ಮೀಕಿ ಭವನದಲ್ಲಿ ಕಾರ್ವಿುಕ ಇಲಾಖೆಯಿಂದ ವಿತರಿಸುತ್ತಿರುವ ಆಹಾರ ಸಾಮಗ್ರಿ ಕಿಟ್ ಪಡೆಯಲು ಕಾರ್ವಿುಕರು ಕರೊನಾ ಸೋಂಕು ಲೆಕ್ಕಿಸದೆ ಭಾನುವಾರ ಮುಗಿಬಿದ್ದಿದ್ದರು.

    ನೋಂದಾಯಿತ 2500 ಕಾರ್ವಿುಕರಿಗೆ ಕಿಟ್ ವಿತರಿಸಲು ಕಾರ್ವಿುಕ ಇಲಾಖೆ ಅಧಿಕಾರಿಗಳು ಮುಂದಾಗಿದ್ದರು. ಆದರೆ, ವಿತರಣೆ ವೇಳೆ ಕೋವಿಡ್ ಮಾರ್ಗಸೂಚಿ ಪಾಲನೆಯಾಗಲಿಲ್ಲ. ಕರೊನಾ ಮೂರನೇ ಅಲೆಯ ಭೀತಿ ಸಂದರ್ಭದಲ್ಲಿಯೇ ಸಾವಿರಾರು ಜನ, ಪರಸ್ಪರ ಅಂತರ ಕಾಪಾಡದೆ, ಮಾಸ್ಕ್ ಧರಿಸದೆ ಒಂದೆಡೆ ಸೇರಿಸಿದ್ದು ಆತಂಕಕ್ಕೆ ಕಾರಣವಾಯಿತು. ಕಿಟ್ ಪಡೆಯಲು ಬೆಳಗ್ಗೆ 6 ಗಂಟೆಯ ಹೊತ್ತಿಗೆ ಕಾರ್ವಿುಕರು ಜಮಾಯಿಸಿದ್ದರು.

    ಕಾರ್ವಿುಕ ಇಲಾಖೆಯು ಒಂದೇ ದಿನ ಮೂರು ಸಾವಿರ ಕಾರ್ವಿುಕರಿಗೆ ಕಿಟ್ ವಿತರಿಸಲು ಮುಂದಾಗಿತ್ತು. ಇಷ್ಟು ಜನ ಒಂದೇ ದಿನ ಸೇರಿಸುವ ಬದಲಿಗೆ ಪಟ್ಟಣದ ವಾರ್ಡ್​ವಾರು ಸಮಯ ನಿಗದಿಪಡಿಸಿ ವಿತರಣೆ ಮಾಡಿದ್ದರೆ, ಈ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ. ಕಾರ್ವಿುಕ ಇಲಾಖೆ ಅಧಿಕಾರಿಗಳು ಕೋವಿಡ್ ಮಾರ್ಗಸೂಚಿ ಪಾಲಿಸದಿರುವುದು ವಿಪರ್ಯಾಸ. ಕೋವಿಡ್ ಹತೋಟಿಗೆ ತರಲು ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ಶ್ರಮ ವ್ಯರ್ಥವಾಯಿತು. ಇದಕ್ಕೆ ಕಾರ್ವಿುಕ ಇಲಾಖೆ ನೇರ ಹೂಣೆ ಎಂದು ಸ್ಥಳೀಯರು ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts